ರೈಲ್ವೆ: ಆಹಾರಕ್ಕೆ ಸೇವಾಶುಲ್ಕ ರದ್ದು, ಆದರೆ…ಇಲ್ಲೊಂದು ಸಮಸ್ಯೆಯಿದೆ ಏನು ಗೊತ್ತೇ…
Team Udayavani, Jul 20, 2022, 7:05 AM IST
ನವದೆಹಲಿ: ಮುಂಚಿತವಾಗಿ ಬುಕ್ ಮಾಡದ, ಪ್ರಯಾಣದ ವೇಳೆ ರೈಲ್ವೆ ಕೇಟರಿಂಗ್‌ನಿಂದ ಪಡೆದುಕೊಳ್ಳುವ ಆಹಾರ ಪದಾರ್ಥಗಳಿಗೆ 50 ರೂ. ಸೇವಾಶುಲ್ಕ ನೀಡಬೇಕೆಂಬ ರೈಲ್ವೆ ನಿಯಮ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ರೈಲ್ವೆ ಅದಕ್ಕೊಂದು ಪರಿಹಾರ ನೀಡಿದೆ. ಊಟಕ್ಕಾಗಲೀ, ಕಾಫೀ-ಟೀಯನ್ನಾಗಲೀ ಪ್ರಯಾಣದ ವೇಳೆ ಕೇಳಿ ಪಡೆದರೆ ಇನ್ನು ಸೇವಾಶುಲ್ಕ ನೀಡುವ ಅಗತ್ಯವಿಲ್ಲ. ಆಹಾರದ ಬೆಲೆ ಮಾತ್ರ ನೀಡಿದರೆ ಸಾಕು ಎಂದು ಸ್ಪಷ್ಟಪಡಿಸಿದೆ.
ಆದರೆ ಇಲ್ಲೊಂದು ಸಮಸ್ಯೆಯಿದೆ. ಸೇವಾಶುಲ್ಕ ತೆಗೆದುಹಾಕಿದ್ದರೂ ಪ್ರಯಾಣಿಕರು ಊಟಕ್ಕಾಗಲೀ, ಸ್ನ್ಯಾಕ್ಸ್‌ಗಾಗಲೀ ಹೆಚ್ಚುವರಿ 50 ರೂ. ಹಣ ನೀಡಬೇಕು!
ಇದು ಬಿಲ್‌ನಲ್ಲೇ ಸೇರಿಕೊಂಡು ಬರುತ್ತದೆ, ಆದರೆ ಇದಕ್ಕೆ ಸೇವಾಶುಲ್ಕ ಎಂಬ ಹೆಸರಿಲ್ಲ ಅಷ್ಟೇ. ಇವೆಲ್ಲದರ ಒಟ್ಟು ಪರಿಣಾಮ ಕಾಫಿ, ಟೀಗಳಿಗೆ ಮಾತ್ರ ರೈಲ್ವೆಯಿಂದ ಸೇವಾಶುಲ್ಕದ ವಿನಾಯ್ತಿ ಸಿಕ್ಕಿದೆ.
ಉಳಿದ ಆಹಾರ ಪದಾರ್ಥಗಳನ್ನು ದಿಢೀರ್ ಪಡೆದರೆ ಬೇರೊಂದು ರೂಪದಲ್ಲಿ 50 ರೂ. ಪಾವತಿಸಲೇಬೇಕು.