
ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಮಹಿಳೆಯರಿಗೆ ಜಾಗವೇ ಇಲ್ಲ: ರಾಹುಲ್
Team Udayavani, Aug 7, 2018, 4:41 PM IST

ಹೊಸದಿಲ್ಲಿ : ”ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತ ಹೇಗಿದೆ ಎಂದರೆ ಈ ದೇಶವನ್ನು ಕೇವಲ ಪುರುಷರು ಮಾತ್ರವೇ ನಡೆಸಬಲ್ಲರು, ಹೊರತು ಮಹಿಳೆಯರಲ್ಲ ಎಂಬುದೇ ಆಗಿದೆ. ಆದ ಕಾರಣವೇ ಅದು ಮಹಿಳೆಯರಿಗೆ ತನ್ನ ಸಂಸ್ಥೆಗಳ ಬಾಗಿಲನ್ನು ಮುಚ್ಚಿದೆ” ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿಯ ಮಾತುಗಳನ್ನಾಡಿದ್ದಾರೆ.
ದಿಲ್ಲಿಯಲ್ಲಿ ಮಹಿಳಾ ಅಧಿಕಾರ್ ಸಮ್ಮೇಳನ್ ನಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಗೆ ವಿರುದ್ಧವಾದ ಸಿದ್ಧಾಂತವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಸದಾ ಮಹಿಳೆಯರನ್ನು ಸ್ವಾಗತಿಸುತ್ತದೆ. ಆದುದರಿಂದಲೇ ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಗೌರವಿಸುವ, ಆದರಿಸುವ, ಪುರಸ್ಕರಿಸುವ ಪಕ್ಷವಾಗಿದೆ’ ಎಂದು ಹೇಳಿದರು.
ಮಹಿಳೆಯರ ಸಶಕ್ತೀಕರಣದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಮಹಿಳೆಯರಿಗೆ ಎಲ್ಲ ಸ್ತರಗಳಲ್ಲಿ ಶೇ.50ರ ಮೀಸಲಾತಿ ನೀಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಆದುದರಿಂದ ದೇಶದ ಮಹಿಳೆಯರು ಮುಂದೆ ಬಂದು ರಾಷ್ಟ್ರಾಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
‘ಕೇಂದ್ರ ಸರಕಾರ ಕೇವಲ ಭರವಸೆಗಳನ್ನು ಮಾತ್ರವೇ ನೀಡುತ್ತದೆ. ಮಹಿಳಾ ಮೀಸಲಾತಿ ಮಸೂದೆ ಬಹಳ ದೀರ್ಘಕಾಲದಿಂದ ಪಾಸಾಗದೇ ಬಾಕಿ ಉಳಿದಿದೆ’ ಎಂದು ರಾಹುಲ್ ಆರೋಪಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಢಾವೋ ಅಂತಾರೆ; ಇವರು ಯಾರ ಬೇಟಿ ಬಗ್ಗೆ ಮಾತನಾಡುತ್ತಾರೆ ಎಂಬುದೇ ನನಗರ್ಥವಾಗುವುದಿಲ್ಲ. ಈಗ ನೋಡಿದರೆ ನಾವು ಬಿಜೆಪಿ ಶಾಸಕರು, ಸಚಿವರಿಂದಲೇ ನಮ್ಮ ಬೇಟಿಯನ್ನು ನಾವು ರಕ್ಷಿಸಬೇಕಾಗಿದೆ’ ಎಂದು ರಾಹುಲ್ ಕಟಕಿಯಾಡಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Sanatana: ಸನಾತನ ಧರ್ಮದ ನಿರ್ಮೂಲನೆ.. ಪರೋಕ್ಷವಾಗಿ ಉದಯನಿಧಿ ಬೆಂಬಲಿಸಿದ ಕಮಲ್ ಹಾಸನ್

Modi Multiplex: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎಂದ ಕಾಂಗ್ರೆಸ್ ಹಿರಿಯ ನಾಯಕ

Heavy Rain: ನಾಗ್ಪುರದಲ್ಲಿ ವರುಣನ ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Holalkere: ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಗರಿಮೆ ಪುರಸಭೆಯ ಪೌರಕಾರ್ಮಿಕರಿಗೆ ಸಲ್ಲಬೇಕು