ಮಹಿಳೆ ಆತ್ಮಹತ್ಯೆ ಮಾಡುವ ವೇಳೆ ವಿಡಿಯೋ ಚಿತ್ರೀಕರಿಸಿದ ಪತಿ
Team Udayavani, Oct 27, 2022, 7:56 AM IST
ಕಾನ್ಪುರ: ಮಹಿಳೆಯೊಬ್ಬರು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಆಕೆಯ ಪತಿಯೇ ಚಿತ್ರೀಕರಿಸಿರುವ ಅಮಾನವೀಯ ಮತ್ತು ಭೀಕರ ಕೃತ್ಯ ನಡೆದಿದೆ.
ಮೃತ ಶೋಬಿತಾ ಗುಪ್ತಾ ಮೊದಲ ಪ್ರಯತ್ನದಲ್ಲಿ ವಿಫಲವಾದ ನಂತರ ನೇಣು ಬಿಗಿದುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದರು, ಆದರೆ ಆಕೆಯ ಪತಿ ಸಂಜೀವ್ ಅವರನ್ನು ಉಳಿಸುವ ಬದಲು ಘಟನೆಯನ್ನು ಚಿತ್ರೀಕರಿಸುವುದನ್ನು ಮುಂದುವರೆಸಿದ್ದಾನೆ.
ಘಟನೆಯ ನಂತರ, ಸಂಜೀವ್ ಶೋಬಿತಾ ಅವರ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸಿದ ನಂತರ ಆಕೆಯ ಶವ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ.
“ನಾವು ಮನೆಗೆ ತಲುಪಿದಾಗ, ನಮ್ಮ ಮಗಳ ದೇಹವು ಹಾಸಿಗೆಯ ಮೇಲೆ ಬಿದ್ದಿತ್ತು. ಸಂಜೀವ್ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುಲಿಲ್ಲ . ನಾವು ತಕ್ಷಣ ಅವಳನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದೇವೆ, ಅಲ್ಲಿ ಅವಳು ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು ಎಂದು ಪೋಷಕರು ಹೇಳಿದ್ದಾರೆ.
ಸಂಜೀವ್ ವಿಡಿಯೋ ನೀಡಿದ್ದಾರೆ. ಈ ಹಿಂದೆಯೂ ಆಕೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಳು ಎಂದು ಆತ ನಮಗೆ ತಿಳಿಸಿದ್ದಾನೆ” ಎಂದು ಶೋಭಿತಾ ತಂದೆ ರಾಜ್ಕಿಶೋರ್ ಹೇಳಿದ್ದಾರೆ. ಪೊಲೀಸರು ಶೋಬಿತಾ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವಿಡಿಯೋ ಸಹಿತ ಸಂಪೂರ್ಣ ಘಟನೆಯ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಅನುಪ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ