ಕೋವಿಡ್ 19 ಸೋಂಕಿತ ವ್ಯಕ್ತಿ ಸಾವು; ಈತನಿಂದ 23 ಜನರಿಗೆ ಸೋಂಕು, 15 ಗ್ರಾಮಗಳಿಗೆ ದಿಗ್ಭಂಧನ!

ಈತ ಮಾರ್ಚ್ 8-10ರಂದು ಆನಂದ್ ಪುರ್ ಸಾಹೀಬ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ವರದಿ ತಿಳಿಸಿದೆ

Team Udayavani, Mar 27, 2020, 6:08 PM IST

ಕೋವಿಡ್ 19 ಸೋಂಕಿತ ವ್ಯಕ್ತಿ ಸಾವು; ಈತನಿಂದ 23 ಜನರಿಗೆ ಸೋಂಕು, 15 ಗ್ರಾಮಗಳಿಗೆ ದಿಗ್ಭಂಧನ

Representative Image

ಚಂಡೀಗಢ್(ಪಂಜಾಬ್): ವಿದೇಶ ಪ್ರಯಾಣ ಮಾಡಿ ಬಂದ ಪಂಜಾಬ್ ವ್ಯಕ್ತಿಯೊಬ್ಬ ಶುಕ್ರವಾರ ಸಾವನ್ನಪ್ಪಿದ್ದು, ಈ ವ್ಯಕ್ತಿ ಬರೋಬ್ಬರಿ 23 ಜನರಿಗೆ ರೋಗ ಹಬ್ಬಿಸಿದ್ದು, ಸುಮಾರು ನೂರು ಜನರನ್ನು ಭೇಟಿಯಾಗಿದ್ದ. ಅಷ್ಟೇ ಅಲ್ಲ ಈತನ ಜತೆಗೆ ತೆರಳಿದ್ದ ಇಬ್ಬರು ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದ ಪರಿಣಾಮ 15 ಗ್ರಾಮಗಳಿಗೆ ದಿಗ್ಭಂಧನ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಗುರುದ್ವಾರದ 70ವರ್ಷದ ಗುರುವೊಬ್ಬರು ಎರಡು ವಾರಗಳ ಜರ್ಮನಿ ಮತ್ತು ಇಟಲಿ ಪ್ರವಾಸದಿಂದ ವಾಪಸ್ ಆಗಿದ್ದರು. ಇವರ ಜತೆಗೆ ನೆರೆಯ ಗ್ರಾಮದ ಇಬ್ಬರು ಸ್ನೇಹಿತರು ಇದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾನೂನು ಪ್ರಕಾರ ಸ್ವಯಂ ಕ್ವಾರಂಟೈನ್ ಆಗಿದ್ದರು. ಇವರು ಮಾರ್ಚ್ 6ಕ್ಕೆ ದಿಲ್ಲಿಗೆ ಬಂದಿದ್ದು ನಂತರ ಪಂಜಾಬ್ ಗೆ ಆಗಮಿಸಿದ್ದರು.

ಮಾರ್ಚ್ 18ರಂದು ಈ ಕೋವಿಡ್ ಪೀಡಿತ ಗುರು ಸಾವನ್ನಪ್ಪಿದ್ದು, ಇದೀಗ ಈ ವ್ಯಕ್ತಿಯಿಂದಾಗಿ 23 ಜನರಿಗೆ ಸೋಂಕು ತಗುಲಿದ್ದು, ಸುಮಾರು ನೂರು ಜನರನ್ನು ಭೇಟಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈತ ಮಾರ್ಚ್ 8-10ರಂದು ಆನಂದ್ ಪುರ್ ಸಾಹೀಬ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ವರದಿ ತಿಳಿಸಿದೆ.

ಕೋವಿಡ್ 19 ವೈರಸ್ ಪಾಸಿಟಿವ್ ಎಂದು ವರದಿ ಬರುವ ಮೊದಲೇ ಸುಮಾರು ನೂರು ಮಂದಿಯನ್ನು ಭೇಟಿಯಾಗಿದ್ದರು. ಈ ವ್ಯಕ್ತಿಯ ಜತೆಗೆ ತೆರಳಿದ್ದ ಇಬ್ಬರು ಸ್ನೇಹಿತರು ರಾಜ್ಯದ 15 ಗ್ರಾಮಗಳಿಗೆ ಭೇಟಿ ನೀಡಿದ್ದರು ಎಂದು ವರದಿ ವಿವರಿಸಿದೆ.

ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವ ವ್ಯಕ್ತಿಯ ಕುಟುಂಬದ 14 ಸದಸ್ಯರಿಗೂ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಎಂದು ಬಂದಿದೆ. ಈ ವ್ಯಕ್ತಿಯ ಮೊಮ್ಮಗಳು, ಮೊಮ್ಮಗ ಕೂಡಾ ಹಲವಾರು ಜನರನ್ನು ಭೇಟಿಯಾಗಿ ಮಾತನಾಡಿದ್ದರು.

ಈ ಹಿನ್ನೆಲೆಯಲ್ಲಿ ಮೂವರು ವ್ಯಕ್ತಿಗಳು ಎಲ್ಲೆಲ್ಲಾ ಹೋಗಿದ್ದರು, ಯಾರನ್ನೆಲ್ಲಾ ಭೇಟಿಯಾಗಿದ್ದರು ಎಂಬ ಬಗ್ಗೆ ಪತ್ತೆಹಚ್ಚಲು ಅಧಿಕಾರಿಗಳು ಗ್ರಾಮ, ಗ್ರಾಮಕ್ಕೆ ತೆರಳುತ್ತಿದ್ದಾರೆ. 15 ಗ್ರಾಮಗಳಿಗೆ ದಿಗ್ಭಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂವರು ವ್ಯಕ್ತಿಗಳಿಂದಾಗಿ ನವಾನ್ ಶಾಹ್ರ, ಮೋಹಾಲಿ, ಅಮೃತ್ ಸರ್, ಹೋಶಿಯಾರ್ ಪುರ್ ಹಾಗೂ ಜಲಂಧರ್ ನಲ್ಲಿ ಕೋವಿಡ್ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಲು ಕಾರಣರಾಗಿದ್ದಾರೆ ಎಂದು ಶಂಕಿಸಲಾಗಿದೆ. ಈಗಾಗಲೇ ಭಾರತದಲ್ಲಿ ಕೋವಿಡ್ 19 ಪೀಡಿತರ ಸಂಖ್ಯೆ 700ಕ್ಕೆ ಏರಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

ರಸ್ತೆ ಅಪಘಾತ: ಕಾರು ಢಿಕ್ಕಿ: ಬೈಕ್‌ ಸವಾರ ಸಾವು

ರಸ್ತೆ ಅಪಘಾತ: ಕಾರು ಢಿಕ್ಕಿ: ಬೈಕ್‌ ಸವಾರ ಸಾವು

ಉಳ್ಳಾಲ: ಸಮುದ್ರಪಾಲಾದ ಮೈಸೂರು ಮೂಲದ ಮಹಿಳೆ

ಉಳ್ಳಾಲ: ಸಮುದ್ರಪಾಲಾದ ಮೈಸೂರು ಮೂಲದ ಮಹಿಳೆ

ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ: ಪ್ರಧಾನಿ ನರೇಂದ್ರ ಮೋದಿ

ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ: ಪ್ರಧಾನಿ ನರೇಂದ್ರ ಮೋದಿ

ಪೊಲೀಸರೊಂದಿಗೆ ಯುವಕರ ತಂಡ : ಮಂಗಳೂರಿನಿಂದ ಆರಂಭ

ಪೊಲೀಸರೊಂದಿಗೆ ಯುವಕರ ತಂಡ : ಮಂಗಳೂರಿನಿಂದ ಆರಂಭ

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸ್ಮರಣೆ ಅಗತ್ಯ: ನಳಿನ್‌ ಕುಮಾರ್‌

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸ್ಮರಣೆ ಅಗತ್ಯ : ನಳಿನ್‌ ಕುಮಾರ್‌

“ಸಿದ್ದುಗೆ ಮತ್ತೆ ಸಿಎಂ ಆಗುವ ಹುಚ್ಚು ಆಸೆ’ : ನಳಿನ್‌ ಕುಮಾರ್‌ ಕಟೀಲು

“ಸಿದ್ದುಗೆ ಮತ್ತೆ ಸಿಎಂ ಆಗುವ ಹುಚ್ಚು ಆಸೆ’ : ನಳಿನ್‌ ಕುಮಾರ್‌ ಕಟೀಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ: ಪ್ರಧಾನಿ ನರೇಂದ್ರ ಮೋದಿ

ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ: ಪ್ರಧಾನಿ ನರೇಂದ್ರ ಮೋದಿ

4 ದಿನಗಳಲ್ಲಿ 12 ಉಗ್ರರ ಸಂಹಾರ; ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ

4 ದಿನಗಳಲ್ಲಿ 12 ಉಗ್ರರ ಸಂಹಾರ; ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ

ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ

ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ

ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’

ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’

pramod-sawanth

ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್

MUST WATCH

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

ಹೊಸ ಸೇರ್ಪಡೆ

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

ರಸ್ತೆ ಅಪಘಾತ: ಕಾರು ಢಿಕ್ಕಿ: ಬೈಕ್‌ ಸವಾರ ಸಾವು

ರಸ್ತೆ ಅಪಘಾತ: ಕಾರು ಢಿಕ್ಕಿ: ಬೈಕ್‌ ಸವಾರ ಸಾವು

ಉಳ್ಳಾಲ: ಸಮುದ್ರಪಾಲಾದ ಮೈಸೂರು ಮೂಲದ ಮಹಿಳೆ

ಉಳ್ಳಾಲ: ಸಮುದ್ರಪಾಲಾದ ಮೈಸೂರು ಮೂಲದ ಮಹಿಳೆ

ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ: ಪ್ರಧಾನಿ ನರೇಂದ್ರ ಮೋದಿ

ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ: ಪ್ರಧಾನಿ ನರೇಂದ್ರ ಮೋದಿ

ಪೊಲೀಸರೊಂದಿಗೆ ಯುವಕರ ತಂಡ : ಮಂಗಳೂರಿನಿಂದ ಆರಂಭ

ಪೊಲೀಸರೊಂದಿಗೆ ಯುವಕರ ತಂಡ : ಮಂಗಳೂರಿನಿಂದ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.