ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲಿ, ನೀವು ನಿಮ್ಮ ಬಿಕಿನಿ ಧರಿಸಿ…; ಓವೈಸಿ
ನಾವು ನಿಜವಾಗಿಯೂ ನಮ್ಮ ಹುಡುಗಿಯರನ್ನು ಒತ್ತಾಯಿಸುತ್ತಿದ್ದೇವೆಯೇ?
Team Udayavani, Oct 14, 2022, 3:59 PM IST
ಹೈದರಾಬಾದ್: ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ವಿಭಜಿತ ತೀರ್ಪಿಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ”ಮುಸ್ಲಿಂ ಹುಡುಗಿಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಜ್ಞಾನವಾಪಿ ಮಸೀದಿ ಪ್ರಕರಣ : ಕಾರ್ಬನ್ ಡೇಟಿಂಗ್ ಗೆ ಕೋರ್ಟ್ ನಕಾರ
ಗೋಲ್ಕೊಂಡಾ ಕೋಟೆಯಲ್ಲಿ ನಡೆದ ಸಭೆಯಲ್ಲಿ ಸಂವಾದದ ಸಂದರ್ಭದಲ್ಲಿ, ಹಿಜಾಬ್ ನಿಷೇಧದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಓವೈಸಿ, “ಮುಸ್ಲಿಂ ಮಹಿಳೆಯರು ತಮ್ಮ ತಲೆಯನ್ನು ಮುಚ್ಚಲು ಬಯಸಿದರೆ, ಅವರು ತಮ್ಮ ಬುದ್ಧಿಯನ್ನು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಅರ್ಥವಲ್ಲ’ ಎಂದು ಹೇಳಿದ್ದಾರೆ.
“ಮುಸ್ಲಿಮರು ಚಿಕ್ಕ ಮಕ್ಕಳಿಗೆ ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ನಾವು ನಿಜವಾಗಿಯೂ ನಮ್ಮ ಹುಡುಗಿಯರನ್ನು ಒತ್ತಾಯಿಸುತ್ತಿದ್ದೇವೆಯೇ? ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಬಿಡಿ, ನೀವು ಬಯಸಿದರೆ ನಿಮ್ಮ ಬಿಕಿನಿಯನ್ನು ಧರಿಸಿ…” ಎಂದು ಎಐಎಂಐಎಂ ನಾಯಕ ಕಿಡಿ ಕಾರಿದ್ದಾರೆ.
ಹಿಜಾಬ್ ಮುಸ್ಲಿಮರು ಹಿಂದುಳಿದಿರುವುದನ್ನು ತೋರಿಸುತ್ತದೆಯೇ ? ಮುಸ್ಲಿಂ ಮಹಿಳೆಯರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸನಾತನ ಸಂಸ್ಥೆ ನಿಷೇಧಿತ …ಸಂಘಟನೆ ಅಲ್ಲ: ಬಾಂಬೆ ಹೈಕೋರ್ಟ್, ಏನಿದು ಪ್ರಕರಣ?
ಅಪಘಾತದಲ್ಲಿ ಪೇದೆ ಮೃತ್ಯು: 5 ವರ್ಷದ ಮಗನನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನೇಮಿಸಿದ ಇಲಾಖೆ
ರಾಹುಲ್ ಅನರ್ಹತೆಗೆ ಪ್ರತ್ಯುತ್ತರವಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ: ಪ್ರಿಯಾಂಕಾ
15 ದಿನಗಳೊಳಗೆ ಶರಣಾಗಿ: ಸುಪ್ರೀಂ ಕೋರ್ಟ್ ನಿರ್ದೇಶನ
ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಕೆಟ್ ಚಕ್ಕರ್…
MUST WATCH
ಹೊಸ ಸೇರ್ಪಡೆ
‘ಆರಾಮ್ ಅರವಿಂದ್ ಸ್ವಾಮಿ‘ ಫಸ್ಟ್ ಲುಕ್ ರಿಲೀಸ್
ಬೆಳೆ ಪರಿಹಾರ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ರಾಜ್ಯ ರೈತ ಸಂಘದಿಂದ ಧರಣಿ
ಬಾತ್ ರೂಮ್ ನಲ್ಲಿ ಏಕಾಏಕಿ ಕುಸಿದು ಬಿದ್ದು ಖ್ಯಾತ ನಟಿ ನೀಲು ಕೊಹ್ಲಿ ಅವರ ಪತಿ ಮೃತ್ಯು
Health: ಒಂದು ಬಾಟಲ್ ಬಿಯರ್/ 1 ಪೆಗ್ ಕುಡಿಯೋದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮ ಗೊತ್ತಾ?
ಪ್ರಧಾನಿ ಮೋದಿ ಮತ್ತು ಬಿಜೆಪಿಯ ನಿರಂಕುಶಾಧಿಪತ್ಯ ಸಾಬೀತು: ಬಿ.ಕೆ. ಹರಿಪ್ರಸಾದ್