
ಮಸೀದಿಯಲ್ಲಿ ಇಫ್ತಾರ್ ಆಹಾರ ಸೇವಿಸಿದ ಬಳಿಕ 100 ಕ್ಕೂ ಅಧಿಕ ಮಂದಿ ಅಸ್ವಸ್ಥ; ಕೆಲವರು ಗಂಭೀರ
Team Udayavani, Mar 26, 2023, 1:21 PM IST

ಕೋಲ್ಕತ್ತಾ: ಉಪವಾಸದ ಇಫ್ತಾರ್ ನಲ್ಲಿ ಆಹಾರ ಸೇವಿಸಿ ನೂರಕ್ಕೂ ಹೆಚ್ಚಿನ ಮಂದಿ ಅಸ್ವಸ್ಥರಾಗಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ನಡೆದಿರುವುದು ವರದಿಯಾಗಿದೆ.
ಕುಲ್ತಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಖಿರಾಲಯ ಗ್ರಾಮದ ಮಸೀದಿಯಲ್ಲಿ ಇಫ್ತಾರ್ (ಉಪವಾಸ ಬಿಡುವ) ನಲ್ಲಿ ಆಹಾರವನ್ನು ಸೇವಿಸಿದ್ದಾರೆ. ಇದಾದ ಬಳಿಕ ಅನೇಕರಿಗೆ ಹೊಟ್ಟೆ ನೋವು ಹಾಗೂ ವಾಂತಿ ಆಗಿದೆ. ನೂರಕ್ಕೂ ಅಧಿಕ ಮಂದಿಗೆ ಈ ರೀತಿಯಾಗಿದ್ದು ಜಿಲ್ಲೆಯ ನಾನಾ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಕೆಲವು ಜನ ಉಪವಾಸ ಬಿಡುವ ವೇಳೆ ಆಹಾರ ಸೇವಿಸಿ ನನ್ನ ಜನ ಕ್ಲಿನಿಕ್ ಗೆ ಬಂದಿದ್ದಾರೆ. ಹೊಟ್ಟೆ ನೋವು ಹಾಗೂ ವಾಂತಿ ಆಗುತ್ತಿದೆ ಎಂದು ಹೇಳಿದ್ದಾರೆ. ಪರೀಕ್ಷಿಸಿದ ಬಳಿಕ ಇಫ್ತಿಯಾರ್ ಆಹಾರದಲ್ಲಿ ಫುಡ್ ಪಾಯ್ಸನ್ ಆಗಿರುವುದು ಗೊತ್ತಾಗಿದೆ ಎಂದು ಡಾ. ಹೊರಿಸಧನ್ ಮೊಂಡಲ್ ಹೇಳಿದ್ದಾರೆ.
ಈ ಬಗ್ಗೆ ಅಸ್ವಸ್ಥಗೊಂಡಿರುವ ವ್ಯಕ್ತಿಯೊಬ್ಬರ ಪತ್ನಿ ನರೇಂದ್ರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
