ಗುರುದ್ವಾರದಲ್ಲೇ ನಮಾಜ್‌ಗೆ ಜಾಗ
Team Udayavani, Nov 20, 2021, 10:30 PM IST
ಗುರುಗ್ರಾಮ: ಹರ್ಯಾಣದ ಗುರುಗ್ರಾಮ ಜಿಲ್ಲಾಡಳಿತವು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಗುರುದ್ವಾರಗಳು ಮುಸ್ಲಿಂ ಬಾಂಧವರಿಗೆ ಶುಕ್ರವಾರದ ನಮಾಜ್‌ಗೆ ಜಾಗ ಬಿಟ್ಟುಕೊಟ್ಟಿವೆ. ಆದರೆ ಈ ಶುಕ್ರವಾರ ಗುರುದ್ವಾರಕ್ಕೆ ಬರಲು ಮುಸ್ಲಿಮರು ನಿರಾಕರಿಸಿದ್ದಾಗಿ ಹೇಳಲಾಗಿದೆ.
ಈ ಶುಕ್ರವಾರ ಎಲ್ಲ ಗುರುದ್ವಾರಗಳಲ್ಲಿ ಗುರುಪುರಬ್ ಆಚರಣೆ ನಡೆಸಲಾಗುತ್ತಿತ್ತು. ಈ ವೇಳೆ ನಮಾಜ್‌ಗೆಂದು ಅಲ್ಲಿಗೆ ತೆರಳಿದರೆ ಮನಸ್ತಾಪ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಅವಕಾಶವನ್ನು ತಿರಸ್ಕರಿಸಿದ್ದಾಗಿ ಹೇಳಿದ್ದಾರೆ. “ಮುಂದಿನ ವಾರದಿಂದ ಮುಸ್ಲಿಂ ಬಾಂಧವರು ಗುರುದ್ವಾರದಲ್ಲಿ ಶುಕ್ರವಾರದ ನಮಾಜ್ ಮಾಡುವ ಸಾಧ್ಯತೆಯಿದೆ’ ಎಂದು ಗುರುದ್ವಾರಗಳು ತಿಳಿಸಿವೆ.