ಎಲ್ಲಾ ಪ್ಯಾಕ್‌ಗಳ ಮೇಲೆ ಕಡ್ಡಾಯ ಮಾಹಿತಿ ನಮೂದಿಗೆ ಸೂಚನೆ
Team Udayavani, Jan 31, 2023, 7:40 AM IST
ನವದೆಹಲಿ: ಉಡುಗೊರೆ, ಫ್ಯಾಮಿಲಿ ಪ್ಯಾಕ್ ಸೇರಿದಂತೆ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ಯಾಕ್‌ಗಳನ್ನು ಒಳಗೊಂಡಿರುವ ರಿಟೇಲ್ ಸರಕು ಪ್ಯಾಕೆಟ್‌ಗಳ ಹೊರ ಕವರ್(ಪ್ಯಾಕ್)ಗಳ ಮೇಲೆ ಎಲ್ಲಾ ಕಡ್ಡಾಯ ಮಾಹಿತಿಗಳನ್ನು ನಮೂದಿಸುವ ಅಗತ್ಯವಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
“ಒಂದಕ್ಕಿಂತ ಹೆಚ್ಚಿನ ಪ್ಯಾಕ್‌ಗಳನ್ನು ಒಳಗೊಂಡಿರುವ ರಿಟೇಲ್ ಪ್ಯಾಕೆಟ್‌ಗಳ ಮೇಲೆ ಕಡ್ಡಾಯ ಮಾಹಿತಿ ಪ್ರಕಟಿಸದೇ ಇರುವುದು ಕಂಡುಬಂದಿದೆ. ಹೀಗಾಗಿ ಕಂಪನಿಗಳು ಕಡ್ಡಾಯವಾಗಿ ಎಲ್ಲಾ ಪ್ಯಾಕೆಟ್‌ಗಳ ಮೇಲೆ ತಯಾರಕರು, ಪ್ಯಾಕರ್ ಮತ್ತು ಆಮದುದಾರರ ಹೆಸರು ಮತ್ತು ವಿಳಾಸ, ಆಮದಾಗಿರುವ ವಸ್ತುಗಳಿಗೆ ದೇಶದ ಹೆಸರು, ನೆಟ್ ಕ್ವಾಂಟಿಟಿ, ತಯಾರು/ಪ್ಯಾಕ್ ಆದ ತಿಂಗಳು ಮತ್ತು ವರ್ಷ, ಬೆಸ್ಟ್ ಬಿಫೋರ್ ಯ್ಯೂಸ್ ಡೇಟ್ ಮತ್ತು ಕನ್ಸೂಮರ್ ಕೇರ್ ವಿವರಗಳನ್ನು ಕಡ್ಡಾಯವಾಗಿ ಪ್ಯಾಕ್‌ನ ಹೊರ ಭಾಗದ ಮೇಲೆ ನಮೂದಿಸಬೇಕು,’ ಎಂದು ಸಚಿವಾಲಯ ಸೂಚಿಸಿದೆ.