ಲೋಕಸಭೆ ಕಲಾಪದಲ್ಲಿ ಗದ್ದಲ, ಫಾರೂಖ್ ಬಿಡುಗಡೆಗೆ ಆಗ್ರಹ; ರಾಜ್ಯಸಭೆ ಕಲಾಪ 2ಗಂಟೆಗೆ ಮುಂದೂಡಿಕೆ
Team Udayavani, Nov 18, 2019, 12:41 PM IST
ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ನೂತನವಾಗಿ ಆಯ್ಕೆಯಾದ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಕೇಂದ್ರ ಸಚಿವರಾದ ದಿ. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹಾಗೂ ರಾಮ್ ಜೇಠ್ಮಲಾನಿ ಅವರಿಗೆ ಲೋಕಸಭಾ ಸ್ಪೀಕರ್ ಗೌರವ ಸಲ್ಲಿಸಿದರು.
ಲೋಕಸಭಾ ಕಲಾಪದಲ್ಲಿ ಜಮ್ಮು-ಕಾಶ್ಮೀರದಲ್ಲಿ ಫಾರೂಖ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಖಂಡಿಸಿ ವಿಪಕ್ಷಗಳ ಸಂಸದರು ಗದ್ದಲ ಆರಂಭಿಸಿ, ಫಾರೂಖ್ ಅಬ್ದುಲ್ ಬಿಡುಗಡೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಕಳೆದ 108 ದಿನಗಳಿಂದ ಫಾರೂಖ್ ಅಬ್ದುಲ್ಲಾ ಅವರು ಬಂಧನದಲ್ಲಿದ್ದಾರೆ. ಅವರು ಲೋಕಸಭೆಗೆ ಹಾಜರಾಗಲೇಬೇಕು. ಇದು ಅವರ ಸಾಂವಿಧಾನಿಕ ಹಕ್ಕು ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಲೋಕಸಭೆಯಲ್ಲಿ ಆಗ್ರಹಿಸಿದರು.
ಜಮ್ಮು-ಕಾಶ್ಮೀರ ಹಾಗೂ ಫಾರೂಖ್ ಅಬ್ದುಲ್ಲಾ ವಿಚಾರದಲ್ಲಿ ಕೋಲಾಹಲ ಎಬ್ಬಿಸಿದ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿರುವುದಾಗಿ ವರದಿ ತಿಳಿಸಿದೆ. ಮತ್ತೊಂದೆಡೆ ರಾಜ್ಯಸಭೆ ಕಲಾಪ ಕೂಡಾ ಮಧ್ಯಾಹ್ನ 2ಗಂಟೆವರೆಗೆ ಮುಂದೂಡಿಕೆಯಾಗಿದೆ. ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ವಿಚಾರದಲ್ಲಿ ಘೋಷಣೆ ಕೂಗಿದ ಶಿವಸೇನಾ ಸಂಸದರು ಸಭಾತ್ಯಾಗ ಮಾಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ ಪತ್ತೆ
ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!
ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ
ಜನರ ಕಡೆ ಕಾಂಗ್ರೆಸ್ ನಡಿಗೆ; ನವ ಸಂಕಲ್ಪಗಳೊಂದಿಗೆ ಜನಸಂಪರ್ಕಕ್ಕೆ ಕಾಂಗ್ರೆಸ್ ಸಿದ್ಧ
ದೇಸಿ ಮಕ್ಕಳ ಮೊಬೈಲ್ ಪ್ರೌಢಿಮೆ; ವಿಶ್ವದಲ್ಲಿ ಭಾರತವೇ ಮೊದಲೆಂದ ಮ್ಯಾಕೆಫೀ ವರದಿ