ಮೋದಿ ಸಾಧನೆಯ ಹಿಂದಿನ ಸ್ಪೂರ್ತಿ: ಹೀರಾಬೆನ್ ಬಗೆಗಿನ ಅಪರೂಪದ ಮಾಹಿತಿ ಇಲ್ಲಿದೆ


Team Udayavani, Dec 30, 2022, 10:26 AM IST

ಮೋದಿ ಸಾಧನೆಯ ಹಿಂದಿನ ಸ್ಪೂರ್ತಿ: ಹೀರಾಬೆನ್ ಬಗೆಗಿನ ಅಪರೂಪದ ಮಾಹಿತಿ ಇಲ್ಲಿದೆ

ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಶುಕ್ರವಾರ ನಿಧನರಾದರು. ಎರಡು ದಿನಗಳ ಹಿಂದೆ ಅವರು ಅನಾರೋಗ್ಯದ ಕಾರಣದಿಂದ ಅಹಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಇಹಲೋಕ ತ್ಯಜಿಸಿದರು.

ತಾಯಿಯ ನಿಧನದಿಂದ ಭಾವುಕರಾದ ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ” ಶತಮಾನದ ದೀಪ ಪರಮಾತ್ಮನ ಪಾದದಲ್ಲಿ ಲೀನವಾಗಿದೆ” ಎಂದು ಬರೆದು ಕೊಂಡಿದ್ದಾರೆ.

1922 ರ ಜೂನ್ 18 ರಂದು ಜನಿಸಿದ ಹೀರಾಬೆನ್ ಮೋದಿ ಅವರ ಹುಟ್ಟೂರು ಗುಜರಾತ್‌ ನ ಮೆಹ್ಸಾನಾದ ವಡ್ನಗರ. ಅವರಿಗೆ ನರೇಂದ್ರ ಮೋದಿ, ಪಂಕಜ್ ಮೋದಿ, ಸೋಮಾ ಮೋದಿ, ಅಮೃತ್ ಮೋದಿ ಮತ್ತು ಪ್ರಹ್ಲಾದ್ ಮೋದಿ ಎಂಬ ಐವರು ಗಂಡು ಮಕ್ಕಳು ಮತ್ತು ಒಬ್ಬರು ಪುತ್ರಿ ವಸಂತಿಬೆನ್ ಹಸ್ಮುಖಲಾಲ್ ಮೋದಿ. ಹೀರಾಬೆನ್ ಮೋದಿ ಅವರು ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ಸಮೀಪದ ರೇಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು.

ಈ ವರ್ಷದ ಅವರ ಜನ್ಮದಿನದಂದು ಪ್ರಧಾನಮಂತ್ರಿ ಮೋದಿಯವರು ತಮ್ಮ ‘ತಾಯಿ’ ಎಂಬ ಶೀರ್ಷಿಕೆಯ ಬ್ಲಾಗ್‌ ನಲ್ಲಿ ಹಲವು ವಿಚಾರಗಳನ್ನು ಬರೆದಿದ್ದಾರೆ, “ತಾಯಿ – ಕೇವಲ ನಿಘಂಟಿನಲ್ಲಿರುವ ಒಂದು ಪದವಲ್ಲ. ತಾಯಿಯು ಕೇವಲ ತನ್ನ ಮಕ್ಕಳಿಗೆ ಜನ್ಮ ನೀಡುವುದಲ್ಲ, ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ಆದ್ದರಿಂದ, ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ ಎಂದು ಬರೆದಿದ್ದರು.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಗಂಭೀರವಾಗಿ ಗಾಯಗೊಂಡ ಕ್ರಿಕೆಟರ್ ರಿಷಭ್ ಪಂತ್

“ನನ್ನ ತಾಯಿ ಗುಜರಾತ್‌ ನ ಮೆಹ್ಸಾನಾದ ವಿಸ್‌ ನಗರದಲ್ಲಿ ಜನಿಸಿದರು, ಇದು ನನ್ನ ಹುಟ್ಟೂರಾದ ವಡ್‌ ನಗರಕ್ಕೆ ಸಾಕಷ್ಟು ಹತ್ತಿರದಲ್ಲಿದೆ. ಅವರಿಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ಇಳಿವಯಸ್ಸಿನಲ್ಲಿ, ಅವರು ನನ್ನ ಅಜ್ಜಿಯನ್ನು ಸ್ಪ್ಯಾನಿಷ್ ಜ್ವರದಿಂದ ಕಳೆದುಕೊಂಡರು. ಅಮ್ಮನಿಲ್ಲದೆ ಬಾಲ್ಯವೆಲ್ಲ ಕಳೆದರು. ಶಾಲೆಗೆ ಹೋಗಿ ಓದಲು ಮತ್ತು ಬರೆಯಲು ಕಲಿಯಲು ಅವರಿಗೆ ಸಾಧ್ಯವಾಗಲಿಲ್ಲ. ಅವಳ ಬಾಲ್ಯವು ಬಡತನದಿಂದ ಕೂಡಿತ್ತು” ಎಂದು ಅವರು ಬರೆದಿದ್ದಾರೆ.

ಅವರು ವಡ್ನಗರದಲ್ಲಿರುವ ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿರುವ ಪುಟ್ಟ ಮನೆಯನ್ನು ನೆನಪಿಸಿಕೊಂಡಿದ್ದರು. ತಾಯಿ ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದರು, ಅಲ್ಲದೆ ಮನೆಯ ಆದಾಯಕ್ಕಾಗಿ ಆಕೆ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಔಪಚಾರಿಕವಾಗಿ ಶಿಕ್ಷಣ ಪಡೆಯದೆ ಕಲಿಯಲು ಸಾಧ್ಯ ಎಂದು ತಾಯಿ ನನಗೆ ಮನವರಿಕೆ ಮಾಡಿದರು. ಅವರ ಆಲೋಚನಾ ಕ್ರಮ ಮತ್ತು ದೂರದೃಷ್ಟಿಯ ಚಿಂತನೆಯು ಯಾವಾಗಲೂ ನನ್ನನ್ನು ಆಶ್ಚರ್ಯಗೊಳಿಸುತ್ತದೆ” ಎಂದು ಅವರು ಹೇಳಿದರು.

ತಮ್ಮ ತಾಯಿಯ ಅತ್ಯಂತ ಸರಳ ಜೀವನಶೈಲಿಯನ್ನು ಪ್ರತಿಬಿಂಬಿಸಿದ ಪ್ರಧಾನಿ ಮೋದಿ, ತಮ್ಮ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಬರೆದಿದ್ದಾರೆ. “ಅವಳು ಯಾವುದೇ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ, ಅವಳಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವಳು ತನ್ನ ಚಿಕ್ಕ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನಶೈಲಿಯನ್ನು ಮುಂದುವರಿಸುತ್ತಿದ್ದಾಳೆ”ಎಂದು ತಮ್ಮ ಬ್ಲಾಗ್ ಗಳಲ್ಲಿ ಬರೆದುಕೊಂಡಿದ್ದಾರೆ.

ತಾಯಿ ತನ್ನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಘಟನೆ ಬಗ್ಗೆ ಮೋದಿ ಬರೆದುಕೊಂಡಿದ್ದಾರೆ. ಒಮ್ಮೆ, ಅಹಮದಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ, ಏಕತಾ ಯಾತ್ರೆಯನ್ನು ಮುಗಿಸಿ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಶ್ರೀನಗರದಿಂದ ಹಿಂದಿರುಗಿದ ನಂತರ ಅವಳು ಹಣೆಗೆ ತಿಲಕವನ್ನು ಹಚ್ಚಿದ್ದರು. ಇನ್ನೊಂದು ನಿದರ್ಶನವೆಂದರೆ 2001 ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂದು ಮೋದಿ ಬರೆದಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.