ಹೊಸದಿಲ್ಲಿ: ವಿಮಾನದಲ್ಲಿ ಹೊತ್ತಿ ಉರಿದ ಪ್ರಯಾಣಿಕನ ಮೊಬೈಲ್ ಫೋನು!
Team Udayavani, Apr 15, 2022, 1:30 PM IST
ಹೊಸದಿಲ್ಲಿ: ದಿಬ್ರುಗಢ-ದೆಹಲಿ ನಡುವೆ ಸಾಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್‌ಗೆ ಬೆಂಕಿ ಹತ್ತಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಕ್ಯಾಬಿನ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ಸಾಧನದ ಸಹಾಯದಿಂದ ಬೆಂಕಿ ನಂದಿಸಿದ್ದಾರೆ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಯಾವುದೇ ಪ್ರಯಾಣಿಕರಿಗೆ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ.
6ಇ 2037 ವಿಮಾನ ಅಸ್ಸಾಂನ ದಿಬ್ರುಗಢ್‌ನಿಂದ ದೆಹಲಿಗೆ ತೆರಳುತ್ತಿದ್ದಾಗ ಕ್ಯಾಬಿನ್ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಫೋನ್ ನಿಂದ ಬೆಂಕಿ ಕಿಡಿ ಮತ್ತು ಹೊಗೆ ಹೊರಬರುವುದನ್ನು ಕಂಡಿದ್ದಾರೆ. ನಂತರ ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕ ಸಾಧನವನ್ನು ಬಳಸಿ ಬೆಂಕಿಯನ್ನು ನಂದಿಸಿದರು ಎಂದು ಅಧಿಕಾರಿಗಳು ಹೇಳಿದರು.
ವಿಮಾನವು ಗುರುವಾರ ಮಧ್ಯಾಹ್ನ 12.45 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಪಕ್ಷಕ್ಕೆ ಮುಜುಗರ ಆಗಬಾರದೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದೇನೆ: ಈಶ್ವರಪ್ಪ
“ದಿಬ್ರುಗಢ್‌ನಿಂದ ದೆಹಲಿಗೆ ಬರುತ್ತಿದ್ದ 6ಇ 2037 ವಿಮಾನದಲ್ಲಿ ಮೊಬೈಲ್ ಸಾಧನದ ಬ್ಯಾಟರಿ ಅಸಹಜವಾಗಿ ಬಿಸಿಯಾದ ಕಾರಣದಿಂದ ಈ ಘಟನೆ ಸಂಭವಿಸಿದೆ. ಎಲ್ಲಾ ಅಪಾಯಕಾರಿ ಘಟನೆಗಳನ್ನು ನಿರ್ವಹಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಮತ್ತು ಅವರು ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ವಹಿಸಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ” ಎಂದು ಇಂಡಿಗೋ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಭಾರತ ಬಿಟ್ಟು ತೊಲಗಿ ಚಳುವಳಿ’ಗೆ 80 ವರ್ಷ: ಕ್ವಿಟ್ ಇಂಡಿಯಾ ಸ್ಮರಿಸಿದ ಪ್ರಧಾನಿ ಮೋದಿ
ಮೈದಾ, ರವೆ, ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ: ಆ.14ರಿಂದ ಜಾರಿ ಎಂದ ಕೇಂದ್ರ ಸರ್ಕಾರ
ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸುವುದು ಕೋರ್ಟ್ ಕೆಲಸವಲ್ಲ
ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತ್ರಿವರ್ಣ ಧ್ವಜಗಳಿಗೆ ಬೇಡಿಕೆ 50 ಪಟ್ಟು ಹೆಚ್ಚಳ!
ಆರ್ ಜೆಡಿ ಜತೆ ಸಖ್ಯ- ನಿತೀಶ್ ಬಿಹಾರದ ಜನತೆಗೆ ದ್ರೋಹ ಎಸಗಿದ್ದಾರೆ: ಬಿಜೆಪಿ ಆಕ್ರೋಶ