ಬುಲೆಟ್ ಪ್ರೂಫ್ ಕಾರಲ್ಲಿ ಯಾತ್ರೆ ಸಾಧ್ಯವೇ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ
Team Udayavani, Jan 1, 2023, 7:15 AM IST
ನವದೆಹಲಿ: “ನಾನು ಬುಲೆಟ್ ಪ್ರೂಫ್ ಕಾರಿನಲ್ಲಿ ಕುಳಿತು ಭಾರತ್ ಜೋಡೋ ಯಾತ್ರೆ ಮಾಡಲು ಸಾಧ್ಯವೇ? ಇದೊಂದು ಪಾದಯಾತ್ರೆ. ಕಾರಿನಲ್ಲಿ ಕುಳಿತು ಸಂಚರಿಸಿದರೆ ಅದು ಭಾರತ್ ಜೋಡೋ ಯಾತ್ರೆ ಆಗುತ್ತದೆಯೇ?’
ಭದ್ರತಾ ಶಿಷ್ಟಾಚಾರ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಪ್ರಶ್ನೆಯನ್ನು ಹಾಕಿದ್ದಾರೆ. ಜತೆಗೆ, ಬಿಜೆಪಿಯ ಹಲವು ನಾಯಕರು ಬುಲೆಟ್ ಪ್ರೂಫ್ ಕಾರನ್ನು ಬಿಟ್ಟು, ಶಿಷ್ಟಾಚಾರ ಉಲ್ಲಂಘಿಸಿದ ಉದಾಹರಣೆಯನ್ನೂ ಕೊಟ್ಟ ಅವರು, ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದೂ ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್, ದೇಶಾದ್ಯಂತ ಬಿಜೆಪಿ ವಿರುದ್ಧ ತಳಮಟ್ಟದಲ್ಲಿ ದೊಡ್ಡ ಮಟ್ಟದ ಅಲೆ ಎದ್ದಿದೆ. ಜನರಿಗೆ ಪರ್ಯಾಯ ಶಕ್ತಿಯೊಂದರ ಆಯ್ಕೆಗೆ ನೀಡಬೇಕೆಂದರೆ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಬೇಕಾದ ಅವಶ್ಯಕತೆಯಿದೆ. ಹೀಗೆ ಮಾಡಿದರೆ ಮಾತ್ರ 2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಸೋಲುಣಿಸಲು ಸಾಧ್ಯ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಸೆ.7ರಂದು ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭವಾದ ಬಳಿಕ ಅವರು ಮಾಡಿದ 9ನೇ ಸುದ್ದಿಗೋಷ್ಠಿ ಇದಾಗಿದೆ.