
ಜರ್ನಲ್‌ಗಳಲ್ಲಿ ಪಿಎಚ್‌ಡಿ ಪ್ರಬಂಧ ಪ್ರಕಟ ಕಡ್ಡಾಯ ಅಲ್ಲ
ಯುಜಿಸಿಯ ಹೊಸ ನಿಯಮದಲ್ಲಿ ಉಲ್ಲೇಖ
Team Udayavani, Nov 10, 2022, 7:40 AM IST

ನವದೆಹಲಿ: ಯುಜಿಸಿಯ ಹೊಸ ನಿಯಮ ಪ್ರಕಾರ ಪಿಎಚ್‌ಡಿಯ ಅಂತಿಮ ಥಿಸೀಸ್ ಸಲ್ಲಿಕೆಯ ಮೊದಲು ನಿಯತಕಾಲಿಕಗಳಲ್ಲಿ ಕಡ್ಡಾಯವಾಗಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು ಎಂದಿದ್ದ ನಿಯಮವನ್ನು ರದ್ದುಗೊಳಿಸಲಾಗಿದೆ.
ಇದುವೆರಗೂ, ಅಂತಿಮ ಥಿಸೀಸ್ ಸಲ್ಲಿಕೆಯ ಮೊದಲು ಎಂ.ಫಿಲ್ ವಿದ್ಯಾರ್ಥಿಗಳು ಕಾನ್ಫರೆನ್ಸ್ ಅಥವಾ ಸೆಮಿನಾರ್‌ನಲ್ಲಿ ಕನಿಷ್ಠ ಒಂದು ಸಂಶೋಧನಾ ಪ್ರಬಂಧವನ್ನು ಮಂಡಿಸಬೇಕಿತ್ತು. ಇದೇ ರೀತಿ ಪಿ.ಎಚ್‌ಡಿ ವಿದ್ಯಾರ್ಥಿಗಳು ಕಾನ್ಫರೆನ್ಸ್ ಅಥವಾ ಸೆಮಿನಾರ್‌ನಲ್ಲಿ ಕನಿಷ್ಠ ಎರಡು ಸಂಶೋಧನಾ ಪ್ರಬಂಧಗಳ ಮಂಡನೆ, ಒಂದು ಸಂಶೋಧನಾ ಪ್ರಬಂಧವನ್ನು ನಿಯತಕಾಲಿಕದಲ್ಲಿ ಪ್ರಕಟಿಸಬೇಕಿತ್ತು.
“ಕಡ್ಡಾಯ ಪ್ರಕಟಣೆಯ ಅಗತ್ಯವನ್ನು ರದ್ದುಪಡಿಸುವ ಮೂಲಕ ಯುಜಿಸಿಯು ಒಂದೇ ವಿಧಾನವು ಎಲ್ಲದಕ್ಕೂ ಅಪೇಕ್ಷಣೀಯವಲ್ಲ ಎಂದು ಗುರುತಿಸಿದೆ. ಎಲ್ಲಾ ವಿಭಾಗಗಳಿಗೂ ಒಂದೇ ರೀತಿಯ ನಿಯಮಗಳು ಸರಿಹೊಂದುವುದಿಲ್ಲ. ಉದಾಹರಣೆಗೆ ಕಂಪ್ಯೂಟರ್ ವಿಜ್ಞಾನದಲ್ಲಿ ಅನೇಕ ಪಿ.ಎಚ್‌ಡಿ ವಿದ್ಯಾರ್ಥಿಗಳು ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧವನ್ನು ಪ್ರಕಟಿಸುವುದಕ್ಕಿಂತ ಹೆಚ್ಚಾಗಿ ಕಾನ್ಫರೆನ್ಸ್‌ಗಳಲ್ಲಿ ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಲು ಬಯಸುತ್ತಾರೆ,’ ಎಂದು ಯುಜಿಸಿ ಅಧ್ಯಕ್ಷ ಪ್ರೊ. ಎಂ.ಜಗದೀಶ ಕುಮಾರ್ ಹೇಳಿದರು.
4 ವರ್ಷದ ಪದವಿ ಪಡೆದವರಿಗೂ ಅವಕಾಶ
ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಕನಿಷ್ಠ ಸರಾಸರಿ ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್(ಸಿಜಿಪಿಎ) 7.5 ಹೊಂದಿರುವ ನಾಲ್ಕು ವರ್ಷದ ಪದವೀಧರರು ಕೂಡ ಪಿ.ಎಚ್‌ಡಿ ಪ್ರವೇಶಕ್ಕೆ ಅರ್ಹರು. ಜತೆಗೆ ವೃತ್ತಿಪರರು ಅರೆಕಾಲಿಕಾ ಸಂಶೋಧನಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಇನ್ನೊಂದೆಡೆ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‌ಇಟಿ)/ಜೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‌ಎಫ್) ಹೊಂದಿರುವವರಿಗೆ ಶೇ.60ರಷ್ಟು ಸೀಟುಗಳನ್ನು ಕಾಯ್ದಿರಿಸುವ ಪ್ರಸ್ತಾವನೆಯನ್ನು ಯುಜಿಸಿ ಕೈಬಿಟ್ಟಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್