ಸಮಾನ ಕಾನೂನಿಗೆ ಒಲವು; ಏಕರೂಪ ನಾಗರಿಕ ಸಂಹಿತೆ ಪರ ನಿಲುವು ಸ್ಪಷ್ಟಪಡಿಸಿದ ಕೇಂದ್ರ


Team Udayavani, Oct 19, 2022, 7:00 AM IST

ಸಮಾನ ಕಾನೂನಿಗೆ ಒಲವು; ಏಕರೂಪ ನಾಗರಿಕ ಸಂಹಿತೆ ಪರ ನಿಲುವು ಸ್ಪಷ್ಟಪಡಿಸಿದ ಕೇಂದ್ರ

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮೊದಲ ಬಾರಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ದೇಶದಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಕಾನೂನು ಅನ್ವಯವಾಗಿಸುವ ಸಂಹಿತೆ ಅನುಷ್ಠಾನದ ಪರ ಒಲವು ವ್ಯಕ್ತಪಡಿಸಿದೆ.

ವಿವಾದಾತ್ಮಕ ಹಾಗೂ ಬಹಳ ಸೂಕ್ಷ್ಮ ವಿಚಾರ ವಾಗಿರುವ ಯುಸಿಸಿ ಕುರಿತು ಮಂಗಳವಾರ ಪ್ರಥಮ ಬಾರಿಗೆ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿರುವ ಕೇಂದ್ರ ಸರಕಾರ, ಸಮಾನ ನಾಗರಿಕ ಸಂಹಿತೆಯನ್ನು ಬೆಂಬಲಿಸಿ ಹಲವು ವಾದಗಳನ್ನು ಮಂಡಿಸಿದೆ.

ವಿಚ್ಛೇದನ, ದತ್ತು ಸ್ವೀಕಾರ, ಪೋಷಕತ್ವ, ಉತ್ತ ರಾಧಿಕಾರ, ಮದುವೆ ವಯಸ್ಸು ಹಾಗೂ ಜೀವನಾಂಶದ ವಿಚಾರ ಬಂದಾಗ, ಧರ್ಮ ಮತ್ತು ಲಿಂಗ ತಟಸ್ಥವಾದ ಏಕರೂಪ ಕಾನೂನು ಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ನ್ಯಾಯ ವಾದಿ ಅಶ್ವಿ‌ನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸರಕಾರ ಈ ಅಫಿದವಿತ್‌ ಸಲ್ಲಿಸಿದೆ.

ಈ ಹಿಂದೆ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಅರ್ಜಿಗಳ ಕುರಿತು ಕೇಂದ್ರದಿಂದ ಸಮಗ್ರ ಪ್ರತಿಕ್ರಿಯೆಯನ್ನು ಕೇಳಲಾಗಿತ್ತು.

ದೇಶದ ಏಕತೆಗೆ ಧಕ್ಕೆ
ಮಂಗಳವಾರ ಅಫಿದವಿತ್‌ ರೂಪದಲ್ಲಿ ತನ್ನ ನಿಲುವನ್ನು ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟಿರುವ ಕೇಂದ್ರ ಸರಕಾರ, “ಪ್ರಸ್ತುತ ಬೇರೆ ಬೇರೆ ಧರ್ಮಗಳು ಮತ್ತು ಪಂಗಡ ಗಳಿಗೆ ಸೇರಿರುವ ನಾಗರಿಕರು ತಮ್ಮ ಆಸ್ತಿಪಾಸ್ತಿ ಮತ್ತು ವೈವಾಹಿಕ ನೀತಿನಿಯಮಗಳ ವಿಷಯ ದಲ್ಲಿ ಭಿನ್ನವಾದ ಹಾಗೂ ಪ್ರತ್ಯೇಕವಾದ ಕಾನೂನು ಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಈ ಕ್ರಮ ದೇಶದ ಏಕತೆಗೆ ಅಡ್ಡಿ ಉಂಟು ಮಾಡುತ್ತವೆ. ಏಕರೂಪ ನಾಗರಿಕ ಸಂಹಿತೆ ಜಾರಿ ಯಾದರೆ ಅದು ವೈಯಕ್ತಿಕ ಕಾನೂನು ಗಳನ್ನು ತೆರವುಗೊಳಿಸುತ್ತದೆ’ ಎಂದು ಹೇಳಿದೆ.

ಸಂವಿಧಾನದ 44ನೇ ವಿಧಿಯ ಉದ್ದೇಶವೇ “ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ’ದ ಗುರಿ ಯನ್ನು ಬಲಪಡಿಸುವುದಾಗಿದೆ. ಏಕ ರೂಪ ನಾಗರಿಕ ಸಂಹಿತೆಯ ಮಹತ್ವ ಮತ್ತು ಸೂಕ್ಷ್ಮತೆ ಯನ್ನು ಮನಗಂಡು, ವಿವಿಧ ವೈಯ ಕ್ತಿಕ ಕಾನೂನುಗಳ ಕುರಿತು ಆಳವಾದ ಅಧ್ಯ ಯನ ನಡೆಸಬೇಕಾಗುತ್ತದೆ.

ಈಗಾಗಲೇ 21ನೇ ಕಾನೂನು ಆಯೋಗವು ಈ ಬಗ್ಗೆ ವಿಸ್ತೃತವಾಗಿ ಪರಿಶೀಲಿಸಿದೆ. ಆದರೆ, 2018ರಲ್ಲೇ ಆಯೋಗದ ಅವಧಿ ಕೊನೆಗೊಂಡಿರುವ ಕಾರಣ, 22ನೇ ಕಾನೂನು ಆಯೋಗದ ಮುಂದೆ ಈ ವಿಷಯವನ್ನು ಮಂಡಿಸುವುದಾಗಿ ಸರಕಾರ ತಿಳಿಸಿದೆ.

ಪ್ರಸ್ತುತ, ವೈಯಕ್ತಿಕ ಕಾನೂನು ಎನ್ನುವುದು ಅವರ ನಂಬಿಕೆ ಮತ್ತು ಧರ್ಮದ ಆಧಾರದ ಮೇಲೆ ಜನರಿಗೆ ಅನ್ವಯಿಸುವ ಕಾನೂನುಗಳು. ಹೆಚ್ಚಿನ ಧರ್ಮಗಳು ವಿಭಿನ್ನವಾದ ವೈಯಕ್ತಿಕ ಕಾನೂನುಗಳನ್ನು ಹೊಂದಿವೆ ಮತ್ತು ಅವುಗಳು ಆಯಾ ಧರ್ಮಗ್ರಂಥಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ಹೇಳಿದೆ.

ಕೋರ್ಟ್‌ ನಿರ್ದೇಶಿಸುವಂತಿಲ್ಲ:
ಇದೇ ವೇಳೆ, ಯುಸಿಸಿ ಎನ್ನುವುದು ಚುನಾಯಿತ ಜನಪ್ರತಿನಿಧಿಗಳು ನಿರ್ಧರಿಸ ಬೇಕಾದಂಥ ವಿಚಾರ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಶಾಸನ ರೂಪಿಸಬೇಕೇ, ಬೇಡವೇ ಎಂಬ ಬಗ್ಗೆ ಶಾಸಕಾಂಗ ನಿರ್ಧರಿಸುತ್ತದೆ. ಈ ಬಗ್ಗೆ ನ್ಯಾಯಾಲಯವು ನಿರ್ದೇಶನ ನೀಡುವಂತಿಲ್ಲ ಎಂದೂ ಅಫಿಡವಿಟ್‌ನಲ್ಲಿ ಸರಕಾರ ಉಲ್ಲೇಖಿಸಿದೆ.

ಎಷ್ಟು ಅರ್ಜಿಗಳು?
ಏಕರೂಪ ನಾಗರಿಕ ಸಂಹಿತೆ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಒಟ್ಟು 6 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ನಾಲ್ಕು ಅರ್ಜಿಗಳನ್ನು ಬಿಜೆಪಿ ನಾಯಕ, ವಕೀಲ ಅಶ್ವಿ‌ನಿ ಉಪಾಧ್ಯಾಯ ಅವರೇ ಸಲ್ಲಿಸಿದ್ದರೆ, ಒಂದು ಅರ್ಜಿಯನ್ನು ಲುಬಾ° ಖುರೇಶಿ ಎಂಬವರು, ಮತ್ತೊಂದು ಅರ್ಜಿಯನ್ನು ಡೋರಿಸ್‌ ಮಾರ್ಟಿನ್‌ ಎಂಬವರು ಸಲ್ಲಿಸಿದ್ದರು. ಸಂವಿಧಾನದ 44ನೇ ವಿಧಿಯನ್ನು ಜಾರಿ ಮಾಡುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನಿರ್ದೇಶಿಸಲು ಸಾಧ್ಯವಾಗುವುದಿಲ್ಲವಾದರೂ, ಯುಸಿಸಿ(ಏಕರೂಪ ನಾಗರಿಕ ಸಂಹಿತೆ) ಕರಡು ಸಿದ್ಧಪಡಿಸಲು ಸಮಿತಿಯನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಸೂಚಿಸಬಹುದು ಎಂದೂ ಕೆಲವು ಅರ್ಜಿದಾರರು ವಾದಿಸಿದ್ದಾರೆ.

ಏನಿದು ಯುಸಿಸಿ?
ಸಮಾನ ನಾಗರಿಕ ಸಂಹಿತೆ ಎಂದರೆ, ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮುಂತಾದ ವಿಚಾರಗಳಲ್ಲಿ ಎಲ್ಲ ಧರ್ಮ, ಲಿಂಗ, ಜಾತಿಗಳಿಗೂ ಅನ್ವಯವಾಗುವಂತೆ ಒಂದೇ ಕಾನೂನು ಜಾರಿ ಮಾಡುವುದು. ಈ ಸಂಹಿತೆಯು ಸಂವಿಧಾನದ 44ನೇ ವಿಧಿಯಡಿ ಬರುತ್ತದೆ. ಪ್ರಸ್ತುತ ಹಿಂದೂ ವೈಯಕ್ತಿಕ ಕಾನೂನು, ಶರಿಯಾ ಕಾನೂನು, ಕ್ರಿಶ್ಚಿಯನ್‌ ವೈಯಕ್ತಿಕ ಕಾನೂನು ಹೀಗೆ ಆಯಾ ಧರ್ಮಗಳಿಗೆ ಪ್ರತ್ಯೇಕವಾದ ಕಾನೂನುಗಳು ಜಾರಿಯಲ್ಲಿವೆ.

ಕೇಂದ್ರ ಸರಕಾರ ಹೇಳಿದ್ದೇನು?
– ವೈವಿಧ್ಯಮಯ ವೈಯಕ್ತಿಕ ಕಾನೂನು ಗಳು ದೇಶದ ಏಕತೆಗೆ ಭಂಗ ತರುತ್ತಿವೆ. ಹೀಗಾಗಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ನಮಗೆ ಒಲವಿದೆ.
– ನಾವು ಈಗಾಗಲೇ ಯುಸಿಸಿಗೆ ಸಂಬಂ ಧಿಸಿ, ಅದರ ಸೂಕ್ಷ್ಮತೆ ಮತ್ತು ಆಳ ವಾದ ಅಧ್ಯಯನವನ್ನು ಪರಿಗಣಿಸಿ ಶಿಫಾರಸು ಗಳನ್ನು ಮಾಡುವಂತೆ ಕಾನೂನು ಆಯೋಗಕ್ಕೆ ಮನವಿ ಮಾಡಿದ್ದೇವೆ.
– 22ನೇ ಕಾನೂನು ಆಯೋಗದ ವರದಿ ಬಂದ ಮೇಲೆ, ಸಂಬಂಧಪಟ್ಟ ಎಲ್ಲರೊಡನೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
– ಆದರೆ ಕಾನೂನು ರೂಪಿಸುವ ಸಾರ್ವಭೌಮ ಅಧಿಕಾರವಿರುವುದು ಸಂಸತ್‌ಗೆ. ಈ ವಿಚಾರದಲ್ಲಿ ಹೊರಗಿ ನವರು(ನ್ಯಾಯಾಲಯ) ಯಾವುದೇ ನಿರ್ದೇಶನ ನೀಡುವಂತಿಲ್ಲ.
– ಹೀಗಾಗಿ ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿದ ಎಲ್ಲ ಪಿಐಎಲ್‌ಗ‌ಳನ್ನೂ ಸುಪ್ರೀಂ ಕೋರ್ಟ್‌ ವಜಾ ಮಾಡಬೇಕು.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.