
Crime News: ಕೌಟುಂಬಿಕ ಕಲಹ; 25 ಬಾರಿ ಚಾಕುವಿನಿಂದ ಚುಚ್ಚಿ ಮಗಳನ್ನೇ ಕೊಂದ ತಂದೆ
Team Udayavani, May 31, 2023, 10:57 AM IST

ಸೂರತ್: ಪ್ರೀತಿಸಿದಾಕೆ ದೂರ ಮಾಡಿದ್ದಕ್ಕೆ ಆಕೆಯನ್ನು 20 ಬಾರಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ಸುದ್ದಿಯಲ್ಲಿರುವಾಗಲೇ ಸೂರತ್ ನಲ್ಲಿ ಇಂಥದ್ದೇ ಮತ್ತೊಂದು ಘಟನೆ ನಡೆದಿರುವುದು ವರದಿಯಾಗಿದೆ.
ಸೂರತ್‌ನ ಸತ್ಯ ನಗರ ಸೊಸೈಟಿಯಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ರಾಮಾನುಜ ಹಾಗೂ ಪತ್ನಿ ನಡುವೆ ಮಗಳು ಟೆರೇಸ್ ಮೇಲೆ ಮಲಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಜಗಳವೊಂದು ನಡೆದಿದೆ.
ಇದನ್ನೂ ಓದಿ: ದೂರ ಮಾಡಿದ್ದಕ್ಕೆ ಕೊಂದೆ: ನನಗೆ ಪಶ್ಚಾತ್ತಾಪವಿಲ್ಲ-ಸಾಹಿಲ್
ಪತಿ -ಪತ್ನಿ ನಡುವಿನ ಜಗಳವನ್ನು ತಡೆಯಲು ಮಗಳು ಸೇರಿದಂತೆ ಮನೆಯ ಇತರ ಸದಸ್ಯರು ಬಂದಿದ್ದಾರೆ. ಮೊದಲು ಪತ್ನಿ ಮೇಲೆ ರಾಮಾನುಜ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಮಗಳನ್ನು ಹಿಡಿದು ಚಾಕುವಿನಿಂದ ಹಲ್ಲೆಗೈದಿದ್ದಾನೆ. ಚಾಕುವಿನಿಂದ ದಾಳಿ ಮಾಡಿದಾಗ ಗಾಯದಿಂದ ಮಗಳು ಕೆಳಗೆ ಬಿದ್ದು ನರಳಾಡುತ್ತ ರೂಮ್ ನೊಳಗೆ ಹೋಗಿದ್ದಾಳೆ ಆದರೆ ಪಾಪಿ ತಂದೆ ಮಗಳ ಮೇಲೆ ಹಿಗ್ಗಾಮುಗ್ಗಾ ಥಳಿಸಿ, 25 ಬಾರಿ ಚುಚ್ಚಿ ಹತ್ಯೆಗೈದಿದ್ದಾನೆ. ಬಳಿಕ ಗಾಯಗೊಂಡು ಟೆರೇಸ್ ಮೇಲೆ ಓಡಿದ್ದ ಪತ್ನಿ ಮೇಲೂ ಹಲ್ಲೆ ನಡೆಸಿದ್ದಾನೆ.
ಮೇ.18 ರಂದು ಸೂರತ್ ನ ಕಡೋದರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪತ್ನಿ ರೇಖಾ ದೂರಿನ ಬಳಿಕ ಪೊಲೀಸರು ಆರೋಪಿಯನ್ನು ಎರಡು ದಿನದ ಬಳಿಕ ಬಂಧಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Homework ಮಾಡದಕ್ಕೆ ತಲೆಗೆ ಹೊಡೆದ ಶಿಕ್ಷಕಿ; ಕುಸಿದು ಬಿದ್ದು 5 ವರ್ಷದ ವಿದ್ಯಾರ್ಥಿ ಮೃತ್ಯು

Earthquake: ನೇಪಾಳದಲ್ಲಿ ಪ್ರಬಲ ಭೂಕಂಪನ: ರಾಷ್ಟ್ರ ರಾಜಧಾನಿಯಲ್ಲೂ ಕಂಪಿಸಿದ ಭೂಮಿ

Catholic Priest: ಚರ್ಚ್ ಪಾದ್ರಿ ಬಿಜೆಪಿಗೆ ಸೇರ್ಪಡೆ, ಕರ್ತವ್ಯದಿಂದ ವಜಾಗೊಳಿಸಿದ ಚರ್ಚ್

India Canada Issue: ಕೆನಡಾದ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ಗಡುವು ನೀಡಿದ ಭಾರತ

Child Marriage: ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ… 800 ಕ್ಕೂ ಹೆಚ್ಚು ಮಂದಿ ಬಂಧನ