
Cardiologist: ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ
Team Udayavani, Jun 7, 2023, 1:04 PM IST

ಗುಜರಾತ್: ಸಾವು ಯಾವ ರೂಪದಲ್ಲಿ, ಯಾವ ಘಳಿಗೆಯಲ್ಲಿ ಬರುತ್ತದೆ ಎನ್ನುವುದನ್ನು ಹೇಳಲಾಗದು. ಹೃದ್ರೋಗ ತಜ್ಞರೊಬ್ಬರು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಗುಜರಾತ್ ನ ಪ್ರಮುಖ ಹೃದ್ರೋಗ ತಜ್ಞನಾಗಿ ಗುರುತಿಸಿಕೊಂಡಿದ್ದ ಗೌರವ್ ಗಾಂಧಿ (41) ಮಂಗಳವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ಸೋಮವಾರ (ಜೂ.5 ರಂದು) ಸಾಮಾನ್ಯ ದಿನದಂತೆ ಆಸ್ಪತ್ರೆಗೆ ತೆರಳಿ, ರೋಗಿಗಳನ್ನು ಪರೀಕ್ಷೆ ಮಾಡಿದ್ದಾರೆ. ರಾತ್ರಿ ಮನೆಗೆ ಬಂದ ಬಳಿಕ ಊಟ ಮಾಡಿ ಮಲಗಿದ್ದಾರೆ. ಮಂಗಳವಾರ ಮುಂಜಾನೆ 6 ಗಂಟೆಯ ಹೊತ್ತಿಗೆ ಮನೆಯವರು ಅವರನ್ನು ಎಬ್ಬಿಸಲು ಹೋಗುವಾಗ ಗೌರವ್ ಪ್ರಜ್ಞೆ ತಪ್ಪಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ʼಆಜ್ ತಕ್ʼ ವರದಿ ತಿಳಿಸಿದೆ.
ಇದನ್ನೂ ಓದಿ: Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು
ಡಾ. ಗಾಂಧಿಯವರು ತಮ್ಮ ವೈದ್ಯಕೀಯ ಪದವಿಯನ್ನು ಜಾಮ್‌ನಗರದಿಂದ ಪೂರ್ಣಗೊಳಿಸಿ, ಅಹಮದಾಬಾದ್‌ನಲ್ಲಿ ಹೃದ್ರೋಗ ಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನವನ್ನು ಮಾಡಿದರು. ನಂತರ ಅವರು ಅಭ್ಯಾಸ ಮಾಡಲು ತಮ್ಮ ಊರಿಗೆ ಮರಳಿದರು. ಅವರು ಫೇಸ್‌ಬುಕ್‌ನಲ್ಲಿ ‘ಹಾಲ್ಟ್ ಹಾರ್ಟ್ ಅಟ್ಯಾಕ್’ ಅಭಿಯಾನದಲ್ಲಿ ಗುರುತಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.
ಅವರು ವೈದ್ಯಕೀಯ ವೃತ್ತಿಜೀವನದ ಅವಧಿಯಲ್ಲಿ 16,000 ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Sukhpal Singh Khaira: ಡ್ರಗ್ಸ್ ಪ್ರಕರಣ.. ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

Gudibande: ಬುದ್ದಿ ಹೇಳಿದ್ದಕ್ಕೆ ಪೊಲೀಸರ ಬೈಕ್ ಗೆ ಬೆಂಕಿ ಇಟ್ಟ ಭೂಪ

Daily Horoscope: ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ, ಸಾಹಿತ್ಯ ಸಾಧಕರಿಗೆ ಗೌರವ

Examಕರಾವಳಿಯ ಕೈ ತಪ್ಪಿದ ಕೆ-ಸೆಟ್ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ