ಫೋನಿ: 3.5 ಲಕ್ಷ ಮಂದಿ ಸ್ಥಳಾಂತರ

ಇಂದು ಮಧ್ಯಾಹ್ನ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಚಂಡಮಾರುತ

Team Udayavani, May 3, 2019, 6:10 AM IST

phoney-big

ಭುವನೇಶ್ವರ/ಹೊಸದಿಲ್ಲಿ: ಹಲವು ದಶಕಗಳ ಬಳಿಕ ಬೇಸಗೆಯಲ್ಲಿ ಉಂಟಾಗಿರುವ ಅತ್ಯಂತ ತೀವ್ರವಾದ “ಫೋನಿ’ ಚಂಡಮಾರುತವು ಶುಕ್ರವಾರ ಮಧ್ಯಾಹ್ನ 12ರಿಂದ 2 ಗಂಟೆಯ ವೇಳೆಗೆ ಬಂಗಾಲಕೊಲ್ಲಿ ಮೂಲಕ ಒಡಿಶಾ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಈಗಾಗಲೇ ಮೂರೂವರೆ ಲಕ್ಷಕ್ಕಿಂತ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಒಟ್ಟು 11.54 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡುವ ಗುರಿ ಹಾಕಿ ಕೊಳ್ಳಲಾಗಿದೆ. ಇವರಿಗೆಲ್ಲ ಶಾಲೆ, ಕಾಲೇಜು ಸಹಿತ ಲಭ್ಯವಿರುವ ಕಟ್ಟಡಗಳಲ್ಲಿ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಜನರನ್ನು ಸಾಗಿಸಲು ಲಭ್ಯವಿರುವ ಎಲ್ಲ ಸಂಚಾರ ಮೂಲಗಳನ್ನೂ ಬಳಸಿಕೊಳ್ಳಲಾಗಿದೆ ಎಂದು ನೈಸರ್ಗಿಕ ವಿಕೋಪ ತುರ್ತು ಪರಿಹಾರ ಪಡೆ ಹೇಳಿದೆ. ನಾಗರಿಕ ವಿಮಾನ ಯಾನ ಸಚಿವ ಸುರೇಶ್‌ ಪ್ರಭು, ಎಲ್ಲ ವಿಮಾನ ನಿಲ್ದಾಣಗಳಿಗೂ ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು, ಒಡಿಶಾಗೆ ಅಪ್ಪಳಿಸಲಿರುವ ಚಂಡ ಮಾರುತವನ್ನು ಎದುರಿಸಲು ತೆಗೆದುಕೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ದಿಲ್ಲಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆದರು.

ಎಲ್ಲೆಲ್ಲಿ ಹೊಡೆತ?
ಒಡಿಶಾದ 15 ಜಿಲ್ಲೆಗಳಲ್ಲಿ ಫೋನಿ ಚಂಡಮಾರುತದಿಂದ ಹಾನಿಯಾಗಬಹುದು ಎಂದು ಅಂದಾಜಿಸಲಾಗಿದೆ. ಪುರಿ, ಜಗತ್‌ಸಿಂಗಾಪುರ, ಕೇಂದ್ರಪುರ, ಬಾಲಸೋರ್‌, ಭದ್ರಕ್‌, ಗಂಜಮ್‌, ಖುರ್ದಾ, ಜೈಪುರ, ನಯಾಗರ್‌, ಕಟಕ್‌, ಗಜಪತಿ, ಮಯೂರ್‌ಭಂಜ್‌, ಧಂಕೇನಾಲ್‌ ಮತ್ತು ಕೋಂಜೇಹಾರ್‌ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯುಂಟು ಮಾಡಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

223 ರೈಲುಗಳ ಸಂಚಾರ ಬಂದ್‌
ಫೋನಿ ಚಂಡಮಾರುತದ ಹಿನ್ನೆಲೆಯಲ್ಲಿ ಸುಮಾರು 223 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಅಲ್ಲದೆ, ಮೂರು ವಿಶೇಷ ರೈಲುಗಳನ್ನು ಜನರನ್ನು ಸಾಗಾಟ ಮಾಡುವ ಸಲುವಾಗಿ ಸನ್ನದ್ಧವಾಗಿ ನಿಲ್ಲಿಸಲಾಗಿದೆ. ಎನ್‌ಡಿಆರ್‌ಎಫ್ 81 ತಂಡಗಳನ್ನು ಪರಿಹಾರ ಕಾರ್ಯಗಳಿಗಾಗಿ ನಿಯೋಜನೆ ಮಾಡಲಾಗಿದೆ. 4,000 ಸಿಬಂದಿ ಪರಿಹಾರ ಕಾರ್ಯ ನಡೆಸಲಿದ್ದಾರೆ.

1999ಕ್ಕಿಂತಲೂ ಭೀಕರ?
1999ರಲ್ಲಿ ಒಡಿಶಾವನ್ನು ಕಾಡಿದ ಸೂಪರ್‌ ಸೈಕ್ಲೋನ್‌ಗಿಂತಲೂ ಅಪಾಯಕಾರಿಯೇ ಈ ಫೋನಿ ಚಂಡ ಮಾರುತ? ಹೌದು ಎನ್ನುತ್ತಿವೆ ಹವಾ ಮಾನ ಇಲಾಖೆ ಮೂಲಗಳು. ಆ ವರ್ಷದ ಚಂಡ ಮಾರುತದ ಹೊಡೆತದಿಂದಾಗಿ ಒಡಿಶಾದಲ್ಲೇ 10 ಸಾವಿರ ಮಂದಿ ಜೀವ ಕಳೆದುಕೊಂಡಿದ್ದರು. ಈ ಬಾರಿ ಅಂದಿಗಿಂತಲೂ ಹೆಚ್ಚು ಅಪಾಯಕಾರಿ ವೇಗದಲ್ಲಿ ಫೋನಿ ಆಗಮಿಸುತ್ತಿದೆ.

200 ಕಿ.ಮೀ. ವೇಗ
ಫೋನಿ ಚಂಡಮಾರುತ 200 ಕಿ.ಮೀ. ವೇಗದಲ್ಲಿ ಬಂದು ಅಪ್ಪಳಿಸಲಿದೆ. ಗುರುವಾರ ಸಂಜೆಯ ವೇಳೆಗೆ ಫೋನಿ ಚಂಡಮಾರುತವು ಪುರಿಯಿಂದ 350 ಕಿ.ಮೀ. ದೂರದ ದಕ್ಷಿಣ- ನೈಋತ್ಯ ದಿಕ್ಕಿನ ಬಂಗಾಲ ಕೊಲ್ಲಿ ಸಮುದ್ರದಲ್ಲಿ ಕೇಂದ್ರೀಕೃತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆರಂಭದಲ್ಲಿ ಶುಕ್ರವಾರ ಬೆಳಗ್ಗೆಯೇ ಫೋನಿ ಚಂಡ ಮಾರುತ ಪುರಿಗೆ ಅಪ್ಪಳಿಸಬಹುದು ಎಂದು ಹೇಳಲಾಗಿತ್ತು. ಆದರೆ ಅನಂತರದಲ್ಲಿ ಪರಿಷ್ಕೃತ ವರದಿ ನೀಡಿದ ಹವಾಮಾನ ಇಲಾಖೆ ಮಧ್ಯಾಹ್ನ 12 ರಿಂದ 2 ಗಂಟೆ ವೇಳೆಗೆ ಪುರಿಗೆ ಬಂದು ಅಪ್ಪಳಿಸಲಿದೆ ಎಂದು ಹೇಳಿದೆ.

ಟಾಪ್ ನ್ಯೂಸ್

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ಝೈಕೋವ್‌ ಡಿ ದರ ನಿಗದಿ ಅಂತಿಮ: ಕೇಂದ್ರ

ಝೈಕೋವ್‌ ಡಿ ದರ ನಿಗದಿ ಅಂತಿಮ: ಕೇಂದ್ರ

ಮುಂದಿನ ವಾರ ಎಲ್‌ಪಿಜಿ ಬೆಲೆ ಹೆಚ್ಚಳ?

ಮುಂದಿನ ವಾರ ಎಲ್‌ಪಿಜಿ ಬೆಲೆ ಹೆಚ್ಚಳ?

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ಎಸ್‌-400 ಕ್ಷಿಪಣಿ ಖರೀದಿ ಭಾರತಕ್ಕೆ ನಿರ್ಬಂಧ ಬೇಡ

ಎಸ್‌-400 ಕ್ಷಿಪಣಿ ಖರೀದಿ ಭಾರತಕ್ಕೆ ನಿರ್ಬಂಧ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.