
ಹಿಂಸಾಚಾರ ಒಪ್ಪಲು ಸಾಧ್ಯವಿಲ್ಲ,ರೈತರ ಏಳಿಗೆಗೆ ಬದ್ಧ; ಕೃಷಿ ನೀತಿ ಸಮರ್ಥಿಸಿಕೊಂಡ ರಾಷ್ಟ್ರಪತಿ
Team Udayavani, Jan 29, 2021, 11:59 AM IST

ನಾವೀಗ ಕೋವಿಡ್ ವಿರುದ್ಧ ಹೋರಾಟ ನಡೆಸಬೇಕಾದ ಕಾಲಘಟ್ಟದಲ್ಲಿದ್ದೇವೆ.
ನವದೆಹಲಿ:ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ (ಜನವರಿ 29, 2021) ಸಂಸತ್ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಹಿಂಸಾಚಾರವನ್ನು ಖಂಡಿಸಿದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದ ಮೂರು ನೂತನ ಕೃಷಿ ನೀತಿಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ:ಬಹಿರಂಗಗೊಂಡಿದೆ ರಿಯಲ್ ಮಿ ಎಕ್ಸ್ 7 5ಜಿ ಮತ್ತು ರಿಯಲ್ ಮಿ ಎಕ್ಸ್ 7 ಪ್ರೊ 5ಜಿ ಗಳ ಫೀಚರ್ಸ್
ಸುಮಾರು ಏಳು ತಿಂಗಳ ಕಾಲ ಚರ್ಚೆ, ಪರಾಮರ್ಶೆ ನಡೆಸಿದ ನಂತರ ಕೇಂದ್ರ ಸರ್ಕಾರ ಕೃಷಿ ನೀತಿಯನ್ನು ಜಾರಿಗೆ ತಂದಿತ್ತು. ಇದರಿಂದ ಹತ್ತು ಕೋಟಿ ರೈತರಿಗೆ ಲಾಭವಾಗಲಿದೆ. ಈ ಹಿಂದೆ ಹಲವು ರಾಜಕೀಯ ಪಕ್ಷಗಳು ಈ ಕಾಯ್ದೆಯನ್ನು ಬೆಂಬಲಿಸಿದ್ದವು. ಲೋಕಸಭೆಯಲ್ಲಿಯೂ ಮಸೂದೆ ಬಗ್ಗೆ ಚರ್ಚೆಯಾಗಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ಆದೇಶದ ನಂತರ ತಡೆಹಿಡಿಯಲಾಗಿದೆ ಎಂದು ಕೋವಿಂದ್ ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರೈತರ ಹಿತಾಸಕ್ತಿಗೆ, ಅಭಿವೃದ್ಧಿಗೆ ಬದ್ಧವಾಗಿದೆ. ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರವನ್ನು ನಡೆಸುವುದು ಒಪ್ಪಲು ಸಾಧ್ಯವಿಲ್ಲ ಎಂದು ಜಂಟಿ ಅಧಿವೇಶನದಲ್ಲಿ ತಿಳಿಸಿದರು.
ನಾವೀಗ ಕೋವಿಡ್ ವಿರುದ್ಧ ಹೋರಾಟ ನಡೆಸಬೇಕಾದ ಕಾಲಘಟ್ಟದಲ್ಲಿದ್ದೇವೆ. ನಾವು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಸಾವಿರಾರು ನಾಗರಿಕರನ್ನು ಕಳೆದುಕೊಂಡಿದ್ದೇವೆ. ಕೋವಿಡ್ ನಿಂದಾಗಿ ಆರು ಜನ ಸಂಸದರು ನಿಧನರಾಗಿದ್ದು, ಇವರೆಲ್ಲರಿಗೂ ನಾನು ಸಂತಾಪ ಸೂಚಿಸುವುದಾಗಿ ಹೇಳಿದರು.
ಇಡೀ ಜಗತ್ತನ್ನೇ ಕೋವಿಡ್ ಸೋಂಕು ಬೆಚ್ಚಿಬೀಳಿಸಿದ್ದು ನಮ್ಮ ಸರ್ಕಾರ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಂಡು ಲಕ್ಷಾಂತರ ಜನರ ಪ್ರಾಣ ಉಳಿಸಿರುವ ಬಗ್ಗೆ ಸಂತೃಪ್ತಿ ಇದೆ. ಇಂದು ಕೋವಿಡ್ ಸೋಂಕಿನ ಸಂಖ್ಯೆ ಶೀಘ್ರ ಇಳಿಕೆಯಾಗುತ್ತಿದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ರಾಷ್ಟ್ರಪತಿ ಕೋವಿಂದ್ ತಿಳಿಸಿದರು.
ಟಾಪ್ ನ್ಯೂಸ್
