ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

Team Udayavani, May 28, 2019, 5:20 PM IST

ಪಟ್ನಾ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಆಲೋಚನೆಯು ಆತ್ಮಾಹುತಿಯದ್ದಾಗಿರುತ್ತದೆ ಮತ್ತು ಅದರಿಂದ ಅವರು ಬಿಜೆಪಿಯ ಖೆಡ್ಡಾಕ್ಕೆ ಬಿದ್ದಂತಾಗುತ್ತದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ.

ರಾಹುಲ್‌ ಸ್ಥಾನಕ್ಕೆ ಬರುವ ಯಾವುದೇ ವ್ಯಕ್ತಿಯನ್ನು ಜನರು, ರಾಹುಲ್‌ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈಗೊಂಬೆ ಎಂದೇ ಪರಿಗಣಿಸುತ್ತಾರೆ ಮತ್ತು ಇದೇ ಭಾವನೆ ಮುಂದಿನ ಮಹಾ ಚುನಾವಣೆಯ ವರೆಗೂ ಇರುತ್ತದೆ ಎಂಬ ಎಚ್ಚರಿಕೆಯನ್ನು ಆರ್‌ ಜೆ ಡಿ ಅಧ್ಯಕ್ಷ ಲಾಲು ನೀಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರದಿಂದ ಪಕ್ಷಕ್ಕೆ ಮಾತ್ರವಲ್ಲದೆ, ಸಂಘ ಪರಿವಾರದ ವಿರುದ್ಧ ಹೋರಾಡುವ ಸಾಮಾಜಿಕ ಮತ್ತು ರಾಜಕೀಯ ಶಕ್ತಿಗಳಿಗೆ ಕೂಡ ದೊಡ್ಡ ನಷ್ಟವಾಗಿರುತ್ತದೆ ಎಂದು ಲಾಲು ಹೇಳಿದ್ದಾರೆ.

ಲಾಲು ವಿಶ್ಲೇಷಣೆ ಇಂಗ್ಲಿಷ್‌ ದೈನಿಕದಲ್ಲಿ ಪ್ರಕಟವಾಗಿದ್ದು ಅದರ ಲಿಂಕ್‌ ಅನ್ನು ಲಾಲು ಅವರು ತಮ್ಮ ಟ್ವಿಟರ್‌ ಹ್ಯಾಂಡಲ್‌ ನಲ್ಲಿ ಶೇರ್‌ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ