ಪುತಿನ್‌ ಗೆಲ್ಲುವ ಸಾಧ್ಯತೆ ಹೆಚ್ಚು; ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮುನ್ನೆಚ್ಚರಿಕೆ

Team Udayavani, Apr 23, 2022, 8:15 AM IST

ಪುತಿನ್‌ ಗೆಲ್ಲುವ ಸಾಧ್ಯತೆ ಹೆಚ್ಚು; ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮುನ್ನೆಚ್ಚರಿಕೆ

ಹೊಸದಿಲ್ಲಿ/ಕೀವ್‌: ಉಕ್ರೇನ್‌-ರಷ್ಯಾ ಯುದ್ಧ 2023ರ ಅಂತ್ಯದವರೆಗೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿದ್ದಾರೆ. ಹೊಸದಿಲ್ಲಿ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಲಭ್ಯವಾಗಿರುವ ಗುಪ್ತಚರ ಮಾಹಿತಿಗಳ ಪ್ರಕಾರ ಮುಂದಿನ ವರ್ಷದ ಅಂತ್ಯದವರೆಗೆ ರಷ್ಯಾ ದಾಳಿ ಮುಂದುವರಿ ಯಲಿದೆ.

ಪುತಿನ್‌ ಬಳಿ ದೊಡ್ಡ ಸಂಖ್ಯೆಯ ಸೇನಾ ಪಡೆಯಿದೆ. ಹೀಗಾಗಿ ಅವರೇ ಜಯ ಸಾಧಿಸುವ ಸಾಧ್ಯತೆಯಿದೆ. ರಾಜಕೀಯ ವಾಗಿಯೂ ರಷ್ಯಾ ಅಧ್ಯಕ್ಷರು ತಪ್ಪೆಸಗಿದ್ದಾರೆ ಎಂದರು. ಪುತಿನ್‌ ಗೆದ್ದರೂ, ಉಕ್ರೇನಿಗರ ಕೆಚ್ಚನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿ­ಸಿದ್ದಾರೆ. ಮುಂದಿನ ವಾರ ಉಕ್ರೇನ್‌ನ ಕೀವ್‌ನಲ್ಲಿ ಬ್ರಿಟನ್‌ನ ರಾಯಭಾರ ಕಚೇರಿ­ಯನ್ನು ಮತ್ತೆ ತೆರೆಯಲಾಗುತ್ತದೆ ಎಂದರು.

ಆರ್ಥಿಕ ಅಪರಾಧಿಗಳ ಕುರಿತು ಚರ್ಚೆ: ಉಭಯ ಪ್ರಧಾನಿಗಳ ಮಾತುಕತೆ ವೇಳೆ ನೀರವ್‌ ಮೋದಿ, ವಿಜಯ್‌ ಮಲ್ಯ ಸೇರಿದಂತೆ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತಂದು ಶಿಕ್ಷೆಗೆ ಒಳಪಡಿಸುವುದು ನಮ್ಮ ಉದ್ದೇಶ ಎಂದು ಭಾರತ ತಿಳಿಸಿದೆ ಎಂದು ವಿದೇಶಾಂಗ ಕಾರ್ಯ ದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ ಹೇಳಿದ್ದಾರೆ. ನೆಲ, ಸಮುದ್ರ, ವಾಯು ಹಾಗೂ ಸೈಬರ್‌ ಮೂಲಕ ಎದುರಾಗುವ ಎಲ್ಲ ಅಪಾಯಗಳನ್ನೂ ಎರಡೂ ದೇಶಗಳು ಸಮರ್ಥವಾಗಿ ಎದುರಿಸಲು ನಿರ್ಧರಿಸಿವೆ ಎಂದೂ ತಿಳಿಸಿದ್ದಾರೆ.

ಹಲವು ವಿಚಾರಗಳ ಕುರಿತು ಚರ್ಚೆ: ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸು ವಾಗಲೇ ಬೋರಿಸ್‌ ಜಾನ್ಸನ್‌ ಅವರ ಭೇಟಿಯು ಐತಿಹಾಸಿಕ ಎಂದು ಬಣ್ಣಿಸಿರುವ ಮೋದಿ, ದ್ವಿ ಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದ, ಗ್ಲಾಸೊYà ದಲ್ಲಿ ಕೈಗೊಂಡಿದ್ದ ಹವಾಮಾನ ಒಪ್ಪಂದ, ಮುಕ್ತ ಇಂಡೋ-ಪೆಸಿಫಿಕ್‌ ಕುರಿತು ಮಾತುಕತೆ ನಡೆಸಿ ರುವುದಾಗಿ ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಲಾಗಿದೆ.

ನಾನೇ ಸಚಿನ್‌, ಅಮಿತಾಭ್‌ ಅಂದುಕೊಂಡೆ!
ಗುರುವಾರ ಗುಜರಾತ್‌ಗೆ ಬಂದಿಳಿಯುತ್ತಿದ್ದಂತೆ ಸಿಕ್ಕ ಅದ್ದೂರಿ ಸ್ವಾಗತಕ್ಕೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಫಿದಾ ಆಗಿದ್ದಾರೆ. “ನನ್ನನ್ನು ಅಷ್ಟೊಂದು ಪ್ರೀತಿಯಿಂದ ಸ್ವಾಗತಿಸಿದ್ದು ನೋಡಿ, ನಾನೇ ಸಚಿನ್‌ ತೆಂಡೂಲ್ಕರ್‌, ನಾನೇ ಅಮಿತಾಭ್‌ ಬಚ್ಚನ್‌ ಎಂಬ ಭಾವನೆ ಬಂತು’ ಎಂದಿದ್ದಾರೆ ಬೋರಿಸ್‌. “ಅದ್ದೂರಿ ಸ್ವಾಗತ ನೀಡಿದ ಪ್ರಧಾನಿ ಮೋದಿ ಹಾಗೂ ಭಾರತೀಯರಿಗೆ ಧನ್ಯವಾದಗಳು. ಕಣ್ಣು ಹಾಯಿಸಿದಲ್ಲೆಲ್ಲ ನನ್ನ ಪೋಸ್ಟರ್‌ಗಳು, ಕಟೌಟ್‌ಗಳೇ ಕಾಣುತ್ತಿದ್ದವು. ಅದನ್ನು ನೋಡಿದಾಗ ಸಚಿನ್‌, ಅಮಿತಾಭ್‌ ಬೇರ್ಯಾರೂ ಅಲ್ಲ, ಅದು ನಾನೇ ಎಂದು ಭಾಸವಾಯಿತು’ ಎಂದಿದ್ದಾರೆ.

ಸಾಮೂಹಿಕ ಸಮಾಧಿ ಪತ್ತೆ
ಉಕ್ರೇನ್‌ನ ಪೂರ್ವ ಭಾಗದಲ್ಲಿ ರಷ್ಯಾ ದಾಳಿ ಮುಂದುವರಿಸಿರುವಂತೆಯೇ, ಮರಿಯು ಪೋಲ್‌ನಲ್ಲಿ ಸಾಮೂಹಿಕವಾಗಿ ಜನರನ್ನು ಹೂಳಲಾಗಿರುವ ಸ್ಥಳ ಕಂಡು ಬಂದಿದೆ. ಜತೆಗೆ ಕೀವ್‌ನ ಹೊರವಲಯದಲ್ಲಿ ಕೂಡ ಇಂಥದ್ದೇ ಸ್ಥಳಗಳು ಪತ್ತೆಯಾಗಿವೆ. ಉಪಗ್ರಹ ಚಿತ್ರಗಳೂ ಈ ಅಂಶಕ್ಕೆ ಇಂಬು ಕೊಟ್ಟಿವೆ. ಝಪೋರ್‌ಜಿಯಾ ನಗರದ ಸಮೀಪ ಉಕ್ರೇನ್‌ ಸೇನೆಗೆ ಸೇರಿದ ಹೆಲಿಕಾಪ್ಟರ್‌ ಪತನಗೊಂಡಿದೆ. ಈ ಮಧ್ಯೆ ಸತತ ಟೀಕೆಗಳ ನಡುವೆ, ಜರ್ಮನಿ ಸರ್ಕಾರ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ. ಇನ್ನೊಂದೆಡೆ ರಷ್ಯಾದಲ್ಲಿ ಉಕ್ರೇನ್‌ ವಿರುದ್ಧದ ದಾಳಿ ಬಗ್ಗೆ ತಪ್ಪು ಮಾಹಿತಿ ನೀಡುವ ಪ್ರತಿಪಕ್ಷಗಳ ಪ್ರಮುಖ ನಾಯಕರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲು ತೀರ್ಮಾನಿಸಿದೆ.

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.