ಕೇರಳ ಮಹಾ ಮಳೆ: ಸಿಎಂ ನಿಧಿಗೆ ವಂತಿಗೆ ನೀಡಲು ರಾಹುಲ್ ಮನವಿ
Team Udayavani, Aug 16, 2018, 11:59 AM IST
ಹೊಸದಿಲ್ಲಿ : ಇಂದಿನ ವರೆಗೆ ಒಟ್ಟು 79 ಜೀವಗಳನ್ನು ಬಲಿತೆಗೆದುಕೊಂಡಿರುವ ಕೇರಳದ ಮಹಾ ಮಳೆಯಿಂದ ಉಂಟಾಗಿರುವ ಪ್ರಳಯ ಸದೃಶ ಸ್ಥಿತಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಕಳವಳ, ದುಃಖ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಸಂತ್ರಸ್ತ ಕೇರಳಿಗರ ನೆರವಿಗೆ ಎಲ್ಲರೂ ಉದಾರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂತಿಗೆ ನೀಡುವಂತೆ ಕೋರಿರುವ ರಾಹುಲ್ ಗಾಂಧಿ, ತಮ್ಮ ಟ್ವೀಟ್ ಗೆ ಮುಖ್ಯಮಂತ್ರಿ ನಿಧಿಯ ಲಿಂಕ್ ಅನ್ನು ಟ್ಯಾಗ್ ಮಾಡಿದ್ದಾರೆ.