ಮಂಗಳನ ಅಂಗಳಕ್ಕೆ ನಾಸಾ ನೌಕೆ

Team Udayavani, May 6, 2018, 6:00 AM IST

ಕ್ಯಾಲಿಫೋರ್ನಿಯಾ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳನ ಅಧ್ಯಯನಕ್ಕಾಗಿ ಇನ್‌ಸೈಟ್‌ ಎಂಬ ಲ್ಯಾಂಡರ್‌ ಅನ್ನು ಶನಿವಾರ ಉಡಾವಣೆ ಮಾಡಿದೆ. ಭಾರತೀಯ ಸಮಯ ಬೆಳಗಿನ ಜಾವ 4.35ಕ್ಕೆ ಕ್ಯಾಲಿಫೋರ್ನಿಯಾದ ವ್ಯಾಂಡರ್‌ಬರ್ಗ್‌ ವಾಯುನೆಲೆಯಿಂದ ಉಡಾವಣೆ ಮಾಡಲಾಗಿದೆ.

ಮಂಗಳನಲ್ಲಿ ಉಂಟಾಗುವ ಕಂಪನಗಳು, ಹಿಮಪಾತ ಮತ್ತು ಉಲ್ಕಾಪಾತದ ಬಗ್ಗೆ ಈ ಇನ್‌ಸೈಟ್‌ ಮಾಹಿತಿ ಒದಗಿಸಲಿದೆ. ಅಲ್ಲದೆ ಮಂಗಳನ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುವುದು ಹಾಗೂ ಮಂಗಳನ ಅಂಗಳಕ್ಕೆ ಯಾನ ಕೈಗೊಳ್ಳಲು ಅನುವು ಮಾಡುವುದು ಸೇರಿದಂತೆ ಹಲವು ಮಹತ್ವದ ಕ್ರಮಗಳಿಗೆ ಇನ್‌ಸೈಟ್‌ ನೆರವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಲ್ಯಾಂಡರ್‌ ನವೆಂಬರ್‌ 26ರಂದು ಕೆಂಪು ಗ್ರಹದ ಮೇಲೆ ಇಳಿಯಲಿದೆ.

ಈ ಲ್ಯಾಂಡರ್‌ನಲ್ಲಿ ಫ್ರೆಂಚ್‌ ಸ್ಪೇಸ್‌ ಏಜೆನ್ಸಿ ನಿರ್ಮಿಸಿದ ಸೀಸ್ಮೋಮೀಟರ್‌ ಇರಲಿದೆ. ಮಂಗಳನಲ್ಲಿ ಇಳಿಯುತ್ತಿದ್ದಂತೆಯೇ ಸ್ವಯಂ ಚಲಿಸುವ ರೋಬೋಟ್‌ನಂತಹ ಅಂಗವು ತೆರೆದುಕೊಳ್ಳುತ್ತದೆ ಮತ್ತು ಸೀಸ್ಮೋಮೀಟರ್‌ ಅನ್ನು ಮಂಗಳನ ಮೇಲ್ಮೆ„ ಮೇಲೆ ಇಡುತ್ತದೆ. ಅಲ್ಲದೆ ಇದರಲ್ಲಿ ಸೆಲ್ಫ್ ಹ್ಯಾಮರಿಂಗ್‌ ಪ್ರೋಬ್‌ ಕೂಡ ಇರಲಿದ್ದು, ಇದು ಮಂಗಳನಲ್ಲಿ ಉಷ್ಣಾಂಶವನ್ನು ಅಳೆಯಲಿದೆ. ಈ ಉಪಕರಣಗಳ ಸ್ಥಾಪನೆಗೆ ಮಂಗಳನ ಮೇಲ್ಮೆ„ಯಲ್ಲಿ 10 ರಿಂದ 16 ಅಡಿಯವರೆಗೆ ಗುಂಡಿ ತೋಡಲಾಗುತ್ತದೆ. ಮಂಗಳನಲ್ಲಿಗೆ ಮಾನವರನ್ನು ಕಳುಹಿಸಲು ಅಲ್ಲಿನ ತಾಪಮಾನವನ್ನು ಅಳೆಯುವುದು ಅತ್ಯಂತ ಪ್ರಮುಖವಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ