ಪಕ್ಕದ ಮನೆಯ ಮಹಿಳೆಯ ಟೀಕೆಗೆ ಕುಪಿತನಾಗಿ ಆಕೆಯ ಮನೆಯವರಿಗೆಲ್ಲಾ ಇರಿದ! ಇಬ್ಬರು ಸಾವು
Team Udayavani, Oct 30, 2021, 9:27 AM IST
ಥಾಣೆ: ಮಹಾರಾಷ್ಟ್ರದ ಭಿವಂಡಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನೆರೆಹೊರೆಯವರು ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ಜಗಳದಿಂದ ಆರಂಭವಾದ ಈ ಘಟನೆಯು ಭಿವಂಡಿಯ ಗೈಬಿ ನಗರ ಪ್ರದೇಶದಲ್ಲಿ ನಡೆದಿದ್ದು, ಆರೋಪಿ ಮೊಹಮ್ಮದ್ ಅನ್ಸಾರುಲ್ ಹಕ್ ಲುಕ್ಮಾನ್ ಅನ್ಸಾರಿ (45 ವ) ಎಂಬಾತನನ್ನು ಬಂಧಿಸಲಾಗಿದೆ ಎಂದು ಶಾಂತಿ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ದಾಳಿಯಲ್ಲಿ ಕಮ್ರುಜ್ಮಾ ಅನ್ಸಾರಿ (42) ಮತ್ತು ಇಮ್ತಿಯಾಜ್ ಮೊಹಮ್ಮದ್ ಜುಬೇರ್ ಖಾನ್ (35) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರುಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಗಾಯಗೊಂಡ ವ್ಯಕ್ತಿಗಳಲ್ಲಿ ಒಬ್ಬರು, 36 ವರ್ಷ ವಯಸ್ಸಿನ ಮಹಿಳೆಯು ಮತ್ತು ಆರೋಪಿಯ ವಿರುದ್ಧ ಕೆಲವು ಟೀಕೆಗಳನ್ನು ಮಾಡಿದ್ದರು. ಇದರಿಂದ ಕೋಪಗೊಂಡ ಆರೋಪಿ ಶುಕ್ರವಾರ ಬೆಳಗ್ಗೆ ತನ್ನ ಮನೆಯ ಬಾಗಿಲ ಬಳಿ ನಿಂತಿದ್ದ ಕಮ್ರುಜ್ಮಾ ಅನ್ಸಾರಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆಗ ಇಮ್ತಿಯಾಜ್ ಖಾನ್ ಮಧ್ಯಪ್ರವೇಶಿಸಿದಾಗ ಆತನ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್ ರೆಕಗ್ನಿಷನ್ ಇನ್ನು ಅಧಿಕೃತ ಪುರಾವೆ
ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ
ವಸುಂಧರಾ ಇಲ್ಲದೆ ನಡೆಯಲಿದೆ ಚುನಾವಣೆ? ರಾಜ್ಯ ಬಿಜೆಪಿ ಅಧ್ಯಕ್ಷರು ಹೇಳಿದೆನು?
ಮಳೆಗೆ ಬಳಲಿದ ಅಸ್ಸಾಂ; ನಿಲ್ಲದ ಪ್ರವಾಹ ಪ್ರಕೋಪ; ರಕ್ಷಣಾ ಕಾರ್ಯ
ಇ-ವಾಹನ ಬಳಕೆಗೆ ಮುಂದಾದ ಮೆಘಾಲಯ ಸಿಎಂ ಕಾನ್ರಾಡ್ ಸಂಗ್ಮಾ