
ವಿಡಿಯೋ: ಚಾಲಕನ ಅಶ್ಲೀಲ ಪ್ರಶ್ನೆಗೆ ಹೆದರಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಬಾಲಕಿ ಗಂಭೀರ
Team Udayavani, Nov 17, 2022, 11:48 AM IST

ಔರಂಗಾಬಾದ್ : ರಿಕ್ಷಾ ಚಾಲಕನ ಅಶ್ಲೀಲ ಪ್ರಶ್ನೆಗಳಿಗೆ ಹೆದರಿದ ಬಾಲಕಿಯೊಬ್ಬಳು ಚಾಲಕನಿಂದ ರಕ್ಷಣೆ ಪಡೆಯಲು ಚಲಿಸಿಯುತ್ತಿದ್ದ ರಿಕ್ಷಾದಿಂದ ರಸ್ತೆಗೆ ಜಿಗಿದು ತಲೆಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯು ಔರಂಗಾಬಾದ್ ನಗರದ ಸಿಲ್ಲೇಖಾನದಿಂದ ಶಿವಾಜಿ ಹೈಸ್ಕೂಲ್ ರಸ್ತೆಯ ಸಂಕಲ್ಪ್ ಕ್ಲಾಸ್ ಎದುರು ನಡೆದಿದೆ. ಬಾಲಕಿ ರಿಕ್ಷಾದಿಂದ ಹೊರ ಜಿಗಿಯುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆದ ಬಳಿಕ ರಿಕ್ಷಾ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಿಕ್ಷಾ ಚಾಲಕನನ್ನು ಪತ್ತೆ ಹಚ್ಚಿದ್ದಾರೆ.
ಬಂಧಿತ ರಿಕ್ಷಾ ಚಾಲಕನನ್ನು 39 ವರ್ಷದ ಸೈಯದ್ ಅಕ್ಬರ್ ಸೈಯದ್ ಹಮೀದ್ ಎಂದು ಗುರುತಿಸಲಾಗಿದೆ.
ಔರಂಗಾಬಾದ್ ಕ್ರಾಂತಿ ಚೌಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಡಾ.ಗಣಪತ್ ದಾರಾಡೆ ನೀಡಿದ ಮಾಹಿತಿಯ ಪ್ರಕಾರ, ಖೋಕಡ್‌ಪುರ ಪ್ರದೇಶದ 17 ವರ್ಷದ ಬಾಲಕಿ ಗೋಪಾಲ್ ಟೀ ಸೆಕ್ಟರ್‌ನಲ್ಲಿ ಟ್ಯೂಷನ್ ಪಡೆಯುತ್ತಿದ್ದು ದಿನಂಪ್ರತಿ ಆಟೋದಲ್ಲಿ ಹೋಗಿಬರುತ್ತಿದ್ದಳು.
ಇದನ್ನೂ ಓದಿ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ; ಪ್ರಾಣಸಂಕಟ ತರುತ್ತಿರುವ ಹಂಪ್ಸ್ ಗಳು
ನವೆಂಬರ್ 13 ರಂದು ಮಧ್ಯಾಹ್ನ 12 ಗಂಟೆಗೆ ತರಗತಿ ಮುಗಿದ ನಂತರ ವಾಪಸು ರಿಕ್ಷಾದಲ್ಲಿ ಬರಲು ರಿಕ್ಷಾ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ರಿಕ್ಷಾವನ್ನು ಹತ್ತಿದ್ದಾಳೆ, ಸಂತ್ರಸ್ತ ವಿದ್ಯಾರ್ಥಿನಿ ರಿಕ್ಷಾದಲ್ಲಿ ಒಬ್ಬಳೇ ಕುಳಿತಿದ್ದನ್ನು ನೋಡಿದ ರಿಕ್ಷಾ ಚಾಲಕ ಅಕ್ಬರ್ ಸೈಯದ್ ಮೊದಲು ಆಕೆಯ ಹೆಸರನ್ನು ಕೇಳಿದ್ದಾನೆ. ಆದರೆ ಹುಡುಗಿ ಅವನಿಗೆ ಯಾವುದೇ ಉತ್ತರ ನೀಡಲಿಲ್ಲ. ಆಗ ಚಾಲಕ ಅಶ್ಲೀಲ ಪ್ರಶ್ನೆಗಳನ್ನು ಕೇಳಲು ಮತ್ತು ಅಸಭ್ಯವಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ. ಇದರಿಂದ ಹೆದರಿದ ಬಾಲಕಿ ರಿಕ್ಷಾದಿಂದ ಜಿಗಿದಿದ್ದಾಳೆ. ಈ ವೇಳೆ ಆಕೆಯ ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ಬಾಲಕಿ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಔರಂಗಾಬಾದ್‌ನ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ರಾಂತಿ ಚೌಕ್ ಪೊಲೀಸರು ರಾತ್ರೋರಾತ್ರಿ 40 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ರಿಕ್ಷಾವನ್ನು ಪತ್ತೆಹಚ್ಚಲು ವಿಶೇಷ ತಂಡ ನಿಯೋಜಿಸಿದ್ದು. ರಿಕ್ಷಾ ನಂಬರ್ ಪತ್ತೆ ಹಚ್ಚಿದ ತಂಡ ಚಾಲಕನನ್ನು ಬಂಧಿಸಿದೆ. ಆರೋಪಿ ರಿಕ್ಷಾ ಚಾಲಕ ಅಕ್ಬರ್ ಸೈಯದ್ ಮುಂಬೈ ನಿವಾಸಿಯಾಗಿದ್ದು, ನಾಲ್ಕೈದು ತಿಂಗಳ ಹಿಂದೆ ಔರಂಗಾಬಾದ್‌ಗೆ ಬಂದು ಬಾಡಿಗೆಗೆ ರಿಕ್ಷಾ ಓಡಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
महाराष्ट्र : छात्रा से ड्राइवर ने पूछे अश्लील सवाल, चलते ऑटो से कूदी नाबालिग; 40 CCTV खंगाल पुलिस ने आरोपी को दबोचा pic.twitter.com/Ja7ekzpWEg
NDTV India (@ndtvindia) November 17, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ
MUST WATCH
ಹೊಸ ಸೇರ್ಪಡೆ

ಗೌಡ್ರ ಅಭಿಮಾನಿಗಳೂ…ಕಾಗೇರಿ ಅವರ ಫ್ಯಾನ್ಸ್…! ; ಸೆಲ್ಫಿಗೆ ಮುಗಿಬಿದ್ದರು

ಚುನಾವಣೆಯಲ್ಲಿ ಎದುರಾಳಿ ಯಾರೇ ಇರಲಿ ಅದರ ಬಗ್ಗೆ ನನಗೆ ಚಿಂತೆ ಇಲ್ಲ: ಸಿದ್ದರಾಮಯ್ಯ

ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ