
ನಾಳೆ ಭೋಪಾಲಕ್ಕೆ ಪ್ರಧಾನಿ ಭೇಟಿ: ಕಾನ್ಫರೆನ್ಸ್ ನಲ್ಲಿ ಭಾಗಿ
Team Udayavani, Mar 31, 2023, 6:20 AM IST

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.1ರಂದು ಭೋಪಾಲದಲ್ಲಿ ಆಯೋಜಿಸಲಾಗಿರುವ ಸೇನಾಪಡೆಗಳ ಕಂಬೈನ್ಡ ಕಮಾಂಡರ್ಸ್ ಕಾನ್ಫರೆನ್ಸ್ -2023ರಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಮಾ.30ರಿಂದ ಏ.1ರ ವರೆಗೆ ಈ ಸಮ್ಮೇಳನ ನಡೆಯಲಿದೆ. ರಾಷ್ಟ್ರೀಯ ಭದ್ರತೆ, ಸೇನಾಪಡೆಗಳ ಆಧುನೀಕರಣ, ಮೂರೂ ಪಡೆಗಳ ಏಕೀಕೃತ ಘಟಕ (ಥಿಯೇಟರೈಸೇಷನ್) ಬಗ್ಗೆ ಅದರಲ್ಲಿ ಚರ್ಚಿಸಲಾಗುತ್ತದೆ.ಇದಲ್ಲದೆ ಭೋಪಾಲದ ರಾಣಿ ಕಮಲಾಪತಿ ನಿಲ್ದಾಣದಿಂದ ನವದೆಹಲಿ ರೈಲು ನಿಲ್ದಾಣದ ನಡುವೆ ನೂತನವಾಗಿ ಆರಂಭವಾಗಲಿರುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಇದು ದೇಶದಲ್ಲಿ ಸಂಚರಿಸಲಿರುವ ಹನ್ನೊಂದನೇ ವಂದೇ ಭಾರತ್ ರೈಲು ಆಗಿರಲಿದೆ.
ಟಾಪ್ ನ್ಯೂಸ್
