ಸಿಎಪಿಎಫ್, ಪೊಲೀಸ್ ಪಡೆಗಳಿಗೆ ನೀಡಲಾಗುತ್ತಿದ್ದ 3 ಪದಕಗಳ ವಿತರಣೆ ಸ್ಥಗಿತ
Team Udayavani, Sep 21, 2022, 10:30 PM IST
ನವದೆಹಲಿ: ಆಂತರಿಕ ಭದ್ರತೆ ಮತ್ತು ಇತರೆ ವಿಶಿಷ್ಟ ಸೇವೆಗಳಿಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಮತ್ತು ಇತರೆ ಪೊಲೀಸ್ ಪಡೆಗಳಿಗೆ ನೀಡಲಾಗುತ್ತಿದ್ದ ಮೂರು ಪದಕಗಳನ್ನು ಕೇಂದ್ರ ಗೃಹ ಸಚಿವಾಲಯ ಬುಧವಾರ ಹಿಂಪಡೆದಿದೆ.
ಅಂದರೆ, ಇನ್ನು ಮುಂದೆ ಸಿಎಪಿಎಫ್ ಯೋಧರಿಗೆ ಹಾಗೂ ಪೊಲೀಸರಿಗೆ ನೀಡಲಾಗುತ್ತಿದ್ದ “ಪೊಲೀಸ್ ಆಂತರಿಕ ಸುರಕ್ಷಾ ಸೇವಾ ಪದಕ'(ಜಮ್ಮು ಮತ್ತು ಕಾಶ್ಮೀರ/ಎಲ್‌ಡಬ್ಲ್ಯುಇ ಪ್ರದೇಶ/ಈಶಾನ್ಯ ವಲಯ), “ಉತ್ಕೃಷ್ಟ ಸೇವಾ ಪದಕ’ ಮತ್ತು “ಅತಿ ಉತ್ಕೃಷ್ಟ ಸೇವಾ ಪದಕ’ಗಳನ್ನು ನೀಡಲಾಗುವುದಿಲ್ಲ.
ಪ್ರಶಸ್ತಿ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.