ಕಿಬಿತು ಮಿಲಿಟರಿ ಪ್ರದೇಶಕ್ಕೆ ಜ.ಬಿಪಿನ್ ರಾವತ್ ಹೆಸರು
Team Udayavani, Sep 10, 2022, 9:45 PM IST
ಇಟಾನಗರ: ಚೀನ ಗಡಿಯ ನಿಯಂತ್ರಣ ರೇಖೆ ಸಮೀಪ,ಅರುಣಾಚಲ ಪ್ರದೇಶದ ಲೋಹಿತ್ ಕಣಿವೆಯ ದಡದಲ್ಲಿರುವ ಆಯಕಟ್ಟಿನ ಕಿಬಿತು ಮಿಲಿಟರಿ ಪ್ರದೇಶಕ್ಕೆ ಭಾರತದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ದಿ. ಜ.ಬಿಪಿನ್ ರಾವತ್ ಹೆಸರನ್ನು ಇರಿಸಲಾಗಿದೆ.
ಕರ್ನಲ್ ಆಗಿದ್ದ ರಾವತ್ ಅವರು 1999ರಿಂದ 2000 ರವರೆಗೆ ಕಿಬಿತುನಲ್ಲಿ ಗೂರ್ಖಾ ರೈಫಲ್ಸ್‌ನ ಬೆಟಾಲಿಯನ್ 5/11ರ ಕಮಾಂಡರ್ ಆಗಿದ್ದರು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಲು ಅಪಾರ ಕೊಡುಗೆ ನೀಡಿದ್ದರು.
ಆಯಕಟ್ಟಿನ ಕಿಬಿತು ಪ್ರದೇಶದ ನಿಯಂತ್ರಣ ರೇಖೆಯ ಭದ್ರತೆಯ ಜವಾಬ್ದಾರಿ ಸೇನೆಯದ್ದಾಗಿದೆ. ಇದರ ಎದುರಲ್ಲೇ ಚೀನ ಪೀಪಲ್ಸ್ ಲಿಬರೇಶನ್ ಆರ್ಮಿಯ ರೀಮಾ ಮಿಲಿಟರಿ ನೆಲೆ ಇದೆ.