ಮರದ ಬಾಗಿಲಿನ ಒಳಗಿತ್ತು 2 ಸಾವಿರಕ್ಕೂ ಹೆಚ್ಚು ಮದ್ಯದ ಬಾಟಲಿಗಳು: ಸೊತ್ತು ಸಹಿತ ಇಬ್ಬರು ವಶ
Team Udayavani, Nov 3, 2022, 3:36 PM IST
ನವದೆಹಲಿ : ಮರದ ಬಾಗಿಲುಗಳಲ್ಲಿ ಬಚ್ಚಿಟ್ಟು ಬಿಹಾರಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಸುಮಾರು 2,000 ಕ್ಕೂ ಹೆಚ್ಚಿನ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು ಇಬ್ಬರನ್ನು ವಶಕ್ಕೆ ಪಡೆದ ಘಟನೆ ದೆಹಲಿಯಲ್ಲಿ ಗುರುವಾರ ನಡೆದಿದೆ.
ರೋಷನ್ ರೈ ಮತ್ತು ಸರ್ವಜಿತ್ ಸಿಂಗ್ ಎಂಬ ಇಬ್ಬರು ಆರೋಪಿಗಳು ಆರು ಮರದ ಬಾಗಿಲಿನ ಒಳಗೆ ಸುಮಾರು 2,112 ಬಾಟಲಿಗಳನ್ನು ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರು ಕಳ್ಳಸಾಗಣೆದಾರರು ಬಾಟಲಿಗಳನ್ನು ಮರದ ಬಾಗಿಲಿನ ಒಳಗೆ ಇರಿಸಿ ದೆಹಲಿಯಿಂದ ಬಿಹಾರಕ್ಕೆ ಟೆಂಪೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ವಿಷಯ ತಿಳಿದ ಪೊಲೀಸರು ದೆಹಲಿಯ ರೋಹಿಣಿ ಬಳಿ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದ್ದಾರೆ, ಈ ವೇಳೆ ಮದ್ಯದ ಬಾಟಲಿಗಳು ಪತ್ತೆಯಾಗಿವೆ, ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ವಾಹನ ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ವಿಡಿಯೋ: WhatsApp ಚಾಟ್ ಮಾಡುತ್ತೆ ಈ ಗಿಳಿ… ಇದರ ಟೈಪಿಂಗ್ ವೇಗ ಮನುಷ್ಯರನ್ನೇ ನಾಚಿಸುತ್ತೆ
Video: Over 2,000 Liquor Bottles Were Being Smuggled, Hidden Inside Doors https://t.co/aMJ50zM0J9 pic.twitter.com/bhSGZcgQSK
— NDTV (@ndtv) November 3, 2022