ಪುಣೆ: ಎರಡು ವರ್ಷಗಳಿಂದ ನಾಯಿಗಳ ಕೋಣೆಯಲ್ಲಿ 11 ವರ್ಷದ ಮಗನನ್ನು ಕೂಡಿಟ್ಟ ತಂದೆ – ತಾಯಿ.!
Team Udayavani, May 15, 2022, 12:11 PM IST
ಪುಣೆ: ಕಳೆದ ಎರಡು ವರ್ಷಗಳ ಕಾಲ ಪುತ್ರನನ್ನು ನಾಯಿಗಳೊಂದಿಗೆ ಮನೆ ಕೋಣೆಯಲ್ಲಿ ಕೂಡಿಟ್ಟ ದಂಪತಿ ವಿರುದ್ಧ ಪುಣೆ ಮಹಾನಗರ ಪಾಲಿಕೆ ಮತ್ತು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಮನೆಯಲ್ಲಿದ್ದ 15 ನಾಯಿಗಳನ್ನು ಅನಿಮಲ್ ಶೆಲ್ಟರ್ ಹೋಮ್‌ಗೆ ಸಾಗಿಸಲಾಗಿದೆ. 3 ನಾಯಿಗಳು ಶವವಾಗಿ ಪತ್ತೆಯಾಗಿವೆ. ಲಾಡೋರಿಯಾ ದಂಪತಿಗೆ ಸೇರಿದ ಈ ಮನೆಯಲ್ಲಿ 10 ಚೀಲ ಕಸ ಪತ್ತೆಯಾಗಿದ್ದು, ಬಾಲಕನ ಹೆತ್ತವರನ್ನು ಪೊಲೀಸರು ಬಂಧಿಸಿದ್ದಾರೆ.
ದಂಪತಿ ತಮ್ಮ ಪುತ್ರನನ್ನು 18 ಬೀದಿ ನಾಯಿಗಳಿರುವ ಕೋಣೆಯಲ್ಲಿ ಎರಡು ವರ್ಷಗಳ ಕಾಲ ಇರಿಸಿದ್ದರು. ನಾಯಿಗಳ ಜತೆ ಬಂಧಿಯಾಗಿ ಜೀವನ ನಡೆಸುತ್ತಿರುವ ಬಾಲಕನ ಬಗ್ಗೆ ಚೈಲ್ಡ್ ಲೈನ್ ಮೂಲಕ ಪೊಲೀಸರಿಗೆ ಮಾಹಿತಿ ತಿಳಿದು ಕೊಂಡ್ವಾದಲ್ಲಿನ ಕುಶ್ನೈ ಕಟ್ಟಡದಲ್ಲಿರುವ ಮನೆಗೆ ತಲುಪಿದಾಗ ಮನೆಯೊಳಗಿಂದ ನಾಯಿಗಳ ಬೊಗಳುವಿಕೆ ಜೋರಾಗಿತ್ತು.
ಮನೆಯ ಬೀಗ ಒಡೆದಾಗ ಒಳಗಡೆ ದುರ್ವಾಸನೆ ಮತ್ತು 18 ನಾಯಿಗಳೊಂದಿಗೆ 11 ವರ್ಷದ ಬಾಲಕ ಪತ್ತೆಯಾಗಿದ್ದ. ಆಹಾರದ ಕೊರತೆಯಿಂದ ನಿಶ್ಯಕ್ತಿಯಾಗಿದ್ದ ಬಾಲಕನ ಸ್ಥಿತಿ ಶೋಚನೀಯವಾಗಿತ್ತು. ಬಾಲಕ ಪ್ರಾಣಿಯಂತೆ ವರ್ತಿಸುತ್ತಿದ್ದ. ಬಾಲಕನನ್ನು ಪೊಲೀಸರು ಮತ್ತು ಚೈಲ್ಡ್ ಲೈನ್ ಸಿಬಂದಿ ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ ಎಂದು ಕೊಂಡ್ವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಸರ್ದಾರ್ ಪಾಟೀಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೇಶದ ಬಗ್ಗೆ ಕಾಳಜಿ ಹೊಂದದ ಜನರಿಂದ ಏನನ್ನೂ ನಿರೀಕ್ಷಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ
ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವು
ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನ
ಮುಂಬೈ: ಬೊರಿವಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ರಕ್ಷಣಾ ಕಾರ್ಯಾಚರಣೆ
ನಾನು ಸೇನೆಗೆ ಸೇರಲು ಬಯಸಿದ್ದೆ ಆದರೆ ಸಾಧ್ಯವಾಗಲಿಲ್ಲ: ರಕ್ಷಣಾ ಸಚಿವ ಸಿಂಗ್