ಮಧ್ಯಪ್ರದೇಶ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಬೈಕ್ ಸವಾರಿ…
Team Udayavani, Nov 27, 2022, 12:33 PM IST
ಮಧ್ಯಪ್ರದೇಶ : ಭಾನುವಾರ ಮಧ್ಯಪ್ರದೇಶದ ಮೊವ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೋಟಾರ್‌ಬೈಕ್ ಸವಾರಿ ಮಾಡುವ ಮೂಲಕ ಮತ್ತೊಮ್ಮೆ ಯುವ ಕಾಂಗ್ರೆಸ್ಸಿಗರನ್ನು ಆಕರ್ಷಿಸಿದ್ದಾರೆ.
ಇಂದು ಬೆಳಗ್ಗೆ ಮೊವ್‌ನಿಂದ ತಮ್ಮ ಯಾತ್ರೆ ಪ್ರಾರಂಭಿಸಿದ ರಾಹುಲ್ ಗೆ ಪಕ್ಷದ ಕಾರ್ಯಕರ್ತರು ಸಾಥ್ ನೀಡಿದರು.
ಈ ವೇಳೆ ಬೈಕ್ ಏರಿದ ರಾಹುಲ್ ಕೆಲವು ದೂರದ ವರೆಗೆ ಬೈಕ್ ಚಲಾಯಿಸಿದರು ಈ ಸಂದರ್ಭ ಪಕ್ಷದ ಕಾರ್ಯಕರ್ತರು ಹಾಗೂ ಯುವಕರು ನಾಯಕನ ಉತ್ಸಾಹಕ್ಕೆ ಬೆಂಬಲ ನೀಡಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶನಿವಾರ ಮಧ್ಯಪ್ರದೇಶದ ಮೊರ್ಟಕ್ಕ ಗ್ರಾಮದಿಂದ ಪುನರಾರಂಭವಾಯಿತು. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಯಾತ್ರೆಯ ವೇಳೆ ಬಿದ್ದು ಗಾಯಗೊಂಡು ಕೆಲಕಾಲ ಯಾತ್ರೆ ಸ್ಥಗಿತಗೊಳಿಸಲಾಗಿತ್ತು, ಬಳಿಕ ಯಾತ್ರೆಯನ್ನು ಮುಂದುವರೆಸಲಾಯಿತು.
#WATCH | Congress MP Rahul Gandhi rides a motorbike during the ‘Bharat Jodo Yatra’ in Mhow, Madhya Pradesh. pic.twitter.com/TNG1yvwKbo
— ANI (@ANI) November 27, 2022
ಬೀದಿನಾಯಿಗಳ ಸಂರಕ್ಷಣೆಯಲ್ಲಿ ತೊಡಗಿರುವ ವ್ಯಕ್ತಿಗಳಿಬ್ಬರು ತಮ್ಮ ಸಾಕುನಾಯಿ ಮಾರ್ವೆಲ್‌ನೊಂದಿಗೆ ಬೈಕ್ ನಲ್ಲಿ ಆಗಮಿಸಿ ಯಾತ್ರೆಯಲ್ಲಿ ಪಾಲ್ಗೊಂ ಡಿದ್ದರು. ಬಳಿಕ ರಾಹುಲ್ ಜತೆಗೆ ಮಾತುಕತೆ ನಡೆಸಿದ ರಜತ್ ಪರಾಶರ್ ಮತ್ತು ಸಾರ್ಥಕ್, “ರಸ್ತೆಗಳಲ್ಲಿ ಪ್ರಾಣಿಗಳ ಸಾವು, ಪ್ರಾಣಿ ಕ್ಷೇಮಾಭಿವೃದ್ಧಿ’ ಕುರಿತು ಸಮಾಲೋಚನೆ ಯನ್ನೂ ನಡೆಸಿದರು. ಬಳಿಕ ಅವರ ಬೈಕ್ ಮೇಲೆ ಹತ್ತಿ ಕುಳಿತ ರಾಹುಲ್, ಹಿಂದೆ ಮಾರ್ವೆಲ್‌ನನ್ನು ಕೂರಿಸಿಕೊಂಡು, ಹೆಲ್ಮೆಟ್ ಧರಿಸಿಕೊಂಡು ಸ್ವಲ್ಪ ದೂರದವರೆಗೆ ಬೈಕ್ ಓಡಿಸಿದರು.
ಬೆನ್ನಿಗೆ ಚೂರಿ: ಇನ್ನು ಜೋಡೋ ಯಾತ್ರೆ ವೇಳೆ ಸಂವಿಧಾನದ ಕುರಿತು ಪ್ರಸ್ತಾವಿಸುತ್ತಾ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್ ಗಾಂಧಿ, “ಸಂಘ ಪರಿವಾರವು ಸಂವಿಧಾನದ ಕತ್ತುಹಿಸುಕುವ ಕೆಲಸ ಮಾಡುತ್ತಿದೆ. ದಲಿತರನ್ನು ಓಲೈಸುವ ಸಲುವಾಗಿ ಆರೆಸ್ಸೆಸ್-ಬಿಜೆಪಿಯವರು ಡಾ| ಬಿ.ಆರ್. ಅಂಬೇಡ್ಕರ್ ಮುಂದೆ ಕೈಮುಗಿಯುತ್ತಾರೆ. ಆದರೆ ವಾಸ್ತವದಲ್ಲಿ ಅವರು ಅಂಬೇ ಡ್ಕರ್‌ರ ಬೆನ್ನಿಗೇ ಚೂರಿ ಹಾಕುತ್ತಾರೆ. ಮಹಾತ್ಮಾ ಗಾಂಧೀಜಿಯ ವಿಚಾರದಲ್ಲೂ ಬಿಜೆಪಿ-ಆರೆಸ್ಸೆಸ್ ಇದನ್ನೇ ಮಾಡು ತ್ತಿದೆ. ಒಂದು ಕಡೆ ಮಹಾ ತ್ಮನ ಹಂತಕ ಗೋಡ್ಸೆಯನ್ನು ಬೆಂಬಲಿಸುತ್ತವೆ, ಮತ್ತೂಂದೆಡೆ ಗಾಂಧೀಜಿಗೆ ಗೌರವ ಕೊಟ್ಟಂತೆ ನಟಿಸುತ್ತದೆ’ ಎಂದು ಕಿಡಿಕಾರಿದರು.
ಇದೇ ವೇಳೆ ರಾಹುಲ್ ಅವರಿಗೆ ಯಶ್ ರಾಜ್ ಪಾರ್ಮರ್ ಎಂಬ ಬಾಲಕ ತಾನು ಸಂಗ್ರಹಿಸಿ ಇರಿಸಿದ್ದ ಹಣವನ್ನು ನೀಡಿ, ಅದನ್ನು ಯಾತ್ರೆಗಾಗಿ ಬಳಸುವಂತೆ ಮನವಿ ಮಾಡಿದ್ದಾನೆ. ಅದನ್ನು ಮೆಚ್ಚಿ ಟ್ವೀಟ್ ಮಾಡಿರುವ ರಾಹುಲ್ “ತ್ಯಾಗ ಮತ್ತು ಸ್ವಾರ್ಥ ರಹಿತ ಜೀವನವನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳಬೇಕು’ ಎಂದು ಬರೆದು ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
MUST WATCH
ಹೊಸ ಸೇರ್ಪಡೆ
ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ