
ಮದುವೆಯಾದ ಮೂರೇ ದಿನಕ್ಕೆ ಕೋವಿಡ್‍ಗೆ ಬಲಿಯಾದ ಯುವಕ
Team Udayavani, May 1, 2021, 2:58 PM IST

ಉತ್ತರ ಪ್ರದೇಶ : ದೇಶದಲ್ಲಿ ಕೋವಿಡ್ ಸೋಂಕು ರಣಕೇಕೆ ಹಾಕುತ್ತಿದ್ದು, ಇದೀಗ ನವವಿವಾಹಿತನೋರ್ವನನ್ನು ಬಲಿ ಪಡೆದಿದೆ. ಮದುವೆಯಾದ ಮೂರೇ ದಿನಕ್ಕೆ ಜಾಟಾನ್ ನಿವಾಸಿ ಅರ್ಜುನ್ ಮಹಾಮಾರಿ ಸೋಂಕಿಗೆ ಸಾವನ್ನಪ್ಪಿದ್ದಾರೆ.
ಏ.25 ರಂದು ಅರ್ಜುನ್ ಅವರು ಬಬಲಿ ಎಂಬಾಕೆ ಜೊತೆ ಹಸೆಮಣೆ ಏರಿದ್ದರು. ಅಂದು ಸಂಜೆ 7ಕ್ಕೆ ಮದುವೆ ಮುಗಿಸಿಕೊಂಡು ಯುವತಿ ಮನೆಯಿಂದ ಬಿಜನೌರ್ಗೆ ವರನ ಕುಟುಂಬ ವಾಪಸಾಗಿತ್ತು. ಆ ದಿನ ರಾತ್ರಿಯಿಂದ ಅರ್ಜನ್ಗೆ ತೀವ್ರ ಜ್ವರ ಉಲ್ಬಣವಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜನ್ನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆತನಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿತು. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೂ ಸಹ ಅರ್ಜುನ್ ಆರೋಗ್ಯ ಕ್ಷಿಣಿಸುತ್ತಲೇ ಹೋಯಿತು.
ಏಪ್ರಿಲ್ 29ರಂದು ಆಕ್ಸಿಜನ್ ಕೊರತೆಯಿಂದಾಗಿ ಅರ್ಜುನ್ ಸಾವಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಷಯ ತಿಳಿದ ಎರಡೂ ಕುಟುಂಬ ಮೌನಕ್ಕೆ ಶರಣಾಯಿತು. ಮಗ ಮತ್ತು ಪತಿಯನ್ನು ಕಳೆದುಕೊಂಡ ಆ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ