ಕೊಲೆಗೆ ಕಾರಣವಾಯ್ತು 20 ರೂ. ಇಡ್ಲಿ: ತಳ್ಳುಗಾಡಿ ವ್ಯಾಪಾರಿಯ ಕೊಲೆಗೈದ ಮೂವರು
Team Udayavani, Feb 6, 2021, 4:42 PM IST
ಮುಂಬೈ: ಕೆಲವೊಮ್ಮೆ ಸಣ್ಣ ಪುಟ್ಟ ಕಾರಣಗಳಿಗೂ ಕೊಲೆಗಳು ನಡೆಯುತ್ತದೆ. ಕೇವಲ 20 ರೂ ವಿಚಾರಕ್ಕೆ ವ್ಯಕ್ತಿಯ ಕೊಲೆಯಾಗುತ್ತದೆ ಎಂದರೆ ನಂಬುವುದು ಕಷ್ಟ. ಆದರೆ ಇಂತಹ ಘಟನೆ ನಡೆದಿದ್ದು ಮಹಾರಾಷ್ಟ್ರದ ಥಾಣೆಯಲ್ಲಿ.
ಥಾಣೆಯಲ್ಲಿ ತಳ್ಳು ಗಾಡಿ ವ್ಯಾಪಾರಿಯೊಬ್ಬನನ್ನು ಕೊಲೆ ಮಾಡಲಾಗಿದೆ. 26 ವರ್ಷದ ವೀರೇಂದ್ರ ಯಾದವ್ ಎಂಬಾತನೇ ಕೊಲೆಯಾದ ಯುವಕ.
ಇದನ್ನೂ ಓದಿ: ಹಾಲಿನ ಪ್ಯಾಕೆಟ್ ಗಳು ಈತನ ಟಾರ್ಗೆಟ್: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು
ವೀರೆಂದ್ರ ಯಾದವ್ ಇಲ್ಲಿನ ಮೀರಾ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಇಡ್ಲಿ ಉಪಹಾರದ ವ್ಯಾಪಾರ ಮಾಡುತ್ತಿದ್ದ. ಶುಕ್ರವಾರ ಬೆಳಗ್ಗೆ ಆತನ ಗಾಡಿಯ ಬಳಿ ಮೂವರು ತಿಂಡಿ ತಿನ್ನಲೆಂದು ಬಂದಿದ್ದರು. ಆಗ ಅವರಿಗೆ ‘ನೀವು ನನಗೆ 20 ರೂಪಾಯಿ ಬಾಕಿ ಕೊಡುವುದಿದೆ’ ಎಂದು ವೀರೇಂದ್ರ ನೆನಪಿಸಿದ್ದಾನೆ. ಇದೇ ಕಾರಣಕ್ಕೆ ಜಗಳ ಆರಂಭವಾಗಿದೆ.
ಮಾತುಕತೆ ಹೆಚ್ಚಾಗಿ ಕೈಕೈ ಮಿಲಾಯಿಸಲಾಗಿದೆ. ಈ ವೇಳೆ ಒಬ್ಬಾತ ವಿರೇಂದ್ರ ಯಾದವ್ ನನ್ನು ತಳ್ಳಿದ್ದಾನೆ. ಆ ರಭಸಕ್ಕೆ ಕಲ್ಲಿನ ಮೇಲೆ ಬಿದ್ದ ವೀರೆಂದ್ರ ನ ತಲೆಗೆ ಗಾಯವಾಗಿತ್ತು. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಮಾಡಿದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮೂವರು ವ್ಯಕ್ತಿಗಳ ವಿರುದ್ಧ ನಯಾ ನಗರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’