ಪಾಕ್ ಡ್ರೋಣ್ ಹೊಡೆದು ಉರುಳಿಸಿದರೆ 1 ಲಕ್ಷ ಇನಾಮು : ಭಾರತೀಯ ಸೇನೆ ನಿರ್ಧಾರ
Team Udayavani, Dec 30, 2022, 8:45 PM IST
ನವದೆಹಲಿ: ಭಾರತ-ಪಾಕಿಸ್ತಾನದ ಗಡಿಯಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸುವ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ತಂಡಕ್ಕೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಲು ಸೇನೆ ನಿರ್ಧರಿಸಿದೆ.
ಜತೆಗೆ ಗಡಿಯಲ್ಲಿ ಜಾಮರ್ಗಳನ್ನು, ಸ್ಪೂಫರ್ಗಳನ್ನು ಅಳವಡಿಸಲು ಹಾಗೂ ಗಸ್ತು ಹೆಚ್ಚಿಸಲು ಭಾರತೀಯ ಸೇನೆ ಮುಂದಾಗಿದೆ. ಪಾಕಿಸ್ತಾನದಿಂದ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳು ಸಾಗಿಸುತ್ತಿರುವ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಕ್ರಮ ಕೈಗೊಂಡಿದೆ.
ಇದೇ ಮಾದರಿಯ ಬಹುಮಾನ ಘೋಷಣೆಯನ್ನು ಏಪ್ರಿಲ್ನಲ್ಲಿ ಜಾಲಂಧರ್ ಮೂಲದ ಪಂಜಾಬ್ ಫ್ರಾಂಟಿಯರ್ನ ಯೋಧರು ಮಾಡಿದ್ದರು. ಈ ವರ್ಷದ ಡಿ.25ರ ವರೆಗೆ ಪಂಜಾಬ್ಗ ಹೊಂದಿಕೊಂಡು ಇರುವ ಗಡಿಯಲ್ಲಿ 22 ಡ್ರೋನ್ಗಳನ್ನು ಹೊಡೆದು ಉರುಳಿಸಿದ್ದಾರೆ. 2020ರಲ್ಲಿ ಜಮ್ಮುವಿನಲ್ಲಿ ಒಂದನ್ನು ಹೊಡೆದು ಹಾಕಲಾಗಿತ್ತು. ಜಮ್ಮು, ಪಂಜಾಬ್, ರಾಜಸ್ಥಾನ, ಗುಜರಾತ್ಗಳ ಮೂಲಕ ಭಾರತ ಪಾಕಿಸ್ತಾನದ ಜತೆಗೆ 2,289 ಕಿಮೀ ಗಡಿ ಪ್ರದೇಶವನ್ನು ಹೊಂದಿದೆ.
ಇದನ್ನೂ ಓದಿ : ಚಾಮರಾಜನಗರ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 20 ವರ್ಷ ಶಿಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!