ED ; ಲಾಲು ಪ್ರಸಾದ್ ಕುಟುಂಬದ ಸಂಸ್ಥೆಗಳ 6 ಕೋಟಿ ರೂ. ಆಸ್ತಿ ಜಪ್ತಿ
Team Udayavani, Jul 31, 2023, 7:52 PM IST
ಪಾಟ್ನಾ: ಆಪಾದಿತ ರೈಲ್ವೆ ಉದ್ಯೋಗ ಭೂ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಅವರ ಕುಟುಂಬ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ (ಜುಲೈ 31) 6 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಈಗಾಗಲೇ ಶಿಕ್ಷೆ ಅನುಭವಿದ್ದು, ಲ್ಯಾಂಡ್ ಫಾರ್ ರೈಲ್ವೇ ಜಾಬ್ಸ್ ಹಗರಣ ಪ್ರಕರಣದಲ್ಲೂ ಇಡಿ ಅವರ ವಿರುದ್ಧ ದೊಡ್ಡ ಕ್ರಮ ಕೈಗೊಳ್ಳುತ್ತಿದೆ.
ಆಸ್ತಿಗಳನ್ನು ಲಗತ್ತಿಸಲು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಸಂಸ್ಥೆಯು ತಾತ್ಕಾಲಿಕ ಆದೇಶವನ್ನು ಹೊರಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸುಮಾರು 6 ಕೋಟಿ 2 ಲಕ್ಷ ರೂಪಾಯಿ ಮೌಲ್ಯದ ಎರಡು ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ . ಇದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಮತ್ತು ಪಾಟ್ನಾದಲ್ಲಿನ ಆಸ್ತಿಯನ್ನು ಒಳಗೊಂಡಿದೆ.