BC ಬಿಫೋರ್ ಕಾಂಗ್ರೆಸ್ ,AD ಆಫ್ಟರ್ ಡೈನಾಸ್ಟಿ
Team Udayavani, Feb 8, 2019, 12:30 AM IST
ನವದೆಹಲಿ: ಇತಿಹಾಸವನ್ನು ಉಲ್ಲೇಖೀಸುವಾಗ ಎರಡು ಕಾಲಾವಧಿಯನ್ನು ಬಿಸಿ(ಬಿಫೋರ್ ಕ್ರೈಸ್ಟ್) ಮತ್ತು ಎಡಿ (ಅನ್ನೊ ಡೊಮಿನಿ) ಎಂದು ಗುರುತಿಸುತ್ತಾರೆ ಎಂಬುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಿ.ಸಿ. ಮತ್ತು ಎ.ಡಿ.ಗೆ ಹೊಸ ರೂಪ ಕೊಡುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯದ ಗೊತ್ತುವಳಿ ಚರ್ಚೆಗೆ ಉತ್ತರವಾಗಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷ ಕಾಂಗ್ರೆಸ್‌ಗೆ ಗೊತ್ತಿರುವುದು ಎರಡೇ ಪದ. ಅವೆಂದರೆ, ಬಿಫೋರ್ ಕಾಂಗ್ರೆಸ್(ಬಿ.ಸಿ) ಮತ್ತು ಆಫ್ಟರ್ ಡೈನಾಸ್ಟಿ(ಎ.ಡಿ.). ಅಂದರೆ, ಕಾಂಗ್ರೆಸ್‌ಗೆ ಮುನ್ನಮತ್ತು ವಂಶಾಡಳಿತದ ನಂತರಎಂದು ಅರ್ಥ. ಬಿಫೋರ್ ಕಾಂಗ್ರೆಸ್ ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಏನೂ ಇರಲಿಲ್ಲ ಎಂದೂ, ಆಫ್ಟರ್ ಡೈನಾಸ್ಟಿ ಎಂದರೆ ದೇಶದಲ್ಲಿ ಏನಾದರೂ ಆಗಿದೆಯೆಂದರೆ ಅದು ವಂಶಾಡಳಿತ ಕೊನೆಗೊಂಡ ಬಳಿಕ ಎಂದು ಅರ್ಥ ಎನ್ನುವ ಮೂಲಕ ನೆಹರೂ-ಗಾಂಧಿ ಕುಟುಂಬವನ್ನು ಕುಟುಕಿದ್ದಾರೆ.
ರಫೇಲ್ ಡೀಲ್, ಸರ್ಜಿಕಲ್ ದಾಳಿ, ಇವಿಎಂ ಸೇರಿದಂತೆ ಪ್ರತಿಪಕ್ಷಗಳ ಪ್ರತಿಯೊಂದು ಟೀಕೆಗೂ ಮ್ಯಾರಥಾನ್ ಪ್ರತಿಕ್ರಿಯೆ ನೀಡುತ್ತಾ ಸಾಗಿದ ಪ್ರಧಾನಿ ಮೋದಿ, ಒಂದೂವರೆ ಗಂಟೆಗಳ ಭಾಷಣದುದ್ದಕ್ಕೂ ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.
ಕರ್ನಾಟಕದ ಮಣ್ಣಿನ ಮಗ ಇಲ್ಲಿಯೇ ಇದ್ದಾರೆ
ಭಾಷಣದ ವೇಳೆ ಸಾಲ ಮನ್ನಾ ವಿಚಾರದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಸಮರ್ಥ ಉತ್ತರ ನೀಡಿದ ಪ್ರಧಾನಿ, ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂಬ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. 43 ಲಕ್ಷ ರೈತರ ಪೈಕಿ ಕೇವಲ 5 ಸಾವಿರ ಮಂದಿಯ ಸಾಲ ಮಾತ್ರ ಮನ್ನಾ ಆಗಿದೆ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ನೋಡಿ ಕರ್ನಾಟಕದ ಮಣ್ಣಿನ ಮಗ ಇಲ್ಲಿಯೇ ಇದ್ದಾರೆ. ಅವರ ಪುತ್ರನ ನೇತೃತ್ವದ ಸರ್ಕಾರದ ಮಾಹಿತಿಯನ್ನೇ ಉಲ್ಲೇಖೀಸಿ ಹೇಳುತ್ತಿದ್ದೇನೆ
ಎಂದು ಲಘು ಧಾಟಿಯಲ್ಲಿ ಹೇಳಿದರು ಪ್ರಧಾನಿ ಮೋದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಿರೀಕ್ಷಣಾ ಜಾಮೀನು: ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್ ಜಾರಿ
ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ರಾಘವ್ ಛಡ್ಡಾ-ಪರಿಣಿತಿ ಛೋಪ್ರಾ ಶೀಘ್ರವೇ ಎಂಗೇಜ್