ಪ್ರಧಾನಿ ವಿರುದ್ಧ ಟೀಕೆ:ಕಾಂಗ್ರೆಸ್‌ ನಾಯಕ ಸಿಧುಗೆ ಕ್ಲೀನ್‌ ಚಿಟ್‌

Team Udayavani, May 16, 2019, 10:48 AM IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮದುಮಗಳಿದ್ದ ಹಾಗೆ ಎಂದು ಹೇಳಿಕೆ ನೀಡಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರಿಗೆ ಇಂಧೋರ್‌ ಚುನಾವಣಾ ಆಯೋಗದ ಕಚೇರಿ ಕ್ಲೀನ್‌ ಚಿಟ್‌ ನೀಡಿದೆ.

ಸಿಧು ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ಕಚೇರಿ ತಿಳಿಸಿದೆ.

ಇಂಧೋರ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿ ಮೋದಿ ಮದುಮಗಳು ಇದ್ದಹಾಗೆ, ಕಡಿಮೆ ಕೆಲಸ ಮಾಡಿ ಹೆಚ್ಚು ಪ್ರಚಾರ ಪಡೆಯುತ್ತಾರೆ ಎಂದು ಲೇವಡಿ ಮಾಡಿದ್ದರು.

ಚುನಾವಣಾ ಆಯೋಗ ಪ್ರಧಾನಿ ವಿರುದ್ಧದ ಟೀಕೆಗಾಗಿ ಸಿಧು ಅವರಿಗೆ ನೊಟೀಸ್‌ ನೀಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ