ಮದ್ಯ ದುಬಾರಿ ; ಜಗನ್‌ ಆಡಳಿತದಿಂದ ಶೇ.75, ಕೇಜ್ರಿ ಸರಕಾರದಿಂದ ಶೇ.70 ಬೆಲೆ ಹೆಚ್ಚಳ

ದಿಲ್ಲಿ, ಆಂಧ್ರದಲ್ಲಿ ಮದ್ಯ ದುಬಾರಿ ; ಜಗನ್‌ ಆಡಳಿತದಿಂದ ಶೇ.75, ಕೇಜ್ರಿ ಸರಕಾರದಿಂದ ಶೇ.70 ಬೆಲೆ ಹೆಚ್ಚಳ

Team Udayavani, May 6, 2020, 9:02 PM IST

Liqour-1

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಲವತ್ತು ದಿನಗಳ ಲಾಕ್‌ಡೌನ್‌ ನಿರ್ಬಂಧಗಳು ಸಡಿಲಿಕೆಯ ನಡುವೆಯೇ ದೇಶಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಈ ಸಂತೋಷಕ್ಕೆ ಎರಡು ರಾಜ್ಯಗಳು ಕೊಕ್ಕೆ ಹಾಕಿವೆ. ದಿಲ್ಲಿ ಸರಕಾರ ಎಲ್ಲ ರೀತಿಯ ಮದ್ಯದ ಮೇಲೆ ಹೆಚ್ಚುವರಿಯಾಗಿ ಶೇ.70 ‘ವಿಶೇಷ ಕೋವಿಡ್ ಶುಲ್ಕ’ ವಿಧಿಸಿದೆ. ಮಂಗಳವಾರ ದಿಂದಲೇ (ಮೇ 5) ಜಾರಿಗೆ ಬಂದಿದೆ.

ಉದಾಹರಣೆಗೆ, ಇಷ್ಟುದಿನ 100 ರೂ.ಗೆ ಸಿಗುತ್ತಿದ್ದ ಮದ್ಯಕ್ಕೆ ರಾಷ್ಟ್ರ ರಾಜಧಾನಿಯ ಪಾನ ಪ್ರಿಯರು ಇನ್ನುಮುಂದೆ 170 ರೂ. ಕೊಟ್ಟು ಕುಡಿಯಬೇಕು. ಹೀಗೆ ಮದ್ಯದ ಮೂಲಕ ಹೆಚ್ಚುವರಿಯಾಗಿ ಬರುವ ಹಣವನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವುದಾಗಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಆಂಧ್ರದಲ್ಲೂ ಶಾಕ್‌: ಆಂಧ್ರಪ್ರದೇಶ ಸರಕಾರ ಕೂಡ ಶೇ.75ರಷ್ಟು ಹೆಚ್ಚಿಸಿದೆ. ಜನ ಮದ್ಯ ಸೇವನೆಯನ್ನು ಬಿಡುವಂತೆ ಮಾಡುವ ಉದ್ದೇಶದಿಂದ ಬೆಲೆ ಹೆಚ್ಚಿಸಿರುವುದಾಗಿ ಆಂಧ್ರದ ಸಿಎಂ ಕಚೇರಿ ತಿಳಿಸಿದೆ. ಇದಕ್ಕೂ ಮುನ್ನ ಮದ್ಯದ ಬೆಲೆಯನ್ನು ಶೇ.25ರಷ್ಟು ಹೆಚ್ಚಿಸಲು ಜಗನ್‌ಮೋಹನ್‌ ರೆಡ್ಡಿ ಸರಕಾರ ನಿರ್ಧರಿಸಿತ್ತು.

ಮನೆ ಬಾಗಿಲಿಗೇ ಮದ್ಯ: ಜನರ ಕುಡಿತದ ಚಟ ಬಿಡಿಸಲು ದಿಲ್ಲಿ, ಆಂಧ್ರಪ್ರದೇಶ ಸರಕಾರಗಳು ಮದ್ಯದ ಬೆಲೆ ಹೆಚ್ಚಿಸಿದರೆ, ಇತ್ತ ಛತ್ತೀಸ್‌ಗಡ ಸರಕಾರ ಮನೆ ಬಾಗಿಲಿಗೇ ಮದ್ಯ ತಲುಪಿಸಲು ವೆಬ್‌ ಪೋರ್ಟಲ್‌ ಒಂದನ್ನು ಆರಂಭಿಸಿದೆ.

ಹಸಿರು ವಲಯಗಳಲ್ಲಿ ಮದ್ಯದಂಗಡಿಗಳ ಎದುರು ಜನರ ಜಮಾವಣೆ ತಪ್ಪಿಸಲು ಈ ವಿಶೇಷ ಸೇವೆ ಆರಂಭಿಸಿರುವುದಾಗಿ ಸರಕಾರ ಹೇಳಿದೆ.

ಪಾನಪ್ರಿಯರಿಗೆ ಹೂಮಳೆ

ಹೊಸದಿಲ್ಲಿಯ ಚಂದ್ರನಗರದಲ್ಲಿ ಮದ್ಯದಂಗಡಿ ಮಾಲಕ ಒಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಹೂವಿನ ದಳಗಳನ್ನು ಹಿಡಿದು, ‘ಸರಕಾರದ ಬಳಿ ಹಣವೆಲ್ಲಾ ಖಾಲಿ, ನೀವೇ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂದು ಹೇಳುತ್ತಾ ಸರತಿ ಸಾಲಿನಲ್ಲಿ ನಿಂತಿರುವ ಒಬ್ಬೊಬ್ಬರೇ ಗ್ರಾಹಕರ ಮೇಲೆ ಹೂ ಹಾಕುತ್ತಾ ಬರುತ್ತಾನೆ. ಈ ಪುಷ್ಪಾರ್ಚನೆಗೆ ಪ್ರತಿಯಾಗಿ ಕೆಲ ಗ್ರಾಹಕರು ಕೈ ಜೋಡಿಸಿ ನಮಸ್ಕರಿಸುತ್ತಾರೆ. ಈ ವಿಡಿಯೋಗೆ ಟ್ವಿಟರ್‌ನಲ್ಲಿ ಹಾಸ್ಯಾಸ್ಪದ ಪ್ರತಿಕ್ರಿಯೆಗಳು ಬಂದಿದೆ.

ಟಾಪ್ ನ್ಯೂಸ್

15

ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

14resign

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ

1-sds-adad

ಧರ್ಮ ಒಡೆಯುವ ಉದ್ದೇಶವಿರಲಿಲ್ಲ: ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯ ಪಶ್ಚಾತ್ತಾಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದೇಶದ ಬಗ್ಗೆ ಕಾಳಜಿ ಹೊಂದದ ಜನರಿಂದ ಏನನ್ನೂ ನಿರೀಕ್ಷಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ

ದೇಶದ ಬಗ್ಗೆ ಕಾಳಜಿ ಹೊಂದದ ಜನರಿಂದ ಏನನ್ನೂ ನಿರೀಕ್ಷಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ

1-ddssadsa

ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವು

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನ

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನ

ಮುಂಬೈ: ಬೊರಿವಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ರಕ್ಷಣಾ ಕಾರ್ಯಾಚರಣೆ

ಮುಂಬೈ: ಬೊರಿವಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ರಕ್ಷಣಾ ಕಾರ್ಯಾಚರಣೆ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

15

ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.