5 ಲಕ್ಷ ರೂ ಮೌಲ್ಯದ ಚಿನ್ನ, ಬಾಲಕ ಮತ್ತು ಮೂಷಿಕ; ಇದೇನಿದು ಸ್ಟೋರಿ?
Team Udayavani, Jun 16, 2022, 3:30 PM IST
ಮುಂಬಯಿ: ಅಸಹಜ ಘಟನೆಯೊಂದರಲ್ಲಿ ಗೋಕುಲಧಾಮ್ ಕಾಲೋನಿ ಬಳಿಯ ಗಟಾರವೊಂದರಲ್ಲಿ ಇಲಿಯ ವಶದಲ್ಲಿದ್ಧ 5 ಲಕ್ಷ ರೂ ಮೌಲ್ಯದ 10 ತೊಲ ಚಿನ್ನವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇಲಿ ಹೊತ್ತೊಯ್ದ ಚಿನ್ನ ಸುಂದರಿ ಎಂಬ ಮಹಿಳೆಗೆ ಸೇರಿದ್ದು, ಈ ಚಿನ್ನವನ್ನು ಅಡವಿಟ್ಟು ಮಗಳ ಮದುವೆ ಸಾಲ ತೀರಿಸಲು ಬ್ಯಾಂಕ್‌ಗೆ ತೆರಳುತ್ತಿ ದ್ದ ವೇಳೆ , ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ನಲ್ಲಿ ವಡಾಪಾವ್ ಮಾತ್ರ ಇದೆ ಎಂದು ಭಾವಿಸಿ ಸುಂದರಿ ಅವರು ತಪ್ಪಾಗಿ ರಸ್ತೆಯಲ್ಲಿದ್ದ ಹುಡುಗನಿಗೆ ನೀಡಿದ್ದರು. ಬ್ಯಾಂಕ್ ತಲುಪಿದ ನಂತರವೇ ತನ್ನ ಬಳಿಯಿದ್ದ ಚೀಲವನ್ನು ನೋಡಿದಾಗ ಆಕೆಗೆ ತನ್ನ ತಪ್ಪಿನ ಅರಿವಾಯಿತು. ಅವರು ಹುಡುಗ ಇದ್ದ ಸ್ಥಳಕ್ಕೆ ಹಿಂತಿರುಗಿದರಾದರೂ ಅವನನ್ನು ಹುಡುಕಲಾಗಲಿಲ್ಲ. ಬಳಿಕ ಪೊಲೀಸರ ಮೊರೆ ಹೋಗಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಬಾಲಕ ಮತ್ತು ಆತನ ತಾಯಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಅವರನ್ನು ಸಂಪರ್ಕಿಸಿ ಚೀಲದ ಬಗ್ಗೆ ವಿಚಾರಿಸಿದಾಗ, ಕಸದ ರಾಶಿಯಲ್ಲಿ ಚೀಲದ ಜತೆಗೆ ವಡಾಪಾವ್ ಕೂಡ ಎಸೆದಿದ್ದೇವೆ ಎಂದು ಮಗುವಿನ ತಾಯಿ ತಿಳಿಸಿದ್ದಾರೆ.
ಆ ಕಸದ ಗುಂಡಿಯ ಬಳಿಯಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅವರು ಹುಡುಕುತ್ತಿದ್ದ ಚೀಲ ಇಲಿ ವಶದಲ್ಲಿತ್ತು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಪೊಲೀಸರು ಇಲಿಯನ್ನು ಅಟ್ಟಿಸಿಕೊಂಡು ಹೋದರೂ ಅದು ಸಮೀಪದ ಗಟಾರಿಗೆ ಹಾರಿದೆ . ಕೊನೆಗೂ ಪೊಲೀಸರು ಚಿನ್ನಾಭರಣಗಳಿದ್ದ ಬ್ಯಾಗ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು