LIVE Updates: ಲೋಕ ಸಮರ-19: ಪ.ಬಂಗಾಲದಲ್ಲಿ 66% ; ದೇಶದಲ್ಲಿ ಒಟ್ಟಾರೆ 49.53% ಮತದಾನ

ಪ.ಬಂಗಾಲ, ಜಾರ್ಖಂಡ್‌, ರಾಜಸ್ಥಾನ, ಮ.ಪ್ರದೇಶಗಳಲ್ಲಿ ಉತ್ತಮ ಮತದಾನ ; 8 ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗೆ ವೋಟಿಂಗ್‌ ; 943 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Team Udayavani, Apr 29, 2019, 9:34 AM IST

Vote-Gallery-Lady-726

ನವದೆಹಲಿ: ಲೋಕಸಭಾ ಮಹಾಸಮರದ ನಾಲ್ಕನೇ ಹಂತದ ಮತದಾನ ಸೋಮವಾರದಂದು ದೇಶದ ವಿವಿಧ ರಾಜ್ಯಗಳಲ್ಲಿ ಬಿರುಸಿನಿಂದ ನಡೆಯುತ್ತಿದೆ.

ಜಮ್ಮು ಕಾಶ್ಮೀರದ ಅನಂತನಾಗ್‌ ಕ್ಷೇತ್ರವೂ ಸೇರಿದಂತೆ ದೇಶದೆಲ್ಲೆಡೆ ಒಟ್ಟು ಎಂಟು ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗಾಗಿ ಈ ಹಂತದಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 943 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯವನ್ನು ಆ ಭಾಗಗಳ ಮತದಾರರು ಇಂದು ನಿರ್ಧರಿಸಲಿದ್ದಾರೆ.

ನಾಲ್ಕನೇ ಹಂತದ ಮತದಾನದ ಹೈಲೈಟ್ಸ್‌ ಇಲ್ಲಿದೆ…

ಮಧ್ಯಾಹ್ನ 3.00 ಗಂಟೆಗಳವರೆಗಿನ ವರದಿಗಳ ಪ್ರಕಾರ ದೇಶದೆಲ್ಲೆಡೆ ನಾಲ್ಕನೇ ಹಂತದಲ್ಲಿ 49.53% ಮತದಾನವಾಗಿರುವ ಕುರಿತು ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಉತ್ಸಾಹ ಜೋರಾಗಿದ್ದು ಅಲ್ಲಿ ಇದುವರೆಗೆ 66.01% ಮತದಾನ ದಾಖಲುಗೊಂಡಿದೆ.

ಬಿಹಾರದಲ್ಲಿ 44.23%, ಮಧ್ಯಪ್ರದೇಶದಲ್ಲಿ 55.22%, ಮಹಾರಾಷ್ಟ್ರದಲ್ಲಿ 41.16%, ಜಮ್ಮು ಮತ್ತು ಕಾಶ್ಮೀರದಲ್ಲಿ 8.42%, ಜಾರ್ಖಂಡ್‌ ನಲ್ಲಿ 56.37%, ರಾಜಸ್ಥಾನದಲ್ಲಿ 54.16%, ಉತ್ತರಪ್ರದೇಶದಲ್ಲಿ 44.16%, ಪಶ್ಚಿಮ ಬಂಗಾಲದಲ್ಲಿ 66.01% ಹಾಗೂ ಒಡಿಸ್ಸಾದಲ್ಲಿ 51.54% ಮತದಾನವಾಗಿದೆ.

– ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ ಜಿಲ್ಲೆಯ ಬೆಲ್ಡಾಂಗದಲ್ಲಿ ಮೂರು ಮತದಾನ ಕೇಂದ್ರಗಳಿಗೆ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದಿರುವ ಕುರಿತಾಗಿ ವರದಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ಸಹಾಯಕ್ಕಾಗಿ ಯಾಚಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ದುಷ್ಕರ್ಮಿಗಳು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು ಮತ್ತು ಕರ್ತವ್ಯದಲ್ಲಿದ್ದ ಕೆಲವು ಪೊಲೀಸರೂ ಸಹ ದುಷ್ಕರ್ಮಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಸ್ಥಳಿಯರಿಂದ ಕೇಳಿಬಂದಿದೆ ಎಂದು ಖಾಸಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

– ನಾಲ್ಕನೇ ಹಂತದ ಲೋಕ ಸಮರದಲ್ಲಿ ಮಧ್ಯಾಹ್ನದವರೆಗೆ ಒಟ್ಟಾರೆ 38.63% ಮತದಾನ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

– ಬಿಹಾರದಲ್ಲಿ 37.71%, ಮಧ್ಯಪ್ರದೇಶದಲ್ಲಿ 43.44%, ಮಹಾರಾಷ್ಟ್ರದಲ್ಲಿ 29.93%, ಜಮ್ಮು ಮತ್ತು ಕಾಶ್ಮೀರದಲ್ಲಿ 06.66%, ಜಾರ್ಖಂಡ್‌ ನಲ್ಲಿ 44.90%, ರಾಜಸ್ಥಾನದಲ್ಲಿ 44.62%, ಉತ್ತರಪ್ರದೇಶದಲ್ಲಿ 34.42%, ಪಶ್ಚಿಮ ಬಂಗಾಲದಲ್ಲಿ 52.37% ಹಾಗೂ ಒಡಿಸ್ಸಾದಲ್ಲಿ 35.79% ಮತದಾನವಾಗಿದೆ.

– ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಪತ್ನಿ ಜಯಾ ಬಚ್ಚನ್‌, ಪುತ್ರ ಅಭಿಷೇಕ್‌ ಬಚ್ಚನ್‌, ಸೊಸೆ ಐಶ್ವರ್ಯಾ ರೈ ಬಚ್ಚನ್‌ ಸಹಿತ ಜುಹೂವಿನಲ್ಲಿರುವ ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು.


– ಶಿವಸೇನಾ ಮುಖ್ಯಸ್ಥ ಉದ್ಭವ್‌ ಠಾಕ್ರೆ ಅವರು ಪತ್ನಿ ರಶ್ಮಿ ಠಾಕ್ರೆ ಮತ್ತು ಪುತ್ರ ಆದಿತ್ಯ ಠಾಕ್ರೆ ಅವರೊಂದಿಗೆ ಮುಂಬಯಿ ಗಾಂಧಿನಗರ ಕ್ಷೇತ್ರದಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂನಮ್‌ ಮಹಾಜನ್‌ ಅವರು ಜೊತೆಯಲ್ಲಿದ್ದರು.


– ಪಶ್ಚಿಮ ಬಂಗಾಲ ಮತದಾನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಲು ನಿರ್ಧರಿಸಿದೆ. ಈ ನಿಯೋಗದಲ್ಲಿ ಮುಕ್ತಾರ್‌ ಅಬ್ಟಾಸ್‌ ನಖ್ವೀ, ವಿಜಯ್‌ ಗೋಯಲ್‌, ಮತ್ತು ಅನಿಲ್‌ ಬಲುನಿ ಇರಲಿದ್ದಾರೆ.

– ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಜೋಧ್‌ ಪುರದಲ್ಲಿ ಮತ ಚಲಾಯಿಸಿದರು.

– ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯಾ ವಿರುದ್ಧ ತೃಣಮೂಲ ಕಾಂಗ್ರೆಸ್‌ ಲಿಖೀತ ದೂರೊಂದನ್ನು ಸಲ್ಲಿಸಿದೆ ಮತ್ತು ಜೆಮುವ್ವಾದಲ್ಲಿರುವ ಮತದಾನ ಕೇಂದ್ರದ ಟಿಎಂಸಿ ಬೂತ್‌ ಏಜೆಂಟ್‌ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.

– ನಾಲ್ಕನೇ ಹಂತದ ಲೋಕ ಸಮರದಲ್ಲಿ 11 ಗಂಟೆಯವರೆಗೆ ಒಟ್ಟಾರೆ 14.59% ಮತದಾನ ಆಗಿದೆ ಎಂದು ತಿಳಿದುಬಂದಿದೆ.

– ಬಿಹಾರದಲ್ಲಿ 13.95%, ಮಧ್ಯಪ್ರದೇಶದಲ್ಲಿ 18.66%, ಮಹಾರಾಷ್ಟ್ರದಲ್ಲಿ 8.15%, ಜಮ್ಮು ಮತ್ತು ಕಾಶ್ಮೀರದಲ್ಲಿ 3.69%, ಜಾರ್ಖಂಡ್‌ ನಲ್ಲಿ 20.87%, ರಾಜಸ್ಥಾನದಲ್ಲಿ 15.08%, ಉತ್ತರಪ್ರದೇಶದಲ್ಲಿ 17.69%, ಪಶ್ಚಿಮ ಬಂಗಾಲದಲ್ಲಿ 21.69% ಹಾಗೂ ಒಡಿಸ್ಸಾದಲ್ಲಿ 10% ಮತದಾನವಾಗಿದೆ.

– ಮುಂಬಯಿಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಕುಟುಂಬ ಸದಸ್ಯರು ಮತದಾನ ಕೇಂದ್ರಕ್ಕೆ ಮತಗಟ್ಟೆ ಸಿಬ್ಬಂದಿ ನೆರವಿನಿಂದ ಮತದಾನ ಮಾಡಲು ಕರೆದೊಯ್ಯುತ್ತಿರುವುದು.

– ನಟಿ ಪ್ರಿಯಾಂಕ ಛೋಪ್ರಾ ಜೊನಾಸ್‌ ಅವರು ಮುಂಬಯಿಯಲ್ಲಿ ಇಂದು ತಮ್ಮ ಮತವನ್ನು ಚಲಾಯಿಸಿದರು.

– ಬೆಳಿಗ್ಗೆ 10ಗಂಟೆಯವರೆಗೆ ಒಟ್ಟಾರೆ 10.42% ಮತದಾನ ಆಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.

– ಬಿಹಾರದಲ್ಲಿ 10.76%, ಮಧ್ಯಪ್ರದೇಶದಲ್ಲಿ 11.45%, ಮಹಾರಾಷ್ಟ್ರದಲ್ಲಿ 6.66%, ಜಮ್ಮು ಮತ್ತು ಕಾಶ್ಮೀರದಲ್ಲಿ 0.68%, ಜಾರ್ಖಂಡ್‌ ನಲ್ಲಿ 12%, ರಾಜಸ್ಥಾನದಲ್ಲಿ 12.22%, ಉತ್ತರಪ್ರದೇಶದಲ್ಲಿ 9.87%, ಪಶ್ಚಿಮ ಬಂಗಾಲದಲ್ಲಿ 16.89% ಹಾಗೂ ಒಡಿಸ್ಸಾದಲ್ಲಿ 8.34% ಮತದಾನವಾಗಿದೆ.

– ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಮತದಾನ ಮಾಡಿದರು. ಮತ್ತು ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಅವಶ್ವವಾಗಿ ಚಲಾಯಿಸುವಂತೆ ನಟಿ ಇದೇ ಸಂದರ್ಭದಲ್ಲಿ ಕರೆ ನೀಡಿದರು.

– ಪಶ್ವಿ‌ಮ ಬಂಗಾಲದ ಅಸಾನ್ಸೋಲ್‌ ಮತಗಟ್ಟೆಯಲ್ಲಿ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭದಲ್ಲಿ ಅಸಾನ್ಸೋಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೋ ಅವರ ಕಾರನ್ನು ಸಹ ಟಿಎಂಸಿ ಕಾರ್ಯಕರ್ತರು ಹಾನಿ ಮಾಡಿದ್ದಾರೆ.


– ಪಶ್ಚಿಮ ಬಂಗಾಲದ ಜೆಮುವ್ವ ಎಂಬಲ್ಲಿ ತೃಣಮೂಲ ಕಾಂಗ್ರೆಸ್‌ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ಉಂಟಾಗಿದೆ. ಆ ಭಾಗದ ಮತದಾರರು ಮತಬಹಿಷ್ಕಾರ ಮಾಡಿರುವ ವಿಷಯಕ್ಕೆ ಈ ಘರ್ಷಣೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಸ್ಥಳಕ್ಕೆ ಕ್ಷಿಪ್ರ ಕಾರ್ಯಾಚರಣಾ ದಳ ದೌಡಾಯಿಸಿದೆ.

– 09 ಗಂಟೆಯವರೆಗೆ ಒಟ್ಟಾರೆ 10.25% ಮತದಾನ ಆಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.

– ಬಿಹಾರದಲ್ಲಿ 10.76%, ಮಧ್ಯಪ್ರದೇಶದಲ್ಲಿ 11.11%, ಮಹಾರಾಷ್ಟ್ರದಲ್ಲಿ 5.87%, ಜಮ್ಮು ಮತ್ತು ಕಾಶ್ಮೀರದಲ್ಲಿ 0.61%, ಜಾರ್ಖಂಡ್‌ ನಲ್ಲಿ 12%, ರಾಜಸ್ಥಾನದಲ್ಲಿ 11.20%, ಉತ್ತರಪ್ರದೇಶದಲ್ಲಿ 9.01%, ಪಶ್ಚಿಮ ಬಂಗಾಲದಲ್ಲಿ 16.89% ಹಾಗೂ ಒಡಿಸ್ಸಾದಲ್ಲಿ 8.34% ಮತದಾನವಾಗಿದೆ.

ನಾಲ್ಕನೇ ಹಂತದಲ್ಲಿ ಇದುವರೆಗೆ ಮತಚಲಾಯಿಸಿದ ಪ್ರಮುಖರು: ಗಿರಿರಾಜ್‌ ಸಿಂಗ್‌, ಉದ್ಯಮಿ ಅನಿಲ್‌ ಅಂಬಾನಿ, ರಾಜಸ್ಥಾನದ ಮಾಜೀ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಉತ್ತರ ಮುಂಬಯಿ ಬಿಜೆಪಿ ಅಭ್ಯರ್ಥಿ ಪೂನಮ್‌ ಮಹಾಜನ್‌, ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌ ಶಕ್ತಿಕಾಂತ ದಾಸ್‌, ಬಾಲಿವುಡ್‌ ನಟಿ ರೇಖಾ, ಗೋರಖ್‌ ಪುರದ ಬಿಜೆಪಿ ಅಭ್ಯರ್ಥಿ ಭೋಜ್‌ ಪುರಿ ನಟ ರವಿಕಿಶನ್‌, ನಟ ಪರೇಶ್‌ ರಾವಲ್‌ ದಂಪತಿ, ಬೆಗುಸರಾಯ್‌ ನಿಂದ ಸ್ಪರ್ಧಿಸುತ್ತಿರುವ ಕನ್ಹಯ್ಯಾ ಕುಮಾರ್‌, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್‌, ಹಿರಿಯ ನಟಿ ಶುಭಾ ಕೋಟೆ, ಉತ್ತರ ಮುಂಬಯಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಟಿ ಊರ್ಮಿಳಾ ಮಾತೊಂಡ್ಕರ್‌, ಬಿಜೆಪಿಯ ಗೋಪಾಲ್‌ ಶೆಟ್ಟಿ ಸೇರಿದಂತೆ ಹಲವರು ಇದುವರೆಗೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಾರೆ.

– ವಾಣಿಜ್ಯ ನಗರಿ ಮುಂಬಯಿಯ ಎಲ್ಲಾ ನಾಲ್ಕು ಲೋಕಸಭಾ ಸ್ಥಾನಗಳಿಗೆ ಇಂದೇ ಮತದಾನ ನಡೆಯುತ್ತಿದೆ. ಸದಾ ಜಂಜಾಟದಲ್ಲೇ ಇರುವ ಮಹಾನಗರಿ ಮುಂಬಯಿಯ ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

– ಆದಿ ಗೋದ್ರೇಜ್‌, ಕುಮಾರ ಮಂಗಲಂ ಬಿರ್ಲಾ, ಅನಿಲ್‌ ಅಂಬಾನಿ, ಮುಖೇಶ್‌ ಅಂಬಾನಿ, ಪ್ರಿಯಾ ದತ್‌, ಉದ್ಭವ್‌ ಠಾಕ್ರೆ, ರಾಮದಾಸ ಅಠಾವಳೆ, ಮಿಲಿಂದ್‌ ದೇವೋರಾ ಸೇರಿದಂತೆ ಹಲವು ಪ್ರಮುಖರು ಮುಂಬಯಿಯಲ್ಲಿಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

– ರಾಜಸ್ಥಾನದ 13 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ಉತ್ತರ ಮುಂಬಯಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಊರ್ಮಿಳಾ ಮಾತೊಂಡ್ಕರ್‌ ಮತ್ತು ಬಿಜೆಪಿಯ ಗೋಪಾಲ ಶೆಟ್ಟಿ ನಡುವಿನ ಹಣಾಹಣಿ ಕುತೂಹಲಕ್ಕೆ ಕಾರಣವಾಗಿದೆ, ಕಾನ್ಪುರದಲ್ಲಿ ಕಾಂಗ್ರೆಸ್‌ ನ ಶ್ರೀಪ್ರಕಾಶ್‌ ಜೈಸ್ವಾಲ್‌, ಬಿಜೆಪಿಯ ಸತ್ಯದೇವ್‌ ಪಚೌರಿ ಮತ್ತು ಸಮಾಜವಾದಿ ಪಕ್ಷದ ರಾಮ್‌ ಕುಮಾರ್‌ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ.

– ಇನ್ನು ದಕ್ಷಿಣ ಮುಂಬಯಿಯಲ್ಲಿ ಕಾಂಗ್ರೆಸ್‌ ನ ಮಿಲಿಂದ್‌ ದೇವೊರಾ ಹಾಗೂ ಶಿವಸೇನೆಯ ಅರವಿಂದ್‌ ಸಾವಂತ್‌ ನಡುವೆ ನೇರ ಪೈಪೋಟಿ ಇದೆ.

– ಇನ್ನು ಬಿಹಾರದ ಬೆಗುಸರಾಯ್‌ ಕ್ಷೇತ್ರದಲ್ಲಿ ಕನ್ಹಯ್ಯಾ ಕುಮಾರ್‌ ಅವರು ಸಿಪಿಐ (ಎಂ)ನಿಂದ ಕಣಕ್ಕಿಳಿದಿದ್ದು ಅವರು ಎದುರಾಳಿಯಾಗಿ ಬಿಜೆಪಿಯ ಗಿರಿರಾಜ್‌ ಸಿಂಗ್‌ ಇದ್ದಾರೆ ಹಾಗೂ ಇವರಿಗೆ ಆರ್‌.ಜೆ.ಡಿ.ಯ ತನ್ವೀರ್‌ ಹಸನ್‌ ಸ್ಪರ್ಧೆ ನೀಡುತ್ತಿದ್ದಾರೆ.

– ಇನ್ನು ಪಶ್ಚಿಮ ಬಂಗಾಲದ ಬಿರ್ಭುಮ್‌ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ ನ ಸತಾಬ್ದಿ ರಾಯ್‌ ಮತ್ತು ಬಿಜೆಪಿಯ ದೂಧ್‌ ಕುಮಾರ್‌ ಮಂಡಲ್‌ ನಡುವೆ ಹಣಾಹಣಿ ಇದೆ.



– ಉತ್ತರಪ್ರದೇಶದ ಉನ್ನಾವ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್‌ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.

– ಉತ್ತರಪ್ರದೇಶದ ಫ‌ರೂಕಾಬಾದ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಲ್ಮಾನ್‌ ಖುರ್ಷಿದ್‌ ಅವರು ತಮ್ಮ ಹಕ್ಕನ್ನು ಚಲಾಯಿಸುತ್ತಿರುವುದು.

– ಉದ್ಯಮಿ ಅನಿಲ್‌ ಅಂಬಾನಿ ತಮ್ಮ ಮತಚಲಾಯಿಸಿದ ಬಳಿಕ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದು ಹೀಗೆ.

– ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.
#Mumbai: Reserve Bank of India (RBI) Governor Shaktikanta Das casts his vote at polling booth number 40 & 41 at Peddar Road. #LokSabhaElections2019 pic.twitter.com/i2TFjtuJxP

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.