
ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ
Team Udayavani, Mar 20, 2023, 4:27 PM IST

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಡಿಸೈನರ್ ಅನಿಕ್ಷಾ ಅವರ ತಂದೆ ಅನಿಲ್ ಜೈಸಿಂಘಾನಿಯಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಅನಿಕ್ಷಾ ಅವರನ್ನು ಮಹಾರಾಷ್ಟ್ರ ಪೊಲೀಸರು ಈಗಾಗಲೇ ಬಂಧಿಸಿದ್ದು, ಇಂದು ಅವರ ತಂದೆ ಅನಿಲ್ ಜೈಸಿಂಘಾನಿಯಾ ಅವರನ್ನು ಗುಜರಾತ್ ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿಸೈನರ್ ಅನಿಕ್ಷಾ ಮತ್ತು ಆಕೆಯ ತಂದೆ ಅನಿಲ್ ಜೈಸಿಂಘಾನಿಯಾ ಸೇರಿಕೊಂಡು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸಹಾಯ ಮಾಡುವಂತೆ ಲಂಚದ ಆಮಿಷ ಒಡ್ಡಿದ್ದರು ಅಲ್ಲದೆ ಡಿಸೈನರ್ ಅನಿಕ್ಷಾ ತನ್ನ ತಂದೆಯ ಜೊತೆ ಸೇರಿಕೊಂಡು ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ, ಈ ಪ್ರಕರಣಕ್ಕೆ ಸಂಬಂಧಿಸಿ ಅಮೃತಾ ಫಡ್ನವಿಸ್ ಅವರು ಮಲಬಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಅನಿಕ್ಷಾ ಅವರನ್ನು ಮಾರ್ಚ್ 17 ರಂದು ಮಹಾರಾಷ್ಟ ಪೊಲೀಸರು ಬಂಧಿಸಿದ್ದರು, ಜೊತೆಗೆ ಇಂದು ಗುಜರಾತ್ ನಲ್ಲಿ ಅನಿಲ್ ಜೈಸಿಂಘಾನಿಯಾ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ?: ಖರ್ಗೆ ತಿರುಗೇಟು
ಟಾಪ್ ನ್ಯೂಸ್
