
India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು
ಬದಲಿ ನಾಯಕನಿಗಾಗಿ ಹುಡುಕಾಟ; ಮೂಲಗಳಿಂದ ಬಹಿರಂಗ
Team Udayavani, Sep 27, 2023, 4:37 PM IST

ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವಿನ ಬಾಂಧವ್ಯವನ್ನು ಹದಗೆಡಿಸಲು ಪಾಕಿಸ್ಥಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕೆನಡಾದಲ್ಲಿ ಖಲಿಸ್ಥಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಯೋಜಿಸಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ.
ನಿಜ್ಜರ್ ನನ್ನುಹತ್ಯೆಗೈಯಲು ಐಎಸ್‌ಐ ಕ್ರಿಮಿನಲ್‌ಗಳನ್ನು ನೇಮಿಸಿಕೊಂಡಿತ್ತು, ಕಳೆದ ಎರಡು ವರ್ಷಗಳಲ್ಲಿ ಕೆನಡಾಕ್ಕೆ ಆಗಮಿಸಿದ ದರೋಡೆಕೋರರನ್ನು ಸಂಪೂರ್ಣವಾಗಿ ಬೆಂಬಲಿಸುವಂತೆ ಒತ್ತಡ ಹೇರುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ನಿಜ್ಜರ್ ಒಲವು ಮಾಜಿ ಖಲಿಸ್ಥಾನಿ ನಾಯಕರ ಕಡೆಗೆ ಇತ್ತು. ನಿಜ್ಜರ್ ಹತ್ಯೆಯ ನಂತರ, ISI ಈಗ ಅವನ ಬದಲಿ ನಾಯಕನಿಗಾಗಿ ಹುಡುಕುತ್ತಿದ್ದು, ಕೆನಡಾದಲ್ಲಿ ಖಲಿಸ್ಥಾನ್ ಪರ ಭಯೋತ್ಪಾದಕರನ್ನು ಒಟ್ಟುಗೂಡಿಸಲು ತಯಾರಿ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18 ರಂದು ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಒಳಗೊಳ್ಳುವಿಕೆ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಆರೋಪಿಸಿದ ನಂತರ ರಾಜತಾಂತ್ರಿಕ ಗದ್ದಲ ಭುಗಿಲೆದ್ದಿದ್ದು, ಆರೋಪವನ್ನು “ಅಸಂಬದ್ಧ” ಮತ್ತು “ಪ್ರಚೋದಿತ” ಎಂದು ಭಾರತ ತಿರುಗೇಟು ನೀಡಿ, ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದಾಗಿ ಘೋಷಿಸಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Aadhaar: ಬೆರಳಿಲ್ಲವೇ? ಕಣ್ಣಿಂದಲೇ ಆಧಾರ್ ನೋಂದಣಿ

ತಾಂಜೇನಿಯಾ-ಭಾರತದ ಕುಟುಂಬದ ನಡುವೆ ಹೊಸ ಬಂಧ: ಇಬ್ಬರ ಜೀವ ಉಳಿಸಿದ ಕಿಡ್ನಿ ಸ್ವ್ಯಾಪಿಂಗ್!

Climate: ಹವಾಮಾನ ರಕ್ಷಣೆಗೆ 100 ಬಿಲಿಯನ್ ಡಾಲರ್ ಮೀಸಲು ವಾಗ್ಧಾನಕ್ಕೆ ಭಾರತ ಆಕ್ಷೇಪ

Infosys: 90 ಗಂಟೆ ದುಡಿಯುತ್ತಿದ್ದೆ- ಇನ್ಫೋಸಿಸ್ ನಾರಾಯಣ ಮೂರ್ತಿ