ಪ್ರಧಾನಿ ಮೋದಿಯಿಂದ ಹೈದರಾಬಾದ್‌ ಮೆಟ್ರೋ ಉದ್ಘಾಟನೆ

Team Udayavani, Nov 28, 2017, 3:58 PM IST

ಹೈದರಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಹೈದರಾಬಾದ್‌ ಮೆಟ್ರೋ ಉದ್ಘಾಟಿಸಿದರು. ಮುಖ್ಯಮಂತ್ರಿ ಕೆ ಸಿ ರಾವ್‌, ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರ ಮೋದಿ ಜತೆಗಿದ್ದು ಮೊದಲ ಮೆಟ್ರೋ ಯಾನದಲ್ಲಿ ಪಾಲ್ಗೊಂಡರು. 

ಪ್ರಧಾನಿ ಮೋದಿ ಅವರಿಂದ ಉದ್ಘಾಟಿತವಾದ ಈ ಮೆಟ್ರೋ ರೈಲು, ಹೈದರಾಬಾದ್‌ ನಗರದ ಬಹು ವರ್ಷಗಳ ನಿರೀಕ್ಷೆಯಾಗಿದೆ. ನ.29ರಿಂದ, ಅಂದರೆ ನಾಳೆ ಬುಧವಾರದಿಂದ ಮೆಟ್ರೋ ರೈಲು ತನ್ನ ವಾಣಿಜ್ಯ ಓಡಾಟವನ್ನು ಆರಂಭಿಸುತ್ತದೆ.

ಈಗ ಉದ್ಘಾಟಿತವಾಗಿರುವ ಹೈದರಾಬಾದ್‌ನ ಮೊದಲ ಹಂತವು 30 ಕಿ.ಮೀ. ದೂರವನ್ನು ಒಳಗೊಂಡಿದೆ. ಇದರಲ್ಲಿ 24 ಸ್ಟೇಶನ್‌ಗಳಿವೆ. 

ಆರಂಭದಲ್ಲಿ ಹೈದರಾಬಾದ್‌ ಮೆಟ್ರೋ ಬೆಳಗ್ಗೆ 6ರಿಂದ ರಾತ್ರಿ 10ರ ತನಕ ಓಡಾಟ ನಡೆಸಲಿದೆ. ಕ್ರಮೇಣ ಸಾರಿಗೆ ಮತ್ತು ಜನರ ಆವಶ್ಯಕತೆಯನ್ನು ಪರಿಗಣಿಸಿ ಬೆಳಗ್ಗೆ 5.30ರಿಂದ ರಾತ್ರಿ 11ರ ವರೆಗೂ ಓಡಾಟ ನಡೆಸುವ ಪರಿಷ್ಕೃತ ವೇಳಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಕೆ ಟಿ ರಾಮ ರಾವ್‌ ತಿಳಿಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ