ಕ್ರಿಕೆಟಿಗ ಶಮೀ ನಿವಾಸದ ಕಾವಲುಗಾರನ ಮೇಲೆ ಹಲ್ಲೆ; ಮೂವರ ಸೆರೆ
Team Udayavani, Jul 18, 2017, 11:29 AM IST
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮೀ ಅವರ ಇಲ್ಲಿನ ಅಪಾರ್ಟ್‌ಮೆಂಟನ್ನು ನೋಡಿಕೊಳ್ಳುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಕೋಲ್ಕತ ಪೊಲೀಸರು ಬಂಧಿಸಿದ್ದಾರೆ.
ಕಳೆದ ಶನಿವಾರ ಸಂಜೆ ಶಮೀ ಅವರು ಪತ್ನಿಯೊಂದಿಗೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಅವರ ಕಾರು ಅವರ ಮನೆ ಸಮೀಪ ನಿಲ್ಲಿಸಿಡಲಾಗಿದ್ದ ಬೈಕಿಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಬೈಕಿನವ ಶಮೀ ಕಾರು ಚಾಲಕನೊಂದಿಗೆ ಜಗಳಕ್ಕೆ ಇಳಿದ. ಆಗ ಶಮೀ ಅವರು ಮಧ್ಯ ಪ್ರವೇಶಿಸಿ ಕಲಹವನ್ನು ಶಮನಗೊಳಿಸಿದ್ದರು.
ಆದರೆ ರಾತ್ರಿ ಆ ಬೈಕ್ ಯುವಕನು ಮುಯ್ಯಿ ತೀರಿಸಿಕೊಳ್ಳುವ ಸಲುವಾಗಿ ತನ್ನ ಕೆಲವು ಸ್ನೇಹಿತ ರೊಂದಿಗೆ ಬಂದು ಆಪಾರ್ಟ್‌ಮೆಂಟಿನ ಗೇಟ್ ಕೀಪರ್ ನನ್ನು ಹೊಡೆದು ಹಲ್ಲೆಗೊಳಿಸಿದನಲ್ಲದೆ ತಡೆಯಲು ಬಂದ ಶಮೀ ಅವರಿಗೆ ಬೈಗುಳ ಸುರಿಮಳೆಗೈದ ಎನ್ನಲಾಗಿದೆ.
ಭಾನುವಾರ ರಾತ್ರಿ ಈ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು ಅವರು ಮೂವರು ಆರೋಪಿಗಳನ್ನು ಬಂಧಿಸಿದರು. ನಿನ್ನೆ ಸೋಮವಾರ ಆರೋಪಿಗಳನ್ನು ಆಲೀಪುರ ಕೋರ್ಟಿನಲ್ಲಿ ಹಾಜರುಪಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ