ದೇವಿಂದರ್ ಗಿತ್ತೇ ISI ಸಂಪರ್ಕ ; ಈತನ ಮಕ್ಕಳು ಬಾಂಗ್ಲಾದಲ್ಲಿ ಕಲಿಯುತ್ತಿರುವುದೇಕೆ?

Team Udayavani, Jan 19, 2020, 6:58 PM IST

ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಸ್ವಯಂಘೋಷಿತ ಕಮಾಂಡರ್ ನವೀದ್ ಬಾಬು ಹಾಗೂ ಅತೀಫ್ ಮತ್ತು ವಕೀಲ ಇರ್ಫಾನ್ ಮಿರ್ ಅವರನ್ನು ತನ್ನ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಭದ್ರತಾ ಪಡೆಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಡಿಎಸ್.ಪಿ. ದೇವಿಂದರ್ ಸಿಂಗ್ ಅವರನ್ನು ಎನ್.ಐ.ಎ. ಕಳೆದ ಕೆಲವು ದಿನಗಳಿಂದ ತೀವ್ರ ತಪಾಸಣೆಗೆ ಒಳಪಡಿಸುತ್ತಿದೆ.

ಇದೀಗ ಕೇಂದ್ರ ಗೃಹಸಚಿವಾಲಯದ ಆದೇಶದ ಮೇಲೆ ರಾಷ್ಟ್ರೀಯ ತನಿಖಾ ತಂಡವು ದೇವಿಂದರ್ ಮೇಲೆ ಅಧಿಕೃತ ಪ್ರಕರಣವನ್ನು ದಾಖಲು ಮಾಡಿಕೊಂಡಿದೆ. ಮತ್ತು ಪಾಕಿಸ್ಥಾನಿ ಗುಪ್ತಚರ ಇಲಾಖೆ ಐ.ಎಸ್.ಐ. ಜೊತೆಗೆ ದಾವಿಂದರ್ ಗಿರುವ ನಂಟಿನ ಜಾಡಿನಲ್ಲಿ ತನ್ನ ತನಿಖೆಯನ್ನು ಮುಂದುವರಿಸಿದೆ.

2019ರಲ್ಲಿ ದೇವಿಂದರ್ ಬಾಂಗ್ಲಾದೇಶಕ್ಕೆ ಮೂರು ಸಲ ಭೇಟಿ ಕೊಟ್ಟಿರುವುದು ಹಲವಾರು ಸಂಶಯಗಳನ್ನು ಹುಟ್ಟುಹಾಕಿದೆ.  ತಮ್ಮ ಈ ಮೂರು ಭೇಟಿಯ ಅವಧಿಯಲ್ಲೂ ಸಹ ದೇವಿಂದರ್ ಅಲ್ಲಿ ಹಲವು ದಿನಗಳ ಕಾಲ ತಂಗಿದ್ದರು. ಮಾತ್ರವಲ್ಲದೇ ದೇವಿಂದರ್ ಅವರ ಇಬ್ಬರು ಪುತ್ರಿಯರು ಬಾಂಗ್ಲಾದೇಶದಲ್ಲಿ ಕಲಿಯುತ್ತಿರುವ ಮಾಹಿತಿಯೂ ಸಹ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದ್ದು, ಐ.ಎಸ್.ಐ. ಸಂಘಟನೆಯೇ ಇವರಿಬ್ಬರ ಕಲಿಕಾ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಿರುವ ಸಂದೇಹ ಇದೀಗ ವ್ಯಕ್ತವಾಗಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ದೇವಿಂದರ್ ಅವರು ಐ.ಎಸ್.ಐ. ಏಜೆಂಟ್ ಗಳನ್ನು ಢಾಕಾ ಅಥವಾ ಬಾಂಗ್ಲಾದೇಶದಲ್ಲಿ ಭೇಟಿಯಾಗಿದ್ದರೇ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅವರ ವಿಚಾರಣೆಯನ್ನು ತೀವ್ರಗೊಳಿಸುವ ಸಾಧ್ಯತೆಗಳಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಹಾಗೂ ಇತರೇ ಏಜೆನ್ಸಿಗಳು ಈಗಾಗಲೇ ದೇವಿಂದರ್ ಅವರ ಬ್ಯಾಂಕ್ ಅಕೌಂಟ್ ಗಳ ಪರಿಶೀಲನೆಯನ್ನು ನಡೆಸಿದ್ದು ಯಾವುದಾದರೂ ಶಂಕಾಸ್ಪದ ಹಣಕಾಸಿನ ವ್ಯವಹಾರಗಳು ನಡೆದಿವೆಯೋ ಎಂಬ ಪರಿಶೀಲನೆಯನ್ನೂ ಸಹ ನಡೆಸಿವೆ. ಆದರೆ ದೇವಿಂದರ್ ಸಿಂಗ್ ಅವರ ಮನೆಯಲ್ಲಿ ಸಿಕ್ಕಿದ 7.5 ಲಕ್ಷ ರೂಪಾಯಿ ಹಣದ ಮೂಲ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ.

ದೇವಿಂದರ್ ಜೊತೆ ಕಾರಿನಲ್ಲಿ ಸೆರೆ ಸಿಕ್ಕಿದ ಹಿಜ್ಬುಲ್ ಉಗ್ರ ನವೀದ್ ಬಾಬು ತಲೆಯ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ 20 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದರು. ಆದರೆ ಅತನನ್ನು ಬಂಧಿಸುವ ಬದಲು ದೇವಿಂದರ್ ಸಿಂಗ್ ಆತನನ್ನು ಸುರಕ್ಷಿತವಾಗಿ ದೆಹಲಿ ತಲುಪಿಸಲು ಆತನಿಂದ 12 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿರುವುದು ವಿಚಿತ್ರವಾಗಿದೆ.

ದೇವಿಂದರ್ ಈ ಮೊದಲು 1990ರಲ್ಲಿ ಪಾಕಿಸ್ಥಾನದ ಉಗ್ರ ಮಹಮ್ಮದ್ ಗೆ ಕಾಶ್ಮೀರದಿಂದ ದೆಹಲಿಗೆ ಸುರಕ್ಷಿತವಾಗಿ ಹೋಗಲು ಸಹಾಯ ಮಾಡಿದ್ದ. ಇದೇ ಮಹಮ್ಮದ್ ಬಳಿಕ 2001ರ ಸಂಸತ್ ಭವನದ ಮೇಲಿನ ದಾಳಿಯಲ್ಲಿ ಭದ್ರತಾ ಪಡೆಗಳ ಕೈಯಿಂದ ಹತನಾಗಿದ್ದ. ಮಾತ್ರವಲ್ಲದೇ ದೇವಿಂದರ್ 2005ರಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ಕು ಜನ ಕಾಶ್ಮೀರಿ ಉಗ್ರರಿಗೂ ಸಹ ದೇವಿಂದರ್ ಸುರಕ್ಷಿತವಾಗಿ ಸಾಗಲು ಸಹಾಯ ಮಾಡಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇವರಲ್ಲಿ ಒಬ್ಬ ಉಗ್ರನಿಗೆ ವಯರ್ ಲೆಸ್ ಸೆಟ್, ಒಂದು ಪಿಸ್ತೂಲ್ ಹಾಗೂ ಸುರಕ್ಷಿತವಾಗಿ ಪಾರಾಗಲು ಅಗತ್ಯವಾಗಿದ್ದ ಶಿಫಾರಸು ಪತ್ರವನ್ನೂ ಸಹ ನೀಡಿದ್ದ ಎಂಬ ಮಾಹಿತಿ ಲಭಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....

  • ಕುಲುಮೆಯ ಬೆಂಕಿ ಮುಂದೆ, ದುಡಿದು ದಣಿವ ಜೀವ. ಪ್ರಾಯ 65 ದಾಟಿದೆ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು ವೀರಾಚಾರಿ ಅವರು ಬ್ಯಾಂಕಿನಲ್ಲಿ ಕೂಡಿಡದೆ, ನಮ್ಮೆಲ್ಲರ...

  • ರಷ್ಯಾ ಮೂಲದ ಸೀಬರ್ಡ್‌ಗಳಿಗೆ, ಕಾರವಾರದ ಕಡಲತಡಿ ಪಕ್ಷಿಕಾಶಿ ಇದ್ದಂತೆ. ಆದರೆ, ದುರಾದೃಷ್ಟ. ಈ ಬಾರಿ ಇಲ್ಲಿ ಸೀಬರ್ಡ್‌ನ ಚಿಲಿಪಿಲಿ ಕೇಳಿಸುತ್ತಿಲ್ಲ. ದೂರದ ಊರಿನ...