
Odisha train ಅವಘಡಕ್ಕೆ ಕೋಮು ಬಣ್ಣ: ಪೊಲೀಸರ ಎಚ್ಚರಿಕೆ
ಸಂಖ್ಯೆ 288 ಅಲ್ಲ..ಎಣಿಕೆ ತಪ್ಪಿದೆ
Team Udayavani, Jun 4, 2023, 3:57 PM IST

ಬಾಲಾಸೋರ್ : ಶುಕ್ರವಾರ ನಡೆದ ಭೀಕರ ರೈಲು ದುರಂತಕ್ಕೆ ಕೆಲವರು ಕೋಮು ಬಣ್ಣ ನೀಡಲು ಮುಂದಾಗಿದ್ದು ಒಡಿಶಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನಿಸಿದ್ದಾರೆ.
”ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತಕ್ಕೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಗೇಡಿತನದಿಂದ ಕೋಮು ಬಣ್ಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಕುರಿತು ಒಡಿಶಾದ ಜಿಆರ್‌ಪಿಯಿಂದ ತನಿಖೆ ನಡೆಯುತ್ತಿದೆ ಎಂದು ಒಡಿಶಾ ಪೊಲೀಸರು ಟ್ವೀಟ್ ಮಾಡಿದ್ದಾರೆ.
”ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹಬ್ಬಿಸಿ ಕೋಮು ಸೌಹಾರ್ದತೆ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.” ಎಂದು ಎಚ್ಚರಿಕೆ ನೀಡಿದ್ದಾರೆ.
ಮೃತ ಪಟ್ಟವರ ಸಂಖ್ಯೆ 275 ಆಗಿದ್ದು 288 ಅಲ್ಲ. ದತ್ತಾಂಶವನ್ನು ಡಿಎಂ ಪರಿಶೀಲಿಸಿದ್ದಾರೆ ಮತ್ತು ಕೆಲವು ದೇಹಗಳನ್ನು ಎರಡು ಬಾರಿ ಎಣಿಸಲಾಗಿದೆ ಎಂದು ಕಂಡುಬಂದಿದೆ, ಆದ್ದರಿಂದ ಸಾವಿನ ಸಂಖ್ಯೆಯನ್ನು 275 ಕ್ಕೆ ಪರಿಷ್ಕರಿಸಲಾಗಿದೆ. 275 ರಲ್ಲಿ 88 ದೇಹಗಳನ್ನು ಗುರುತಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ತಿಳಿಸಿದ್ದಾರೆ.
ಉಚಿತ ಬಸ್ ಸೇವೆ
ಪುರಿ, ಭುವನೇಶ್ವರ, ಕಟಕ್‌ನಿಂದ ಕೋಲ್ಕತಾಗೆ ಉಚಿತ ಬಸ್ ಸೇವೆಯನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ ಬಹನಾಗಾ ರೈಲು ದುರಂತದಿಂದ ಉಂಟಾದ ರೈಲು ಸೇವೆಗಳ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಉಚಿತ ಬಸ್ ಸೇವೆಯನ್ನು ಘೋಷಿಸಿದ್ದಾರೆ. ಸಂಪೂರ್ಣ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಮತ್ತು ಬಲೇಶ್ವರ ಮಾರ್ಗದಲ್ಲಿ ಸಾಮಾನ್ಯ ರೈಲು ಸೇವೆಗಳನ್ನು ಮರುಸ್ಥಾಪಿಸುವವರೆಗೆ ವ್ಯವಸ್ಥೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
