
ಉದ್ಧವ್ ಠಾಕ್ರೆಗೆ ಅಗ್ನಿಪರೀಕ್ಷೆ: ಜೂ. 30ರಂದು ವಿಶ್ವಾಸಮತ ಸಾಬೀತುಪಡಿಸಲು ಸೂಚನೆ
ಫಡ್ನವೀಸ್ ಭೇಟಿ ಬಳಿಕ ರಾಜ್ಯಪಾಲರ ಆದೇಶ
Team Udayavani, Jun 28, 2022, 11:32 PM IST

ಮುಂಬಯಿ: ಮಹಾರಾಷ್ಟ್ರದಲ್ಲಿ ಒಂದು ವಾರದಿಂದ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ತುರೀಯ ಸ್ಥಿತಿ ತಲುಪಿದೆ.
ಗುರುವಾರ, ಜೂ. 30ರಂದೇ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಮಂಗಳವಾರ ತಡರಾತ್ರಿ ಆದೇಶಿಸಿದ್ದಾರೆ.
ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ ದಿಲ್ಲಿಯಲ್ಲಿ ಪಕ್ಷದ ವರಿಷ್ಠ ನಾಯಕರನ್ನು ಭೇಟಿಯಾಗಿ ವಾಪಸ್ ಬಂದು, ರಾಜಭವನಕ್ಕೆ ತೆರಳಿ ರಾಜ್ಯ ಪಾಲರ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಫಡ್ನವೀಸ್ ಅವರು ಸರಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಉದ್ಧವ್ ಸರಕಾರ ಬಹುಮತ ಕಳೆದು ಕೊಂಡಿ ರುವು ದಾಗಿಯೂ ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಗುರುವಾರವೇ ವಿಧಾನಸಭೆ ಅಧಿವೇಶನ ಕರೆದು ವಿಶ್ವಾಸಮತ ಸಾಬೀತು ಪಡಿಸಲು ಸೂಚಿಸಿದ್ದಾರೆ.
ವಾಪಸ್ ಬನ್ನಿ , ನನ್ನೊಂದಿಗೆ ಮಾತನಾಡಿ!
ರಾಜಕೀಯ ಬೆಳವಣಿಗೆಗಳಿಂದ ಹತಾಶ ರಾದಂತೆ ಕಂಡುಬಂದಿರುವ ಸಿಎಂ ಉದ್ಧವ್ ಠಾಕ್ರೆ ಮಂಗಳವಾರ ಬಂಡಾಯ ಶಾಸಕರಿಗೆ “ಭಾವನಾತ್ಮಕ ಸಂದೇಶ’ ರವಾನಿಸಿ ದ್ದಾರೆ. ಈಗಲೂ ಕಾಲ ಮಿಂಚಿಲ್ಲ. ವಾಪಸ್ ಬನ್ನಿ, ನನ್ನೊಂದಿಗೆ ಕುಳಿತು ಮಾತನಾಡಿ. ಎಲ್ಲ ಗೊಂದಲ ಗಳನ್ನೂ ಬಗೆಹರಿಸಿಕೊಳ್ಳೋಣ. ಪಕ್ಷದ ಅಧ್ಯಕ್ಷನಾಗಿ, ಈ ಕುಟುಂಬದ ಮುಖ್ಯಸ್ಥನಾಗಿ ನನಗೆ ನಿಮ್ಮ ಬಗ್ಗೆ ಕಾಳಜಿಯಿದೆ. ನೀವು ಹೊರಗೆ ಏನೇ ಹೇಳಿಕೊಂಡರೂ ನಿಮ್ಮ ಹೃದಯ ಇನ್ನೂ ಶಿವಸೇನೆಯಲ್ಲೇ ಇದೆ. ದಯವಿಟ್ಟು ವಾಪಸ್ ಬನ್ನಿ ಎಂದು ಮನವೊಲಿಸಲು ಯತ್ನಿಸಿದ್ದಾರೆ.
20ಕ್ಕೂ ಹೆಚ್ಚು ಶಾಸಕರು ನಿಮ್ಮ (ಉದ್ಧವ್) ಜತೆ ಸಂಪರ್ಕದಲ್ಲಿ ದ್ದಾರೆ ಎಂದು ಹೇಳುತ್ತಿದ್ದೀರಲ್ಲ, ಅವರೆಲ್ಲರ ಹೆಸರನ್ನು ಬಹಿರಂಗಪಡಿಸಿ, ನೋಡೋಣ.
– ಏಕನಾಥ ಶಿಂಧೆ, ಬಂಡಾಯ ನಾಯಕ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

Cleaning: ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

ಸಚಿವ ಸ್ಥಾನ ಪಡೆದ ಬಳಿಕ ಮೊದಲ ಸಲ ಮತಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್