
ತವರು ಮನೆಯಲ್ಲಿದ್ದ ಪತ್ನಿಯನ್ನು ಮನೆಗೆ ಬಾ ಎಂದಿದ್ದಕ್ಕೆ ಪತಿಯ ನಾಲಿಗೆಯನ್ನೇ ತುಂಡರಿಸಿದಳು
Team Udayavani, Jan 28, 2023, 7:15 AM IST

ಲಕ್ನೋ: ತವರು ಮನೆಯಲ್ಲಿದ್ದ ಹೆಂಡತಿಯನ್ನು ಮನೆಗೆ ಹಿಂತಿರುಗಿ ಬಾ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಪತ್ನಿ, ಪತಿಯ ನಾಲಿಗೆಯನ್ನೇ ತುಂಡರಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಜಗಳದ ನಂತರ ಪತ್ನಿ ಸಲ್ಮಾ ಠಾಕೂರ್‌ಗಂಜ್‌ನಲ್ಲಿರುವ ತವರು ಮನೆಗೆ ಬಂದಿದ್ದರು. ಹಲವು ದಿನಗಳಾದರೂ ಹಿಂತಿರುಗದ ಕಾರಣ ಪತಿ ಮುನ್ನಾ, ಆಕೆಯನ್ನು ವಾಪಸು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಪತಿ ಮತ್ತು ಪತ್ನಿ ನಡುವೆ ದೊಡ್ಡ ಜಗಳವಾಗಿದೆ. ಕೋಪದ ಭರದಲ್ಲಿ ಸಲ್ಮಾ ಪತಿಯ ನಾಲಿಗೆಯನ್ನು ಕಚ್ಚಿ ತುಂಡುರಿದ್ದಾರೆ. ತುಂಡಾದ ನಾಲಿಗೆ ನೆಲಕ್ಕೆ ಬಿದ್ದಿದೆ. ಸದ್ಯ ಮುನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
