
“ಜೈ ಶ್ರೀರಾಮ್” ಹೇಳಲು ನಿರಾಕರಣೆ: ಇಮಾಮ್ ಗೆ ಹಲ್ಲೆಗೈದು ಗಡ್ಡ ಕತ್ತರಿಸಿದ ಅಪರಿಚಿತರು
Team Udayavani, Mar 28, 2023, 9:51 AM IST

ಮಹಾರಾಷ್ಟ್ರ: ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಮಸೀದಿ ಇಮಾಮ್ ಒಬ್ಬರಿಗೆ ಹಲ್ಲೆಗೈದು ಅವರ ಗಡ್ಡವನ್ನು ಕತ್ತರಿಸಿರುವ ಘಟನೆ ಮಹಾರಾಷ್ಟ್ರದ ಅನ್ವ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ: ಭಾನುವಾರ ( ಮಾ.26 ರಂದು) ಮಸೀದಿಯೊಂದರಲ್ಲಿ ಇಮಾಮ್ ಆಗಿರುವ (ಧರ್ಮ ಗುರು) ಜಾಕಿರ್ ಸಯ್ಯದ್ ಖಾಜಾ ಅವರು ಖುರಾನ್ ಓದುತ್ತಿದ್ದರು. ಈ ವೇಳೆ ಮುಸುಕನ್ನು ಹಾಕಿರುವ ಅಪರಿಚಿತ ವ್ಯಕ್ತಿಗಳು ಇಮಾಮ್ ರ ಬಳಿ ಹೋಗಿ “ಜೈ ಶ್ರೀರಾಮ್” ಹೇಳಿ ಎಂದು ಬಲವಂತಪಡಿಸಿದ್ದಾರೆ. ಇಮಾಮ್ ಇದಕ್ಕೆ ಒಪ್ಪದ ಕಾರಣ ಮೂವರು ಅಪರಿಚಿತ ವ್ಯಕ್ತಿಗಳು ಮೊದಲು ಹಲ್ಲೆ ನಡೆಸಿ ಅಮಲು ಪದಾರ್ಥವನ್ನು ಹಾಕಿರುವ ಬಟ್ಟೆಯಿಂದ ಮುಖಕ್ಕೆ ಒತ್ತಿದ್ದಾರೆ. ಇದರಿಂದ ಇಮಾಮ್ ಪ್ರಜ್ಞೆ ತಪ್ಪಿದ್ದಾರೆ. ಇಮಾಮ್ ಗೆ ಪ್ರಜ್ಞೆ ಬಂದಾಗ ಅವರ ಗಡ್ಡವನ್ನು ಅಪರಿಚಿತ ವ್ಯಕ್ತಿಗಳು ಕತ್ತರಿಸಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ: 6 ಮಂದಿ ಮೃತ್ಯು; ಮಾಜಿ ವಿದ್ಯಾರ್ಥಿನಿಯೇ ವಿಲನ್.!
ರಾತ್ರಿ 8 ಗಂಟೆಯ ವೇಳೆ ಮಸೀದಿಗೆ ಬಂದ ಜನ ಇಮಾಮ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಅಪರಿಚಿತ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು ಟ್ವಿಟರ್ ನಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಸದ್ಯ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khalistani: ಕ್ಯಾಲಿಫೋರ್ನಿಯಾ ದೂತಾವಾಸಕ್ಕೆ ದಾಳಿ- ಖಲಿಸ್ತಾನಿ ಉಗ್ರರ ಮಾಹಿತಿ ರಿಲೀಸ್

BJP ನಾಯಕರ ಭೇಟಿ: ನಾಳೆ NDA ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆ ಸಾಧ್ಯತೆ

Canada ಉಗ್ರರಿಗೆ ಸುರಕ್ಷಿತ ಆಶ್ರಯ ನೀಡುತ್ತಿದೆ: ಭಾರತದ ಕಠಿಣ ಎಚ್ಚರಿಕೆ

MP: 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಭವ್ಯ ಪ್ರತಿಮೆ ಅನಾವರಣ

EC tells SC ; ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ : ಬದಲಾವಣೆ ಮಾಡಲಾಗುತ್ತದೆ
MUST WATCH
ಹೊಸ ಸೇರ್ಪಡೆ

Khalistani: ಕ್ಯಾಲಿಫೋರ್ನಿಯಾ ದೂತಾವಾಸಕ್ಕೆ ದಾಳಿ- ಖಲಿಸ್ತಾನಿ ಉಗ್ರರ ಮಾಹಿತಿ ರಿಲೀಸ್

BJP ನಾಯಕರ ಭೇಟಿ: ನಾಳೆ NDA ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆ ಸಾಧ್ಯತೆ

KSRTC: “ಶಕ್ತಿ” ಹೊರೆಗೆ ಸಾರಿಗೆ ನಿಗಮಗಳು “ಅಶಕ್ತ”?

Canada ಉಗ್ರರಿಗೆ ಸುರಕ್ಷಿತ ಆಶ್ರಯ ನೀಡುತ್ತಿದೆ: ಭಾರತದ ಕಠಿಣ ಎಚ್ಚರಿಕೆ

Yakshagana; ಯುವ ಕಲಾವಿದ ರಾಜೇಂದ್ರ ಗಾಣಿಗ ಅನಾರೋಗ್ಯದಿಂದ ವಿಧಿವಶ