ವಿಶ್ವಯುದ್ಧ ಕಾಲದ 5 ಫಿರಂಗಿಗಳು ಪತ್ತೆ
Team Udayavani, Dec 4, 2022, 7:15 PM IST
ಕೋಲ್ಕತಾ: ಹೂಗ್ಲಿ ನದಿ ದಂಡೆಯ ವ್ಯಾಪ್ತಿಯಲ್ಲಿ ಮೊದಲನೇ ಮಹಾಯುದ್ಧ ಕಾಲದ ಐದು ಫಿರಂಗಿಗಳು ಪತ್ತೆಯಾಗಿವೆ.
ಕೋಲ್ಕತಾದಲ್ಲಿ ಇರುವ ನೌಕಾಪಡೆ ಕಚೇರಿಯ ಹಿರಿಯ ಅಧಿಕಾರಿಗಳು ಈ ಅಂಶ ಖಚಿತಪಡಿಸಿದ್ದಾರೆ. ಈ ಪೈಕಿ ಎರಡು ಫಿರಂಗಿಗಳನ್ನು ಆಯ್ದುಕೊಂಡು ಅವುಗಳಿಗೆ ಬಣ್ಣ ಬಳಿದು ಯುದ್ಧ ನೌಕೆ ಐಎನ್‌ಎಸ್ ಸುಭಾಷ್‌ನಲ್ಲಿ ಅಲಂಕಾರಿಕವಾಗಿ ಬಳಕೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಕ್ಯಾ.ಜಾಯ್‌ದೀಪ್ ಚೌಧರಿ ಹೂಗ್ಲಿ ನದಿ ಕಿನಾರೆಯ ಸಮೀಪ ಜಮೀನು ಸ್ವತ್ಛಗೊಳಿಸುತ್ತಿದ್ದ ವೇಳೆ ಫಿರಂಗಿಗಳು ಇದ್ದದ್ದು ಪತ್ತೆಯಾಯಿತು. ಅವುಗಳನ್ನು ಯುದ್ಧದ ಹಡಗುಗಳಲ್ಲಿ ಬಳಕೆ ಮಾಡಲಾಗುತ್ತಿತ್ತು. 2021ರಲ್ಲಿಯೇ ಅವುಗಳು ಇರುವ ಬಗ್ಗೆ ಗೊತ್ತಾಗಿದ್ದರೂ, ಇತ್ತೀಚೆಗಷ್ಟೇ ಅವುಗಳನ್ನು ಹೊರತೆಗೆಯಲಾಗಿತ್ತು ಎಂದು ಹೇಳಿದ್ದಾರೆ.