ಬಿಹಾರ ಚುನಾವಣೆ: ಸೀಟು ಹಂಚಿಕೆಯಲ್ಲಿ 50-50 ಸೂತ್ರ ಅನುಸರಿಸಿದ ಜೆಡಿಯು-ಬಿಜೆಪಿ: ವರದಿ

Team Udayavani, Oct 4, 2020, 1:01 PM IST

bihar-2

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟದ ಸೀಟು ಹಂಚಿಕೆ ಬಹುತೇಕ ಅಂತಿಮ ಹಂತ ತಲುಪಿದ್ದು 50-50 ಸೂತ್ರವನ್ನು ಅನುಸರಿಸಿವೆ ಎಂದು ವರದಿ ತಿಳಿಸಿದೆ.

ಒಟ್ಟು 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರ್ ನಲ್ಲಿ ಜೆಡಿಯು 122 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 121 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ನಿತೀಶ್ ಕುಮಾರ್ ಅವರ ಪಕ್ಷವು ಜೀತಾನ್ ರಾಮ್ ಮಾಂಜಿ ಅವರ ಹಿಂದೂಸ್ತಾನಿ ಅವಮ್ ಮೋರ್ಚಾಗೆ ತನ್ನ ಕೋಟಾದಲ್ಲಿ ಅವಕಾಶ ನೀಡಿದರೆ, ಬಿಜೆಪಿ ಮೈತ್ರಿಕೂಟದಲ್ಲಿ ಉಳಿದುಕೊಂಡರೆ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ ತನ್ನ ಪಾಲಿನಿಂದ ಸ್ಥಾನಗಳನ್ನು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಬಿಹಾರದ ಆಡಳಿತರೂಢ ಮೈತ್ರಿಕೂಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು ನಿತೀಶ್ ಕುಮಾರ್ ಮತ್ತು ಪಾಸ್ವಾನ್ ರ ಪುತ್ರ ಚಿರಾಗ್ ಪಾಸ್ವಾನ್ ನಡುವಿನ ದೀರ್ಘಕಾಲದ ಒಳಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಡಿ.ಕೆ. ರವಿ ಪತ್ನಿ ಕುಸುಮಾ

ಬಿಹಾರ ವಿಧಾನಸಭಾ ಚುನಾವಣೆಯು ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಮೂರು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಕೋವಿಡ್ ನಂತರ ದೇಶದಲ್ಲಿ ಎದುರಾಗುತ್ತಿರುವ ಮೊದಲ ವಿಧಾನಸಬೆ ಚುನಾವಣೆ ಇದಾಗಿದೆ.

ಏತನ್ಮಧ್ಯೆ ವಿಪಕ್ಷಗಳದ ಸೀಟು ಹಂಚಿಕೆಯೂ ಆಗಿದ್ದು, ಆರ್​ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೀಟು ಹಂಚಿಕೆಯಲ್ಲಿ ಒಮ್ಮತಕ್ಕೆ ಬಂದಿವೆ. ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ 144 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಜನತಾ ದಳ ಸ್ಪರ್ಧಿಸಲಿದೆ. ಇದರಲ್ಲಿ ವಿಐಪಿ ಮತ್ತು ಜೆಎಂಎಂ ಪಕ್ಷಗಳಿಗೂ ಒಂದಷ್ಟು ಸ್ಥಾನಗಳನ್ನ ಆರ್​ಜೆಡಿ ಬಿಟ್ಟುಕೊಡಲಿದೆ. ಕಾಂಗ್ರೆಸ್ ಪಕ್ಷ 70 ಕ್ಷೇತ್ರಗಳನ್ನ ಪಡೆದಿದೆ. ಉಳಿದ ಸ್ಥಾನಗಳನ್ನ ಕಮ್ಯೂನಿಸ್ಟ್ ಪಕ್ಷಗಳಿಗೆ ನೀಡಲಾಗಿದೆ. ಆರ್​ಜೆಡಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನ ಮಹಾಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: ದೀಪಿಕಾ, ಶೃದ್ಧಾ, ಸಾರಾ ವಿಚಾರಣೆ ನಡೆಸಿದ್ದ ಎನ್ ಸಿಬಿ ಅಧಿಕಾರಿಗೆ ಕೋವಿಡ್ ಸೋಂಕು ದೃಢ

ಟಾಪ್ ನ್ಯೂಸ್

2-udupi

Udupi:ಪ್ರವಾಸಿ ವಾಹನಗಳಿಗೆ ಜಿಪಿಎಸ್,ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

1-mng

Mangaluru: ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ ಯತ್ನ

1-siddu-a

Valmiki ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

08

Tollywood: ಪ್ರಭಾಸ್‌ ʼಫೌಜಿʼಗೆ ಪಾಕಿಸ್ತಾನದ ಟಾಪ್‌ ನಟಿ ಎಂಟ್ರಿ?

Stock Market: ಕೇಂದ್ರ ಬಜೆಟ್‌ ಮಂಡನೆ- ಷೇರುಪೇಟೆ ಸೂಚ್ಯಂಕ, ನಿಫ್ಟಿ ಭಾರೀ ಕುಸಿತ

Stock Market: ಕೇಂದ್ರ ಬಜೆಟ್‌ ಮಂಡನೆ- ಷೇರುಪೇಟೆ ಸೂಚ್ಯಂಕ, ನಿಫ್ಟಿ ಭಾರೀ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

CHandrababu Naidu

Budget ಅಪಾರ ಅನುದಾನ ; ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸಿದ ಮಿತ್ರಪಕ್ಷ ಟಿಡಿಪಿ

Budget-New

Union Budget 2024: ಕೇಂದ್ರ ಬಜೆಟ್‌ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?

Tax

#Budget2024; ಹೊಸ ಆದಾಯ ತೆರಿಗೆ ಸ್ಲ್ಯಾಬ್ ಘೋಷಣೆ: ಇಲ್ಲಿದೆ ವಿವರ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

2-udupi

Udupi:ಪ್ರವಾಸಿ ವಾಹನಗಳಿಗೆ ಜಿಪಿಎಸ್,ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

1-mng

Mangaluru: ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ ಯತ್ನ

1-siddu-a

Valmiki ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.